Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: Karnataka Rain Alert: ಕೆಆರ್‌ಎಸ್‌ ಡ್ಯಾಂ ಭರ್ತಿಗೆ 4 ಅಡಿಯಷ್ಟೇ ಬಾಕಿ; ಮಳೆ ಆರ್ಭಟಕ್ಕೆ ಹಲವೆಡೆ ಅವಾಂತರ – ಎಲ್ಲೆಲ್ಲಿ ಏನಾಗಿದೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | Karnataka Rain Alert: ಕೆಆರ್‌ಎಸ್‌ ಡ್ಯಾಂ ಭರ್ತಿಗೆ 4 ಅಡಿಯಷ್ಟೇ ಬಾಕಿ; ಮಳೆ ಆರ್ಭಟಕ್ಕೆ ಹಲವೆಡೆ ಅವಾಂತರ – ಎಲ್ಲೆಲ್ಲಿ ಏನಾಗಿದೆ?

Bengaluru City

Karnataka Rain Alert: ಕೆಆರ್‌ಎಸ್‌ ಡ್ಯಾಂ ಭರ್ತಿಗೆ 4 ಅಡಿಯಷ್ಟೇ ಬಾಕಿ; ಮಳೆ ಆರ್ಭಟಕ್ಕೆ ಹಲವೆಡೆ ಅವಾಂತರ – ಎಲ್ಲೆಲ್ಲಿ ಏನಾಗಿದೆ?

Public TV
Last updated: July 20, 2024 11:07 pm
Public TV
Share
2 Min Read
Rain 02 1
SHARE

ಬೆಂಗಳೂರು: ರಾಜ್ಯದ ಕರಾವಳಿ (Karavali), ಮಲೆನಾಡಲ್ಲಿ ವರುಣನ ಆರ್ಭಟ ಬಿಡುವಿಲ್ಲದೇ ಮುಂದುವರಿದಿದೆ. ಶಿರೂರಿನ ದುರಂತ ಸ್ಥಳದಲ್ಲಿ ಸತತ ಐದನೇ ದಿನವೂ ರಕ್ಷಣಾ ಕಾರ್ಯಚರಣೆ ನಡೆದಿದೆ. ಆದ್ರೆ, ಈವರೆಗೂ ಕೇರಳ. ತಮಿಳುನಾಡು ಮೂಲದ ಇಬ್ಬರು ಚಾಲಕರ ಸುಳಿವು ಸಿಕ್ಕಿಲ್ಲ. ರಾಡಾರ್ ಸಿಗ್ನಲ್ ಬಳಸಿಕೊಂಡು ಶೋಧ ಕಾರ್ಯ ನಡೆಸಲಾಗ್ತಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.

Rain 03 1

ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಕಾರಣ ಕೆಆರ್‌ಎಸ್ (KRS Dam_ ಬಹುತೇಕ ಭರ್ತಿ ಹಂತ ತಲುಪಿದೆ. ಡ್ಯಾಂ ಭರ್ತಿಗೆ ಇನ್ನು 4 ಅಡಿಯಷ್ಟೇ ಬಾಕಿ ಇದೆ. ಹಾರಂಗಿ ಹಾಗೂ ಹೇಮಾವತಿಯಿಂದ ಹೆಚ್ಚು ನೀರು ಹರಿಸುತ್ತಿರುವುದರಿಂದ ಭಾನುವಾರ (ಜು.21) ಸಂಜೆಯೊಳಗೆ ಕನ್ನಂಬಾಡಿ ಕಟ್ಟೆ ಭರ್ತಿ ಆಗೋ ಸಾಧ್ಯತೆಗಳಿವೆ ಎನ್ನಲಾಗಿದೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ 115 ಮಂದಿ ಬಲಿ – 1,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ತವರಿಗೆ ವಾಪಸ್‌

ಈ ಹಿನ್ನೆಲೆಯಲ್ಲಿ ಹೊರಹರಿವಿನ ಪ್ರಮಾಣವನ್ನು ಹಂತ ಹಂತವಾಗಿ ಹೆಚ್ಚಿಸಲಾಗ್ತಿದೆ. ಸದ್ಯಕ್ಕೆ 15 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಇದರಿಂದ ನದಿಪಾತ್ರದ 92 ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ನಿಷೇಧಿಸಲಾಗಿದೆ. ಕಪಿಲಾ ನದಿ ಆರ್ಭಟದ ಕಾರಣ ನಂಜನಗೂಡಿನ ದೇವಾಲಯಗಳಿಗೆ ಜಲದಿಗ್ಬಂಧನ ಉಂಟಾಗಿದೆ. ಹೊಗೇನಕಲ್ ಜಲಪಾತದ ವೈಭವ ಡ್ರೋನ್ ಕಣ್ಣಲ್ಲಿ ಸೆರೆಯಾಗಿದೆ. ಚಾಮುಂಡಿ ಬೆಟ್ಟದಲ್ಲೂ ಜಲಪಾತ ಸೃಷ್ಟಿಯಾಗಿದೆ.

ರಾಜ್ಯದ ವಿವಿಧೆಡೆ ಮಳೆಯಿಂದ ಹಲವು ಅವಾಂತರ ಉಂಟಾಗಿವೆ. ಖಾನಾಪುರದ ಕಾಡಂಚಿನ ಕುಗ್ರಾಮ ಅಂಗಾಂವದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯನ್ನು ಕಟ್ಟಿಗೆ ಸ್ಟ್ರೆಚರ್‌ ಮೇಲೆ ಮಲಗಿಸಿಕೊಂಡು 5 ಕಿಲೋಮೀಟರ್ ದೂರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಬಳ್ಳಾರಿ ನಾಲಾ ಉಕ್ಕಿಹರಿದು ಬೆಳಗಾವಿ ನಗರದ ಹಲವಾರು ಬಡಾವಣೆಗಳು ಜಲಾವೃತವಾಗಿವೆ. ಇದನ್ನೂ ಓದಿ: NEET-UG ಪ್ರಶ್ನೆಪತ್ರಿಕೆ ಸೋರಿಕೆ ಕೇಸ್‌ – ಮಾಸ್ಟರ್‌ ಮೈಂಡ್‌, ಇಬ್ಬರು ಎಂಬಿಬಿಎಸ್‌ ವಿದ್ಯಾರ್ಥಿಗಳು ಅರೆಸ್ಟ್‌

ಬೆಳಗಾವಿಯ 13 ಸೇತುವೆಗಳು ಜಲಾವೃತವಾಗಿದೆ. ಕಳಸ ತಾಲೂಕಿನ ಮಾವಿನಹೊಲದಲ್ಲಿ ಎಮ್ಮೆಯೊಂದು ನೀರಲ್ಲಿ ಕೊಚ್ಚಿ ಹೋಗಿದೆ. ಕೊಡಗಿನ ಮಲ್ಲಳ್ಳಿ ಜಲಪಾತದ ಭೋರ್ಗರೆತ ಜೋರಾಗಿದೆ. ಹೆಬ್ರಿಯ ನಾಡ್ಪಾಲಿ ಬಳಿ ಹಗ್ಗದ ನೆರವಿಂದ ಸೀತಾನದಿ ದಾಟ್ತಿದ್ದಾಗ ಕೊಚ್ಚಿ ಹೋಗ್ತಿದ್ದ ಕಾರ್ಮಿಕ ಆನಂದ್ ಶವ ಇಂದು ಪತ್ತೆಯಾಗಿದೆ. ಬೀದರ್‌ನಲ್ಲಿ ಮಳೆಯಿಂದ ಸೃಷ್ಟಿಯಾದ ಹೊಂಡದಲ್ಲಿ ಲಾರಿ ಸಿಲುಕಿ ಚಾಲಕ ಪರದಾಡಿದ್ದಾನೆ. ಸುರಪುರದ ತಿಂಥಣಿ ಗ್ರಾಮದ ಬಳಿ ಆಯತಪ್ಪಿ ನದಿಗೆ ಜಾರಿ ಬಿದ್ದ ವ್ಯಕ್ತಿಯನ್ನು ಅಂಬಿಗರು ರಕ್ಷಣೆ ಮಾಡಿದ್ದಾರೆ.

ಶಿರಾಡಿ, ಸಂಪಾಜೆ ಮಾರ್ಗದಲ್ಲಿ ಭೂ ಕುಸಿತ ಕಾರಣ ಚಾರ್ಮಾಡಿ ಘಾಟಿಯಲ್ಲಿ ವಾಹನ ದಟ್ಟಣೆ ಉಂಟಾಗಿದೆ. ಇಲ್ಲಿಯೂ ಇದೀಗ ಭೂಕುಸಿತ ಭೀತಿ ಎದುರಾಗಿದೆ. ಶಿರಾಡಿ ಘಾಟ್‌ನಲ್ಲಿ ಹಗಲಿನ ವೇಳೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ನದಿಯ ಮಧ್ಯೆ ಕಟೀಲು ದುರ್ಗಾಪರಮೇಶ್ವರಿ ದೇಗುಲದ ವಿಹಂಗಮ ನೋಟ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಹೆಚ್‍ಡಿಕೆ ಮಿಲಿಟರಿ ತಂದು ಕಾರ್ಯಾಚರಣೆ ಮಾಡಿಸಿದ್ದಾರಾ? – ಅಂಕೋಲಾ ಭೇಟಿಗೆ ಡಿಸಿಎಂ ವ್ಯಂಗ್ಯ

TAGGED:bengaluruIMDkarnatakamysururainRain Alertಕರ್ನಾಟಕಕೆಆರ್‍ಎಸ್ ಡ್ಯಾಂಬೆಂಗಳೂರುಮಳೆಮೈಸೂರು
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

Public TV Vidhyapeeta
Bengaluru City

ಪಬ್ಲಿಕ್ ಟಿವಿ ‘ವಿದ್ಯಾಪೀಠʼದಲ್ಲಿ ಪಿಯುಸಿ 90% ಗಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ಉಡುಗೊರೆ

Public TV
By Public TV
10 minutes ago
nicolas maduro
Latest

ಮಡುರೊ ಬಂಧನಕ್ಕೆ ಮುನ್ನ ಪಾಲಿಮಾರ್ಕೆಟ್‌ನಲ್ಲಿ ಬೆಟ್ಟಿಂಗ್‌ – ಕೋಟಿ ಕೋಟಿ ದೋಚಿದ್ದ ಅಮೆರಿಕದ ಸೈನಿಕ ಅರೆಸ್ಟ್‌

Public TV
By Public TV
18 minutes ago
BJP MLA Suresh Gowda
Districts

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುತ್ತೆ: ಸುರೇಶ್‌ ಗೌಡ ಭವಿಷ್ಯ

Public TV
By Public TV
2 hours ago
CET Exam Janiwara
Bengaluru City

CET Exam | ಜನಿವಾರ ತೆಗೆಸಿದ ಬೆಂಗಳೂರು ಕಾಲೇಜ್‌ – ಪೋಷಕರಿಂದ ದೂರು ದಾಖಲು

Public TV
By Public TV
3 hours ago
Amit Shah 3
Latest

West Bengal Election| 152ರ ಪೈಕಿ 110ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು -ಬಿಜೆಪಿಗೆ ಅಧಿಕಾರ: ಅಮಿತ್‌ ಶಾ ವಿಶ್ವಾಸ

Public TV
By Public TV
3 hours ago
Amit Shah 2
Latest

ಕ್ಷಮಿಸಿ, ಇನ್ನು 10 ನಿಮಿಷಗಳಲ್ಲಿ ತಲುಪುತ್ತೇನೆ: ಅಭಿಮಾನಿಯ ಮನವಿಗೆ ಅಮಿತ್‌ ಶಾ ಪ್ರತಿಕ್ರಿಯೆ

Public TV
By Public TV
4 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?