Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಚೀನಾದಲ್ಲಿ ʼ996 ವರ್ಕ್ ಕಲ್ಚರ್ʼ ವಿರುದ್ಧ ತಿರುಗಿ ಬಿದ್ದ ಉದ್ಯೋಗಿಗಳು- ಏನಿದು ಸಂಸ್ಕೃತಿ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಚೀನಾದಲ್ಲಿ ʼ996 ವರ್ಕ್ ಕಲ್ಚರ್ʼ ವಿರುದ್ಧ ತಿರುಗಿ ಬಿದ್ದ ಉದ್ಯೋಗಿಗಳು- ಏನಿದು ಸಂಸ್ಕೃತಿ?

Latest

ಚೀನಾದಲ್ಲಿ ʼ996 ವರ್ಕ್ ಕಲ್ಚರ್ʼ ವಿರುದ್ಧ ತಿರುಗಿ ಬಿದ್ದ ಉದ್ಯೋಗಿಗಳು- ಏನಿದು ಸಂಸ್ಕೃತಿ?

Public TV
Last updated: June 24, 2024 4:40 pm
Public TV
Share
6 Min Read
CHINA FINAL 1
SHARE

– ಇದರಿಂದ ಆಗುವ ಅನಾನುಕೂಲಗಳು ಯಾವುವು?

ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಅಧ್ಯಯನ ಅಥವಾ ಓದು ಮುಗಿಸಿದ ಬಳಿಕ ಉತ್ತಮವಾದ ಉದ್ಯೋಗ ಪಡೆಯಲು ಬಯಸುತ್ತಾನೆ. ಆರಂಭದಲ್ಲಿ ಕೆಲವೊಮ್ಮೆ ನಾವು ಇಷ್ಟಪಡುವಂತಹ ಕೆಲಸ ದಕ್ಕುವುದಿಲ್ಲ. ಒಂದು ವೇಳೆ ಸಿಕ್ಕರೂ ನಿಜವಾದ ಸವಾಲು ಆನಂತರ ಆರಂಭವಾಗುತ್ತದೆ. ಇಂತಹ ಸವಾಲುಗಳು ಚೀನಾದಲ್ಲಿ ಸಾಮಾನ್ಯವಾಗಿದ್ದು, ‘996 ವರ್ಕ್ ಕಲ್ಚರ್’ (996 Work Culture) ಎಂಬ ಗಲಾಟೆಯೇ ಎದ್ದಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕರಿಗೆ ಈ ರೀತಿಯ ಕೆಲಸದ ಸಂಸ್ಕೃತಿಯ ಬಗ್ಗೆ ತಿಳಿದಿರುವುದಿಲ್ಲ. ಆದರೆ ಚೀನಾದಲ್ಲಿ ಈ ಕೆಲಸ ಸಂಸ್ಕೃತಿಯ ಇದೀಗ ದೊಡ್ಡ ಅಭಿಯಾನವೇ ಆರಂಭವಾಗಿದೆ. ‘996 ಕೆಲಸದ ಸಂಸ್ಕೃತಿ’ ವಿರುದ್ಧದ ಅಭಿಯಾನದಲ್ಲಿ 5000 ಕ್ಕೂ ಹೆಚ್ಚು ಉದ್ಯೋಗಿಗಳಳು ಸೇರಿದ್ದಾರೆ. ಹಾಗಾದರೆ ಚೀನಾದ ಉದ್ಯೋಗಿಗಳ ಕಣ್ಣು ಕೆಂಪಾಗಿಸಿದ ಈ ‘996 ಕೆಲಸದ ಸಂಸ್ಕೃತಿ’ ಅಂದ್ರೆ ಏನು ಎಂಬುದನ್ನು ನೋಡೋಣ.

‘996 ವರ್ಕ್ ಕಲ್ಚರ್’ ಎಂದರೇನು?: ವಾಸ್ತವವಾಗಿ, ‘996’ ಕೆಲಸದ ಸಂಸ್ಕೃತಿಯು ಚೀನಾದ ಖಾಸಗಿ ಕಂಪನಿಗಳಲ್ಲಿ, ವಿಶೇಷವಾಗಿ ಟೆಕ್ ಉದ್ಯಮದಲ್ಲಿ ಪ್ರಚಲಿತವಾಗಿದೆ. ಇದರ ಅಡಿಯಲ್ಲಿ ನೌಕರರು ವಾರದಲ್ಲಿ 6 ದಿನ, ಪ್ರತಿ ದಿನ 12 ಗಂಟೆ ಕೆಲಸ ಮಾಡಬೇಕು. ಈ ಕೆಲಸದ ಸಂಸ್ಕೃತಿಯನ್ನು ಚೀನಾದಲ್ಲಿ ಬಹಳ ಹಿಂದಿನಿಂದಲೂ ವಿರೋಧಿಸಲಾಗುತ್ತಿದೆ. ಆದರೆ ಖಾಸಗಿ ಕಂಪನಿಗಳು ಉದ್ಯೋಗಿಗಳ ಶೋಷಣೆಗೆ ಹಲವು ಬಾರಿ ವರದಿಯಾಗಿದೆ. ಈ ಕಂಪನಿಗಳು ಉದ್ಯೋಗಿಗಳಿಗೆ ವಾರದಲ್ಲಿ ಒಂದು ರಜೆಯನ್ನು ಮಾತ್ರ ನೀಡುತ್ತವೆ. ಇದು ‘996 ವರ್ಕ್ ಕಲ್ಚರ್’ ಆಗಿದ್ದು, ಇದರಿಂದ ಚೀನಾದಲ್ಲಿ ಉದ್ಯೋಗಿಗಳ ಆಕ್ರೋಶ ಹೆಚ್ಚಾಗುತ್ತಿದೆ. ಇದರ ವಿರುದ್ಧ ಈಗ ಧ್ವನಿ ಎತ್ತುತ್ತಿದ್ದು, ‘ವರ್ಕರ್ ಲೈವ್ಸ್ ಮ್ಯಾಟರ್’ ಎಂಬ ಆನ್‌ಲೈನ್ ಅಭಿಯಾನವನ್ನು ನಡೆಸಲಾಗುತ್ತಿದೆ.

CHINA 2

12 ಗಂಟೆ ಕೆಲಸ: ಚೀನಾದಲ್ಲಿ ಕೆಲಸದ ಅವಧಿಯನ್ನು ‘996’ ಎಂದು ಏಕೆ ಕರೆಯಲಾಗುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಏಕೆಂದರೆ ನೌಕರರು ವಾರದಲ್ಲಿ 6 ದಿನ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಕೆಲಸ ಮಾಡುತ್ತಾರೆ. ‘996 ಕೆಲಸದ ಸಂಸ್ಕೃತಿ’ ವಿರುದ್ಧ ಆರಂಭಿಸಿರುವ ಅಭಿಯಾನದಲ್ಲಿ ಉದ್ಯೋಗಿಗಳು ತಮ್ಮ ಕೆಲಸದ ಸಮಯವನ್ನು ಆನ್‌ಲೈನ್ ಸ್ಪ್ರೆಡ್‌ಶೀಟ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಂದಹಾಗೆ ‘996’ ಕಚೇರಿ ಸಂಸ್ಕೃತಿಯ ವಿಷಯವು ಚೀನಾದಲ್ಲಿ ವರ್ಷಗಳಿಂದ ವಿವಾದಕ್ಕೀಡಾಗಿದೆ. ಖಾಸಗಿ ಸಂಸ್ಥೆಗಳಲ್ಲಿ ನೌಕರರು ವಾರಕ್ಕೆ 72 ಗಂಟೆ ಕೆಲಸ ಮಾಡಬೇಕಾಗಿದ್ದು, ಇದನ್ನು ಇಲ್ಲಿನ ಜನ ಅಮಾನವೀಯ ಎನ್ನುತ್ತಿದ್ದಾರೆ.

ಸಿಡಿದೆದ್ದ ಉದ್ಯೋಗಿಗಳು: 996 ವರ್ಕ್ ಮಾಡೆಲ್ ವಿರುದ್ಧ ಇದೀಗ ಚೀನಾ ಯುವ ಸಮೂಹ ವಿಭಿನ್ನವಾಗಿ ದನಿ ಎತ್ತಿದೆ. ‘996’ ಕೆಲಸದ ಸಂಸ್ಕೃತಿಯನ್ನು ವಿರೋಧಿಸಿ ಚೀನಾದ ಯುವಕರು ಮತ್ತು ಯುವತಿಯರು ಪಕ್ಷಿಗಳಂತೆ ವೇಷ ಧರಿಸಿ ವೀಡಿಯೊಗಳನ್ನು ಮಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಯುವಕರು, ಯುವತಿಯರು ತಮ್ಮ ದೇಹವನ್ನು ದೊಡ್ಡ ಗಾತ್ರದ ಟೀ-ಶರ್ಟ್‍ಗಳಲ್ಲಿ ಹುದುಗಿಸಿಕೊಂಡು, ಕುರ್ಚಿ ಮೇಲೆ ಕುಳಿತುಕೊಂಡು ಹಕ್ಕಿಗಳಂತೆ ವರ್ತಿಸ್ತಿದ್ದಾರೆ. ತಮಗೂ ಪಕ್ಷಿಗಳ ರೀತಿಯ ಸ್ವಾತಂತ್ರ್ಯ ಬೇಕು ಎಂಬ ಕೂಗೆಬ್ಬಿಸ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇದಕ್ಕೆ ಸಂಬಂಧಿಸಿದ ದೃಶ್ಯಗಳು ವೈರಲ್ ಆಗಿವೆ. ಈ ಅಭಿಯಾನಕ್ಕೆ ಯುವ ಪೀಳಿಗೆ ಅಪಾರ ಬೆಂಬಲವನ್ನು ಪಡೆಯುತ್ತಿದ್ದಾರೆ.

CHINA 3

ಆದಾಗ್ಯೂ, ಚೀನಾದ ಯುವಕರು ಸಾಮಾಜಿಕ ಮಾಧ್ಯಮದಲ್ಲಿ ದೇಶದ ‘996’ ಕೆಲಸದ ಸಂಸ್ಕೃತಿಯ ಬಗ್ಗೆ ತಮ್ಮ ಆಕ್ರೋಶ ಹೊರಹಾಕಿರುವುದು ಇದೇ ಮೊದಲಲ್ಲ. 2022 ರಲ್ಲಿ, ‘ಬಾಯಿ ಲ್ಯಾನ್’ (ಕೊಳೆಯಲಿ) ಎಂಬ ಪದವು ವ್ಯಾಪಕವಾಗಿ ಬಳಸಲಾರಂಭಿಸಿತು. 2021 ರಲ್ಲಿ, ‘996’ ವಿರುದ್ಧ ಚೀನಾದಲ್ಲಿ ‘ವರ್ಕರ್ ಲೈವ್ಸ್ ಮ್ಯಾಟರ್’ ಎಂಬ ಆನ್‌ಲೈನ್ ಅಭಿಯಾನವನ್ನು ಪ್ರಾರಂಭಿಸಲಾಯಿತು. ಆದರೆ ಇದರ ನಂತರವೂ ಈ ರೀತಿಯ ಶೋಷಣೆ ನಡೆಯುತ್ತಿದೆ ಮತ್ತು ಚೀನಾದ ಜನರು ವಾರಕ್ಕೆ 72 ಗಂಟೆಗಳ ಕಾಲ ಕೆಲಸ ಮಾಡಬೇಕಾಗಿದೆ.

ಕೇವಲ 8 ಗಂಟೆ ಕೆಲಸ ಮಾಡಲು ಕಾನೂನು: ಚೀನಾ ಸರ್ಕಾರ ಕೆಲಸಕ್ಕೆ ಸಂಬಂಧಿಸಿದಂತೆ ಕಾನೂನನ್ನು ಮಾಡಿದೆ. ಅದರ ಪ್ರಕಾರ, ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಾರದಲ್ಲಿ ಗರಿಷ್ಠ 44 ಗಂಟೆಗಳ ಕಾಲ ಮಾತ್ರ ಕೆಲಸ ಮಾಡಬಹುದು. ಆದರೆ ಇದಾದ ನಂತರವೂ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಓವರ್‌ಟೈಮ್ ಹೆಸರಿನಲ್ಲಿ 12 ಗಂಟೆಗಳ ಕಾಲ ಕೆಲಸ ಮಾಡುವಂತೆ ಮಾಡುತ್ತವೆ. ಈ ಬಗ್ಗೆ ಚೀನಾ ಸರ್ಕಾರ ಹಲವಾರು ಬಾರಿ ಖಾಸಗಿ ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದರೂ ಸಹ ನೌಕರರನ್ನು ನಿರಂತರವಾಗಿ ಶೋಷಣೆ ಮಾಡಲಾಗುತ್ತಿದೆ.

CHINA 1

‘996’ ಅನ್ನು ಬೆಂಬಲಿಸಿದ್ದ ಜಾಕ್‌ ಮಾ: ಒಂದು ಸಮಯದಲ್ಲಿ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ಸಹ ‘996’ ಕೆಲಸದ ಸಂಸ್ಕೃತಿಯನ್ನು ಬೆಂಬಲಿಸಿದ್ದರು. ಆಗ ಜಾಕ್ ಮಾ ಅವರು 996 ಕೆಲಸದ ಸಂಸ್ಕೃತಿ ವರದಾನಕ್ಕಿಂತ ಕಡಿಮೆಯಿಲ್ಲ ಮತ್ತು ಕೇವಲ 8 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಅಲಿಬಾಬಾದಲ್ಲಿ ಸ್ಥಾನವಿಲ್ಲ ಎಂದು ಹೇಳಿದ್ದರು.

ಅನಾನುಕೂಲಗಳು ಯಾವುವು?: ದೀರ್ಘ ಪಾಳಿಯಲ್ಲಿ ಕೆಲಸ ಮಾಡುವುದರಿಂದ ಹಲವಾರು ಅನಾನುಕೂಲತೆಗಳಿವೆ. ಚೀನಾವನ್ನು ಹೊರತುಪಡಿಸಿ, ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ವಾರಕ್ಕೆ 55 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುವ ಜನರು ಸಾವಿನ ಅಪಾಯವನ್ನು ಹೊಂದಿರುತ್ತಾರೆ. ಪ್ರತಿ ವರ್ಷ 7 ಲಕ್ಷ 45 ಸಾವಿರ ಜನರು ಪಾರ್ಶ್ವವಾಯು ಅಥವಾ ಹೃದಯಾಘಾತದಿಂದ ಸಾಯುತ್ತಾರೆ. ಆಗ್ನೇಯ ಏಷ್ಯಾದಲ್ಲಿ ಈ ಅಂಕಿ ಅಂಶವು ಅತ್ಯಧಿಕವಾಗಿದೆ. ಅಲ್ಲಿ 55 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುವ 3 ಲಕ್ಷಕ್ಕೂ ಹೆಚ್ಚು ಜನರು ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಕಾಯಿಲೆಗಳಿಂದ ಸಾಯುತ್ತಾರೆ.

JACK MA

ಕೆಲವು ದೇಶಗಳಲ್ಲಿ 4 ದಿನಗಳ ವಾರದ ಸಂಸ್ಕೃತಿಯನ್ನು ಸಹ ಅಳವಡಿಸಿಕೊಳ್ಳಲಾಗುತ್ತಿದೆ. ನೀವು ದಿನಕ್ಕೆ 7-8 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿದರೆ, ನಿಮ್ಮ ದೇಹಕ್ಕೆ ಸರಿಯಾದ ವಿಶ್ರಾಂತಿ ಸಿಗುವುದಿಲ್ಲ ಮತ್ತು ಇದು ಹೆಚ್ಚಿದ ಒತ್ತಡ, ಆಯಾಸ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇದರಿಂದ ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು, ನಿದ್ರಾಹೀನತೆ ಮುಂತಾದ ಹಲವು ಸಮಸ್ಯೆಗಳು ಎದುರಾಗುತ್ತವೆ.

ಅಂಕಿ-ಅಂಶಗಳು: ಪಶ್ಚಿಮ ಪೆಸಿಫಿಕ್ ಮಹಾಸಾಗರದ ಪ್ರದೇಶಗಳಲ್ಲಿ ಈ ಅಂಕಿ ಅಂಶವು 2 ಲಕ್ಷಕ್ಕಿಂತ ಹೆಚ್ಚಿದ್ದರೆ, ಪೂರ್ವ ಮೆಡಿಟರೇನಿಯನ್ ಪ್ರದೇಶಗಳಲ್ಲಿ 77 ಸಾವಿರ, ಯುರೋಪ್ ನಲ್ಲಿ 57 ಸಾವಿರ, ಅಮೆರಿಕದಲ್ಲಿ 43 ಸಾವಿರ ಮತ್ತು ಆಫ್ರಿಕಾದಲ್ಲಿ 40 ಸಾವಿರ ಮಂದಿ ನಿಗದಿತ ಸಮಯಕ್ಕಿಂತ ಹೆಚ್ಚು ಗಂಟೆ ಕೆಲಸ ಮಾಡಿದ್ದರಿಂದ ಪ್ರಾಣ ಕಳೆದುಕೊಂಡಿದ್ದಾರೆ. ಸುದೀರ್ಘ ಕೆಲಸದ ಅವಧಿಯಿಂದ ಜನರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಜನರು ತಮ್ಮ ಒತ್ತಡವನ್ನು ಕಡಿಮೆ ಮಾಡಲು ವ್ಯಾಯಾಮ ಮಾಡುವುದಿಲ್ಲ ಅಥವಾ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯುವುದಿಲ್ಲ. ಇದು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಮತ್ತು ಅನಾರೋಗ್ಯದ ಸಂದರ್ಭದಲ್ಲಿ, ಅವರು ಸಾಕಷ್ಟು ವಿಶ್ರಾಂತಿ ಪಡೆಯಲು ಸಾಧ್ಯವಾಗುವುದಿಲ್ಲ.

CHINA 4

ಪ್ರಪಂಚದ ಹಲವು ದೇಶಗಳಲ್ಲಿ ಕೆಲಸದ ಸಮಯದ ಬಗ್ಗೆಯೂ ಬದಲಾವಣೆಗಳಾಗಿವೆ. ಜರ್ಮನಿಯಲ್ಲಿ ವಾರದಲ್ಲಿ 4 ದಿನಗಳ ಕೆಲಸ ಮತ್ತು 3 ದಿನಗಳ ವಿಶ್ರಾಂತಿಯ ಮಾದರಿಯನ್ನು ಪರಿಗಣಿಸಲಾಗುತ್ತಿದೆ. ಇದರಿಂದಾಗಿ ನೌಕರರು ವಾರಾಂತ್ಯದಲ್ಲಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯಬಹುದಾಗಿದೆ. ಆದರೆ ಉದ್ಯೋಗಿಗಳನ್ನು ಹೆಚ್ಚು ಸಮಯ ಕೆಲಸ ಮಾಡುವಂತೆ ಒತ್ತಾಯಿಸುವ ಹಲವು ದೇಶಗಳಿವೆ. ಯುಎಇಯಲ್ಲಿನ ಉದ್ಯೋಗಿಗಳು ವಾರಕ್ಕೆ 52 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಇದು ವಿಶ್ವದಲ್ಲೇ ಅತಿ ಹೆಚ್ಚು. ಭಾರತದಲ್ಲಿ ನೌಕರರು ವಾರಕ್ಕೆ 45 ರಿಂದ 48 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಅಮೆರಿಕದಲ್ಲಿ ಜನರು 36 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಜರ್ಮನಿಯಲ್ಲಿನ ಉದ್ಯೋಗಿಗಳು ಪ್ರತಿ ವಾರ ಕೇವಲ 34 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ.

ಭಾರತಕ್ಕೆ ಸಲಹೆ ನೀಡಿದ್ದ ನಾರಾಯಣಮೂರ್ತಿ: ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಕಳೆದ ವರ್ಷ ವಾರಕ್ಕೆ 70 ಗಂಟೆಗಳ ಕೆಲಸವನ್ನು ಪ್ರತಿಪಾದಿಸಿದ್ದರು. ಅಲ್ಲದೇ ಯುವಕರಿಗೆ ಹೆಚ್ಚು ಕೆಲಸ ಮಾಡಲು ಸಲಹೆ ನೀಡಿದ್ದರು. ಇದಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದರು. 2023 ರ ಅಕ್ಟೋಬರ್ ನಲ್ಲಿ ನಾರಾಯಣ ಮೂರ್ತಿ ಅವರು ಪಾಡ್‌ಕ್ಯಾಸ್ಟ್‌ನಲ್ಲಿ ಭಾರತದ ಕೆಲಸದ ಉತ್ಪಾದಕತೆ ವಿಶ್ವದಲ್ಲೇ ಅತ್ಯಂತ ಕಡಿಮೆ ಎಂದು ಹೇಳಿದಾಗ ಇದ್ದಕ್ಕಿದ್ದಂತೆ ಬೆಳಕಿಗೆ ಬಂದರು. ಚೀನಾದಂತಹ ದೇಶಗಳೊಂದಿಗೆ ಸ್ಪರ್ಧಿಸಲು, ಭಾರತೀಯ ಯುವಕರು ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಹೇಳಿರುವುದನ್ನು ನಾವು ಇಲ್ಲಿ ಸ್ಮರಿಸಬಹುದು.

TAGGED:996 work culture996 ವರ್ಕ್‌ ಕಲ್ಚರ್‌boyschinagirlsjobಉದ್ಯೋಗಚೀನಾಯುವಕಯುವತಿಯರು
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda
ಫೆ.2 ಕ್ಕೆ ರಶ್ಮಿಕಾ-ವಿಜಯ್ ಮದುವೆ? ಫೇಕ್ ನ್ಯೂಸ್ ಶುರುವಾಗಿದ್ದು ಎಲ್ಲಿಂದ?
Cinema Latest Top Stories
Actress Jayamala
ಫಿಲ್ಮ್ ಚೇಂಬರ್ ನೂತನ ಅಧ್ಯಕ್ಷೆಯಾಗಿ ಹಿರಿಯ ನಟಿ ಜಯಮಾಲಾ ಪದಗ್ರಹಣ
Cinema Latest Sandalwood Top Stories
Pushpa Arunkumar
ಸೈಟ್‌ ವಿಚಾರಕ್ಕೆ ಜಟಾಪಟಿ – ಕೆಡವಿದ್ದ ಕಾಂಪೌಂಡ್‌ ಕಟ್ಟಿಸಲು ಮುಂದಾದ ಯಶ್‌ ತಾಯಿ
Cinema Districts Hassan Karnataka Latest Sandalwood States Top Stories
Ram Charan
ಅವಳಿ ಮಕ್ಕಳಿಗೆ ಜನ್ಮ ನೀಡಿದ ರಾಮ್‌ಚರಣ್ ಪತ್ನಿ ಉಪಾಸನಾ
Bollywood Cinema Latest Top Stories

You Might Also Like

Budget 2026 1 1
Latest

ವಿಕಸಿತ ಭಾರತಕ್ಕೆ ಕೇಂದ್ರದ ಯುವಶಕ್ತಿ ಬಜೆಟ್ – ಜೀರಾಮ್‌ಜೀ ಯೋಜನೆಗೆ 95,692 ಕೋಟಿ ಮೀಸಲು; ಹಿಂದಿಗಿಂತಲೂ ಹೆಚ್ಚು!

Public TV
By Public TV
6 hours ago
Hassan Car Accident
Crime

ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ – ಓರ್ವ ಸಾವು, ಇಬ್ಬರು ಗಂಭೀರ

Public TV
By Public TV
7 hours ago
Ind vs Pak U19 1
Cricket

U19 World Cup | ಭಾರತಕ್ಕೆ 58 ರನ್‌ಗಳ ಭರ್ಜರಿ ಜಯ – ಮೈದಾನದಲ್ಲೇ ಕಣ್ಣೀರಿಟ್ಟ ಪಾಕ್‌ ಕ್ರಿಕೆಟಿಗ

Public TV
By Public TV
7 hours ago
India vs Pakistan 1
Cricket

Boycott | ವಿಶ್ವಕಪ್‌ ಟೂರ್ನಿ ಆಡ್ತೀವಿ, ಭಾರತದ ವಿರುದ್ಧ ಆಡಲ್ಲ – ಪಾಕಿಸ್ತಾನ ಅಚ್ಚರಿ ನಿರ್ಧಾರ

Public TV
By Public TV
8 hours ago
Chaluvarayaswamy
Districts

ಕೃಷಿಯಾಧಾರಿತ ಕರ್ನಾಟಕಕ್ಕೆ ಕೇಂದ್ರ ಬಜೆಟ್‌ನಲ್ಲಿಲ್ಲ ಒತ್ತು: ಚಲುವರಾಯಸ್ವಾಮಿ

Public TV
By Public TV
8 hours ago
CJ Roy 6
Bengaluru City

ಬೆಲ್ಜಿಯಮ್ ದೇಶದ ಪಿಸ್ತೂಲ್‌ನಿಂದ ಸಿ.ಜೆ ರಾಯ್ ಶೂಟೌಟ್

Public TV
By Public TV
8 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?