Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಾಜಭವನಕ್ಕೂ ಬಾಂಬ್ ಬೆದರಿಕೆ ಹಾಕುವ ಧೈರ್ಯ, ಭಯೋತ್ಪಾದಕರ ಕೇಂದ್ರ ಆಗ್ತಿದೆ ರಾಜ್ಯ: ಈಶ್ವರಪ್ಪ ಕಿಡಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ರಾಜಭವನಕ್ಕೂ ಬಾಂಬ್ ಬೆದರಿಕೆ ಹಾಕುವ ಧೈರ್ಯ, ಭಯೋತ್ಪಾದಕರ ಕೇಂದ್ರ ಆಗ್ತಿದೆ ರಾಜ್ಯ: ಈಶ್ವರಪ್ಪ ಕಿಡಿ

Districts

ರಾಜಭವನಕ್ಕೂ ಬಾಂಬ್ ಬೆದರಿಕೆ ಹಾಕುವ ಧೈರ್ಯ, ಭಯೋತ್ಪಾದಕರ ಕೇಂದ್ರ ಆಗ್ತಿದೆ ರಾಜ್ಯ: ಈಶ್ವರಪ್ಪ ಕಿಡಿ

Public TV
Last updated: December 12, 2023 4:59 pm
Public TV
Share
2 Min Read
KS ESHWARAPPA
SHARE

ಶಿವಮೊಗ್ಗ: ರಾಜ್ಯ ಭಯೋತ್ಪಾದಕರು, ಕೊಲೆಗಡುಕರ ಹಾಗೂ ಗೂಂಡಾಗಳ ಕೇಂದ್ರ ಆಗುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (K.S Eshwarappa) ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಲ್ಲೆಗೊಳಗಾಗಿ ನಗರದ (Shivamogga) ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭದ್ರಾವತಿಯ ಬಿಜೆಪಿ (BJP) ಕಾರ್ಯಕರ್ತ ಗೋಕುಲ್ ಕೃಷ್ಣನ್ ಅವರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಶಾಂತಿ ಪ್ರಿಯರಾದ ಕರ್ನಾಟಕ ರಾಜ್ಯದಲ್ಲಿ, ರಾಜಭವನಕ್ಕೂ ಬಾಂಬ್ ಬೆದರಿಕೆ ಹಾಕುವ ಧೈರ್ಯ ದೇಶದ್ರೋಹಿಗಳಿಗೆ ಬಂದಿದೆ. ರಾಜ್ಯ ಸರ್ಕಾರ ನಿಷ್ಕ್ರಿಯವಾಗಿದ್ದು, ಸಿಎಂ, ಡಿಸಿಎಂ, ಗೃಹ ಸಚಿವರಿಗೆ ಈ ಬಗ್ಗೆ ಸೀರಿಯಸ್‍ನೆಸ್ ಇಲ್ಲ ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಗದಗದ ಶಿಲ್ಪಿಗೆ ಆಹ್ವಾನ

ಪ್ರಕರಣವನ್ನು ಎನ್‍ಐಎಗೆ ಕೊಟ್ಟು ಭಯೋತ್ಪಾದಕರನ್ನು ಬಗ್ಗು ಬಡಿಯಿರಿ ಎಂದು ಹೇಳಬೇಕಿತ್ತು. ರಾಜ್ಯ ಸರ್ಕಾರ ಈ ರೀತಿ ಮಾಡಿದರೆ ಭಯೋತ್ಪಾದಕರಿಗೆ ಧೈರ್ಯ ಬರುತ್ತಿರಲಿಲ್ಲ. ವಿದೇಶಿ ಭಯೋತ್ಪಾದಕರನ್ನೇ ಕೇಂದ್ರ ಸರ್ಕಾರ ಮೆಟ್ಟಿ ನಿಂತಿದೆ. ರಾಜ್ಯ ಸರ್ಕಾರಕ್ಕೆ ಭಯೋತ್ಪಾದಕರನ್ನು ಕಂಡರೆ ಏಕೆ ಭಯ? ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಭಯೋತ್ಪಾದಕರಿದ್ದಾರೆ. ಮುಸ್ಲಿಂ ವೋಟು ಹೋಗುತ್ತವೆ ಎನ್ನುವ ಭಯನಾ ಎಂದು ಅವರು ಪ್ರಶ್ನಿಸಿದ್ದಾರೆ.

ಜಮೀರ್ ಅಹಮ್ಮದ್ ತೆಲಂಗಾಣದಲ್ಲಿ ಹೇಳ್ತಾರೆ, ಯು.ಟಿ ಖಾದರ್ ಅವರನ್ನು ಸ್ಪೀಕರ್ ಮಾಡಿದ್ದೇವೆ. ಎಲ್ಲಾ ಶಾಸಕರು ಅವರಿಗೆ ತಲೆಬಾಗಿ ನಮಸ್ಕರಿಸಬೇಕು. ಈ ರೀತಿ ಹೇಳಿ ತೆಲಂಗಾಣದಲ್ಲಿ ಸ್ವಲ್ಪ ಯಶಸ್ವಿಯಾಗಿದ್ದಾರೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ತೆಲಂಗಾಣದಲ್ಲಿ ಗಾಂಜಾ, ಮಟ್ಕಾ, ಡ್ರಗ್ಸ್ ಸೇರಿದಂತೆ ಅಕ್ರಮ ಚಟುವಟಿಕೆ ಎಗ್ಗಿಲ್ಲದೇ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಭದ್ರಾವತಿಯಲ್ಲಿ ಬಿಜೆಪಿ ಕಾರ್ಯಕರ್ತನ ಕಾರಿಗೆ ಕಲ್ಲು ಹೊಡೆದವರನ್ನು ಅರೆಸ್ಟ್ ಮಾಡಿದ್ದಾರೆ. ಆರೇಳು ಜನ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ದು, ಅವರನ್ನು ಅರೆಸ್ಟ್ ಮಾಡುತ್ತಿಲ್ಲ. ಪೊಲೀಸ್ ಇಲಾಖೆ ಏನು ಮಾಡ್ತಿದೆ? ಶಾಸಕನ ಮಗ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದಾನೆ ಎಂಬ ಮಾಹಿತಿ ಇದೆ. ರಾಜ್ಯದಲ್ಲಿ ಪೊಲೀಸ್ ಇಲಾಖೆ ಬದುಕಿದೆಯಾ, ಸತ್ತಿದೆಯಾ ಎಂದು ಪ್ರಶ್ನಿಸಿದ್ದಾರೆ.

ಆರ್ಟಿಕಲ್ 370ನ್ನು ರದ್ದುಪಡಿಸಿದ್ದರ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಕ್ಕ ಜಯ ಇದು. ಎರಡು ಧ್ವಜ ಹಾಗೂ ಎರಡು ಸಂವಿಧಾನ ದೇಶದಲ್ಲಿ ಇರಬಾರದು ಎಂಬುದು ಶ್ಯಾಮ್ ಪ್ರಸಾದ್ ಮುಖರ್ಜಿ, ಪಂಡಿತ್ ಧೀನದಯಾಳ್ ಉಪಾಧ್ಯಾಯ ಅವರ ಕನಸಾಗಿತ್ತು. ಅವರ ಹೋರಾಟಕ್ಕೆ ಜಯ ಸಿಕ್ಕಿದೆ. ಕಾಂಗ್ರೆಸ್‍ನಲ್ಲಿ ನೆಹರು ಅವರ ಕಾಲದಿಂದಲೇ ಕೀಳು ಮಟ್ಟದ ರಾಜಕಾರಣ ಇತ್ತು. ಮುಸ್ಲಿಮರನ್ನು ಓಲೈಸುವ ಕೆಲಸ ನೆಹರು ಕಾಲದಲ್ಲೇ ಇತ್ತು. ನೆಹರು ರಕ್ತದಲ್ಲಿದ್ದ ಮುಸ್ಲಿಂ ಓಲೈಕೆ, ಸಿದ್ದರಾಮಯ್ಯ ಅವರ ರಕ್ತದಲ್ಲೂ ಬಂದಿದೆ. ಕಾಂಗ್ರೆಸ್ ನವರು ವಿಧಿ ಇಲ್ಲದೇ ಸುಪ್ರೀಂ ಕೋರ್ಟ್ ತೀರ್ಪು ಒಪ್ಪಿದ್ದಾರೆ. ಆರ್ಟಿಕಲ್ 370 ರದ್ದಾದರೆ ರಕ್ತದ ಕೋಡಿ ಹರಿಯುತ್ತದೆ ಎಂದು ಮುಸ್ಲಿಂ ನಾಯಕರು ಹೇಳಿದ್ದರು. ಜಮ್ಮು ಕಾಶ್ಮೀರದಲ್ಲಿ ಸಂಭ್ರಮಾಚರಣೆ ನಡೆದಿದೆ ಎಂದು ಅವರು ಹೇಳಿದ್ದಾರೆ.

ಸಾವರ್ಕರ್ ಫೋಟೋ ವಿಚಾರವಾಗಿ, ನೀವೆಲ್ಲ ಇರುವಾಗಲೇ ಫೋಟೋ ಹಾಕಲಾಗಿತ್ತು, ಆಗ ಬಾಯಲ್ಲಿ ಬೆಣ್ಣೆ ಅಥವಾ ಮಣ್ಣು ಇಟ್ಟುಕೊಂಡಿದ್ರಾ? ಪ್ರಿಯಾಂಕ್ ಖರ್ಗೆಯವರು ಪ್ರಚಾರಕ್ಕಾಗಿ ಈಗ ಮಾತಾಡುತ್ತಿದ್ದಾರೆ. ಅವತ್ತೇ ಸಭೆಯನ್ನು ತೊರೆಯಬಹುದಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ರಾಜಸ್ಥಾನ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ ಆಯ್ಕೆ

TAGGED:congressk s eshwarappapoliticsshivamoggaಈಶ್ವರಪ್ಪಕಾಂಗ್ರೆಸ್ಬಿಜೆಪಿರಾಜಕೀಯ
Share This Article
Facebook Whatsapp Whatsapp Telegram

Cinema news

Nora Fatehi
ʻಸರ್ಸೆ ಸರ್ಸೆ ಸೆರಗ ಸರ್ಸೆʼ ಹಾಡಿನ ವಿವಾದ – ಮಹಿಳಾ ಆಯೋಗದಿಂದ ಫಿಲ್ಮ್ ಚೇಂಬರ್‌ಗೆ ಪತ್ರ
Bollywood Cinema Latest Sandalwood Top Stories
Salman Khan
ಸಲ್ಮಾನ್ ಖಾನ್ ಅಭಿನಯದ `ಬ್ಯಾಟಲ್ ಆಫ್ ಗಲ್ವಾನ್’ ಈಗ `ಮಾತೃಭೂಮಿ’
Bollywood Cinema Latest Top Stories
Oscars 2026 Michael B Jordan Jessie Buckley
Oscars 2026: ಮೈಕೆಲ್ ಬಿ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ
Cinema Latest Top Stories World
Dhurandhar 2 Trailer
ರಿಲೀಸ್‌ಗೂ ಮುನ್ನವೇ 100 ಕೋಟಿ ಬಾಚಿದ ಧುರಂಧರ್‌-2
Bollywood Cinema Latest Top Stories

You Might Also Like

shivamogga murder case two sentenced to life imprisonment
Court

ಶಿವಮೊಗ್ಗ | ವ್ಯಕ್ತಿಯ ಸಜೀವ ದಹನ – ಇಬ್ಬರಿಗೆ ಜೀವಾವಧಿ ಶಿಕ್ಷೆ

Public TV
By Public TV
19 minutes ago
Siddarmaiah
Bengaluru City

SSLC ಪರೀಕ್ಷೆಗೆ ಹಾಜರಾಗುತ್ತಿರುವ ಮಕ್ಕಳಿಗೆ ಶುಭಕೋರಿದ ಸಿಎಂ

Public TV
By Public TV
27 minutes ago
Priyank Kharge 4
Belgaum

ಬೆಳಗಾವಿಯಲ್ಲಿ ಐಟಿ, ಸೆಮಿಕಂಡಕ್ಟರ್ ಪಾರ್ಕ್‌ ಸ್ಥಾಪಿಸಲು ಕ್ರಮ: ಪ್ರಿಯಾಂಕ್‌ ಖರ್ಗೆ

Public TV
By Public TV
32 minutes ago
RB Timmapur
Bengaluru City

ಅಕ್ರಮ ಮದ್ಯ ಮಾರಾಟವನ್ನು ಮಾದಕ ವಸ್ತುನಿಯಂತ್ರಣ ಕಾಯ್ದೆಯಡಿ ಸೇರಿಸಲು ಕ್ರಮ: ತಿಮ್ಮಾಪುರ್‌

Public TV
By Public TV
49 minutes ago
UT Khader
Bengaluru City

ಉತ್ತರ ಕೊಡದ ಇಲಾಖೆಗಳು – ಸಚಿವರಿಗೆ ಸಿಎಂ ಪತ್ರ, ಖಡಕ್ ವಾರ್ನಿಂಗ್, ವಿಧಾನಸಭೆಯಲ್ಲಿ ಪಟ್ಟಿ ಓದಿದ ಸ್ಪೀಕರ್

Public TV
By Public TV
55 minutes ago
Ali Larijani
Latest

ಎಚ್ಚರಿಕೆ ನೀಡಿದ ಮರುದಿನವೇ ಇರಾನ್ ಭದ್ರತಾ ಮುಖ್ಯಸ್ಥ ಲಾರಿಜಾನಿ ಹತ್ಯೆ: ಇಸ್ರೇಲ್‌

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?