Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಕೀಮೋಥೆರಪಿ ಕೇರ್ ಸೆಂಟರ್: ದಿನೇಶ್ ಗುಂಡೂರಾವ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಕೀಮೋಥೆರಪಿ ಕೇರ್ ಸೆಂಟರ್: ದಿನೇಶ್ ಗುಂಡೂರಾವ್

Bengaluru City

ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಕೀಮೋಥೆರಪಿ ಕೇರ್ ಸೆಂಟರ್: ದಿನೇಶ್ ಗುಂಡೂರಾವ್

Public TV
Last updated: August 27, 2024 7:38 pm
Public TV
Share
3 Min Read
Dinesh Gundu Rao 1
SHARE

-ಅಪಘಾತಕ್ಕೀಡಾದವರ ನೆರವಿಗೆ 65 ನೂತನ ಅಂಬುಲೆನ್ಸ್ ಸೇವೆ ಶೀಘ್ರದಲ್ಲೇ ಆರಂಭ

ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಕೀಮೋಥೆರಪಿ ಡೇ ಕೇರ್ ಸೆಂಟರ್‌ಗಳನ್ನು ಮುಂಬರುವ ಒಂದು ತಿಂಗಳೊಳಗಾಗಿ ಪ್ರಾರಂಭಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದರು.

ಕೆ.ಸಿ ಜನರಲ್ ಆಸ್ಪತ್ರೆಯ (K.C.General Hospital) ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸುಮಾರು 150 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಆ.27 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೂಮಿಪೂಜೆ ನೆರವೇರಿಸಿದರು.ಇದನ್ನೂ ಓದಿ: ಶಾರ್ಟ್ ಡ್ರೆಸ್‌ನಲ್ಲಿ ಕುಣಿದ ರೀಲ್ಸ್ ರಾಣಿ ಸೋನು

ಕ್ಯಾನ್ಸರ್ ರೋಗಿಗಳು ಕೀಮೋಥೆರಪಿಗಾಗಿ ಇಂದು ದೂರದ ನಗರಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಬರುವ ಪರಿಸ್ಥಿತಿಯಿದೆ. ಜನರಿಗೆ ಅವರ ಜಿಲ್ಲೆಯಲ್ಲಿಯೇ ಕಿಮೋಥೆರಪಿ ಸೇವೆ ಒದಗಿಸುವ ನಿಟ್ಟಿನಲ್ಲಿ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಕೀಮೋಥೆರಪಿ ಡೇ ಕೇರ್ ಸೆಂಟರ್‌ಗಳನ್ನು ( Chemotherapy Day Care Centre) ತೆರೆಯಲಾಗುವುದು. ಒಂದು ತಿಂಗಳ ಒಳಗಾಗಿ ಈ ಸೇವೆ ಲಭ್ಯವಾಗಲಿದೆ ಎಂದು ಸಚಿವರು ಆಶ್ವಾಸನೆ ನೀಡಿದರು.

ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಎಂ.ಸಿ.ಎಚ್ ಆಸ್ಪತ್ರೆ, ಭೋದಕ ಕೊಠಡಿ, ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 150 ಕೋಟಿ ರೂ. ಯ ಅನುದಾನವನ್ನು ಕೇಳಿದ್ದೆವು. ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ನಮ್ಮ ಮನವಿಗೆ ಸ್ಪಂದಿಸಿ, ಅತಿ ಕಡಿಮೆ ಅವಧಿಯಲ್ಲೇ ಅನುದಾನ ಮಂಜೂರು ಮಾಡಿಕೊಟ್ಟಿದ್ದಾರೆ. ಭೂಮಿ ಪೂಜೆಯನ್ನು ನೆರವೇರಿಸಿದ್ದಾರೆ. ಇದರ ಸಂಪೂರ್ಣ ಸದುಪಯೋಗ ನಮ್ಮ ಜನಸಾಮಾನ್ಯರಿಗೆ ದೊರೆಯಲಿದೆ ಎಂದರು.

Dinesh Gundurao

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ಡಯಾಲಿಸಿಸ್ (Dialysis) ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗಿದ್ದು, 750ಕ್ಕೂ ಹೆಚ್ಚು ಏಕಬಳಕೆಯ ಡಯಾಲಿಸಿಸ್ ಹೊಸ ಯಂತ್ರಗಳನ್ನು ಅಳವಡಿಸಿದ್ದೇವೆ. ಸರ್ಕಾರಿ ಆಸ್ಪತ್ರೆಗಳಿಗೆ ಈ ಹಿಂದೆ ಶೇ.30 ರಷ್ಟು ಮಾತ್ರ ಔಷಧಿ ನಿಗಮದಿಂದ ಔಷಧಿಗಳು ಸರಬರಾಜು ಆಗುತ್ತಿದ್ದವು. ಇದೀಗ ಶೇ.70 ರಷ್ಟು ಔಷಧಿಗಳನ್ನು ನಿಗಮದಿಂದ ಖರೀದಿಸಿ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಶೇ.90 ರಷ್ಟು ಔಷಧಿಗಳು ದೊರಕಿಸುವತ್ತ ಆರೋಗ್ಯ ಇಲಾಖೆ ಹೆಜ್ಜೆಯಿಟ್ಟಿದೆ ಎಂದು ಭರವಸೆ ನೀಡಿದರು.ಇದನ್ನೂ ಓದಿ: ನ್ಯಾಯಾಲಯದ ಆದೇಶಕ್ಕೆ ಕಾಯದೆ ಕೂಡಲೇ ರಾಜೀನಾಮೆ ಕೊಟ್ಟರೆ ಒಳಿತು: ಸಿಎಂಗೆ ವಿಜಯೇಂದ್ರ ಸಲಹೆ

ಅಪಘಾತ ಸಂಭವಿಸುವ ಹಾಟ್‌ಸ್ಪಾಟ್‌ಗಳಲ್ಲಿ ಪ್ರತ್ಯೇಕ ಅಂಬುಲೆನ್ಸ್ :
ಅಪಘಾತಕ್ಕೆ ಒಳಗಾಗುವವರಿಗೆ ತುರ್ತು ಆರೋಗ್ಯ ಸೇವೆಗಾಗಿ ಪ್ರತ್ಯೇಕ ಅಂಬುಲೆನ್ಸ್ (Ambulance) ಸೇವೆ ಶೀಘ್ರದಲ್ಲಿಯೇ ಪ್ರಾರಂಭಿಸುವುದಾಗಿ ತಿಳಿಸಿದರು. 65 ನೂತನ ಪ್ರತ್ಯೇಕ ಅಂಬುಲೆನ್ಸ್ ಸೇವೆಯನ್ನು ಅಪಘಾತಕ್ಕೀಡಾದವರ ನೆರವಿಗಾಗಿಯೇ ಒದಗಿಸಲಾಗುತ್ತಿದೆ. ಇದು ರಾಜ್ಯ ಸರ್ಕಾರದ ನೂತನ ಯೋಜನೆಯಾಗಿದ್ದು, ಶೀಘ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅಂಬುಲೆನ್‌ಗಳಿಗೆ ಚಾಲನೆ ನೀಡಲಿದ್ದಾರೆ.

ಭೂಮಿಪೂಜೆ ನೆರವೇರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಆರೋಗ್ಯ ಸೇವೆಗಳನ್ನು ನೀಡುವಲ್ಲಿ ಖಾಸಗಿ ಆಸ್ಪತ್ರೆಗಳಿಗಿಂತ ಸರ್ಕಾರಿ ಆಸ್ಪತ್ರೆಗಳು ಹಿಂದೆ ಬೀಳಬಾರದು. ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಉತ್ತಮ ವೈದ್ಯರಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿರುವ ವೈದ್ಯರಿಗೆ ಹೋಲಿಸಿದರೆ ಹೆಚ್ಚು ಅನುಭವ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹೊಂದಿದ್ದಾರೆ. ಹೈಟೆಕ್ ಆರೋಗ್ಯ ಸೇವೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆಯುವಂತಾಗಬೇಕು. ಆಧುನಿಕ ಯುಗದಲ್ಲಿ ರೋಬೆಟಿಕ್ ಸರ್ಜರಿಗಳನ್ನು ನಡೆಸಲಾಗುತ್ತಿದೆ. ರೋಬೆಟಿಕ್ ಸರ್ಜರಿಯಂತಹ ಆರೋಗ್ಯ ಸೇವೆಗಳು ಸರ್ಕಾರಿ ಆಸ್ಪತ್ರೆಯಲ್ಲೂ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Dinesh gundurao 1

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ (D. K. Shivakumar), ಆರೋಗ್ಯ ಸಚಿವರಾಗಿ ದಿನೇಶ್ ಗುಂಡೂರಾವ್ ಇಲಾಖೆಯಲ್ಲಿ ಹಲವು ಸುಧಾರಣೆಗಳನ್ನು ತರುತ್ತಿದ್ದಾರೆ. ನಮ್ಮ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿದೆ. ಜನಸಾಮಾನ್ಯರ ಆರೋಗ್ಯ ಸೇವೆಗಳನ್ನು ಒದಗಿಸುವ ವಿಚಾರದಲ್ಲಿ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದರು.ಇದನ್ನೂ ಓದಿ: ‘ದೇವರ’ ಚಿತ್ರದ ಪೋಸ್ಟರ್ ಔಟ್- ಎರಡು ವಿಭಿನ್ನ ಲುಕ್‌ನಲ್ಲಿ ಜ್ಯೂ.ಎನ್‌ಟಿಆರ್

150.00 ಕೋಟಿ ರೂ. ಕಾಮಗಾರಿಗಳ ವಿವರ:
200 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ. ಅಂದಾಜು ಮೊತ್ತ: 66.78 ಕೋಟಿ ರೂ.
ಕಟ್ಟಡದ ಒಟ್ಟು ವಿಸ್ತೀರ್ಣ: 12824 ಚ.ಮೀ

ಭೋದಕ ವಿಭಾಗ ಕಟ್ಟಡ:
ಅಂದಾಜು ಮೊತ್ತ: 38.28 ಕೋಟಿ ರೂ.
ಕಟ್ಟಡದ ಒಟ್ಟು ವಿಸ್ತೀರ್ಣ: – 8810 ಚ.ಮೀ

ಶವಾಗಾರ ಕೊಠಡಿ:
ಅಂದಾಜು ಮೊತ್ತ: 4.28 ಕೋಟಿ ರೂ.
ಕಟ್ಟಡದ ಒಟ್ಟು ವಿಸ್ತೀರ್ಣ: 790 ಚ.ಮೀ

ಅಡುಗೆಮನೆ ಕಟ್ಟಡ: ಅಂದಾಜು ಮೊತ್ತ 1.77 ಕೋಟಿ ರೂ. (ಸಲಕರಣೆಗಳು ಸೇರಿದಂತೆ)
ಲಾಂಡ್ರಿ ಕಟ್ಟಡ: ಅಂದಾಜು ಮೊತ್ತ 1.98 ಕೋಟಿ ರೂ. (ಸಲಕರಣೆಗಳು ಸೇರಿದಂತೆ)
ಜೈವಿಕ ವೈದ್ಯಕೀಯ ತ್ಯಾಜ್ಯದ ಕೊಠಡಿ: ಅಂದಾಜು ಮೊತ್ತ 0.38 ಕೋಟಿ ರೂ.
ಇತರೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳು : ಅಂದಾಜು ಮೊತ್ತ 20 ಕೋಟಿ ರೂ.

TAGGED:bengaluruChemotherapy Day Care Centrecm siddaramaiahd k shivakumardinesh gundu raoK.C. General Hospitalಕಿಮೋಥೆರಪಿ ಡೇ ಕೇರ್ ಸೆಂಟರ್‌ಕೆ.ಸಿ.ಜನರಲ್ ಆಸ್ಪತ್ರೆಡಿ.ಕೆ.ಶಿವಕುಮಾರ್ದಿನೇಶ್ ಗುಂಡೂರಾವ್ಬೆಂಗಳೂರುಸಿಎಂ ಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema news

nikhil kumaraswamy actor chetan
ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
Bengaluru City Cinema Latest Sandalwood Top Stories
Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories

You Might Also Like

Amravati 2.0 In Kolhapur Man 22 Sexually Exploits Women In Maharashtra
Crime

ಮತ್ತೊಂದು `ಮಹಾʼ ಲೈಂಗಿಕ ದೌರ್ಜನ್ಯ ಪ್ರಕರಣ – 350 ಅಶ್ಲೀಲ ವಿಡಿಯೋ ಪತ್ತೆ, ಕಾಮುಕ ಅಂದರ್‌

Public TV
By Public TV
39 seconds ago
WhatsApp
Court

ಡಿಜಿಟಲ್ ಅರೆಸ್ಟ್ ತೊಡಗಿದ್ದ 9,400 ವಾಟ್ಸಪ್‌ ಖಾತೆಗಳು ಡಿಲೀಟ್‌

Public TV
By Public TV
6 minutes ago
siddaramaiah dk shivakumar car
Bengaluru City

ಒಂದೇ ಕಾರ್‌ನಲ್ಲಿ ಸಿಎಂ-ಡಿಸಿಎಂ ಪ್ರಯಾಣ; ಇಬ್ಬರು ನಾಯಕರಿಂದ ಅಚ್ಚರಿ ನಡೆ

Public TV
By Public TV
28 minutes ago
SN Narayanaswamy Bangarpet MLA
Bengaluru City

ಮೇ 15ರೊಳಗೆ ಸಂಪುಟ ಪುನರ್ ರಚನೆಯ ಸುದ್ದಿ ಸಿಗಲಿದೆ: ಬಂಗಾರಪೇಟೆ ನಾರಾಯಣಸ್ವಾಮಿ

Public TV
By Public TV
46 minutes ago
Madhu Bangarappa 1
Bagalkot

SSLC ಪರೀಕ್ಷೆಯಲ್ಲಿ 45 ಸಾವಿರ ವಿದ್ಯಾರ್ಥಿಗಳು ಫೇಲ್: ಮಧು ಬಂಗಾರಪ್ಪ

Public TV
By Public TV
47 minutes ago
R Ashok 1
Bengaluru City

ಸರ್ಕಾರ ಗುಂಡಿ ಮುಚ್ಚಿದ ಹಣವನ್ನು ಗುಂಡಿಗೆ ಹಾಕಿದೆ – ಅಶೋಕ್‌ ವಾಗ್ದಾಳಿ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?