ತಿರುಪತಿ ದೇವಾಲಯದ ಬಳಿ ಬಾಲಕಿಯನ್ನು ಕೊಂದಿದ್ದ ಚಿರತೆ ಸೆರೆ

Public TV
1 Min Read
ttd

ಅಮರಾವತಿ: ಆಂಧ್ರಪ್ರದೇಶದ ತಿರುಪತಿಯ ಪ್ರಸಿದ್ಧ ತಿರುಮಲ ದೇವಾಲಯದ (TTD) ಬಳಿ 6 ವರ್ಷದ ಬಾಲಕಿಯನ್ನು ಕೊಂದಿದ್ದ ಚಿರತೆಯನ್ನು (Leopard) ಸೆರೆಹಿಡಿಯಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಕಳೆದ ವಾರ 6 ವರ್ಷದ ಬಾಲಕಿ ಲಕ್ಷಿತಾ ತನ್ನ ಪೋಷಕರೊಂದಿಗೆ ತಿರುಮಲ ಬೆಟ್ಟಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿತ್ತು. ಬಾಲಕಿ ಪೋಷಕರೊಂದಿಗೆ ಪಾದಯಾತ್ರೆಯಲ್ಲಿದ್ದಾಗ ಆಕೆ ಕಾಡಿಗೆ ಹೋಗಿದ್ದಾಳೆ ಎಂದು ಶಂಕಿಸಲಾಗಿದೆ. ಬಳಿಕ ತಿರುಪತಿಯ ಬೆಟ್ಟದ ದೇಗುಲಕ್ಕೆ ಹೋಗುವ ಪಾದಾಚಾರಿ ಮಾರ್ಗದಲ್ಲಿ ಪೊದೆ ಪ್ರದೇಶದಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಆಕೆಯ ಮೃತದೇಹದ ಮೇಲೆ ಕಾಡು ಪ್ರಾಣಿ ದಾಳಿ ಮಾಡಿದ್ದ ಗಾಯದ ಗುರುತುಗಳು ಪತ್ತೆಯಾಗಿತ್ತು.

KRS Leopard

ಇದಾದ ಬಳಿಕ ಪ್ರದೇಶದಲ್ಲಿ 12 ಕ್ಯಾಮೆರಾಗಳನ್ನು ಅಳವಡಿಸಲಾಗತ್ತು. ಶನಿವಾರ ರಾತ್ರಿ ಪ್ರದೇಶದಲ್ಲಿ ಚಿರತೆಯ ಚಲನವಲನ ದಾಖಲಾಗಿತ್ತು. ಬಳಿಕ ಅರಣ್ಯಾಧಿಕಾರಿಗಳು ಬೋನು ಹಾಕಿ ಇದೀಗ ಚಿರತೆಯನ್ನು ಸೆರೆಹಿಡಿದಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಶಾಸಕ ಇಕ್ಬಾಲ್‌ ಹುಸೇನ್‌ರಿಂದ 2.70 ಲಕ್ಷ ಲಡ್ಡು ವಿತರಣೆ

ಬಾಲಕಿಯ ಸಾವಿನ ಬಳಿಕ ಮಕ್ಕಳೊಂದಿಗೆ ಟ್ರಕ್ಕಿಂಗ್ ತೆರಳುವಾ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ತಿರುಮಲ ತಿರುಪತಿ ದೇವಸ್ಥಾನ (Tirumala Tirupati Devasthanam) ಪೋಷಕರಲ್ಲಿ ಕೇಳಿಕೊಂಡಿದೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೊಂದಿಗೆ ಯಾತ್ರಾರ್ಥಿಗಳು ಬೆಳಗ್ಗೆ 5 ರಿಂದ ಮಧ್ಯಾಹ್ನ 2 ಗಂಟೆಯ ನಡುವೆ ಮಾತ್ರ ಪಾದಯಾತ್ರೆ ಮಾಡಬಹುದು ಎಂದು ದೇವಾಲಯದ ಆಡಳಿತ ತಿಳಿಸಿದೆ. ಇಷ್ಟು ಮಾತ್ರವಲ್ಲದೇ ದ್ವಿಚಕ್ರ ವಾಹನ ಸಂಚಾರವನ್ನು ಸಂಜೆ 6 ರಿಂದ ಬೆಳಗ್ಗೆ 6 ಗಂಟೆಯ ವರೆಗೆ ನಿರ್ಬಂಧಿಸಲಾಗಿದೆ.

ಜೂನ್‌ನಲ್ಲಿ ಇದೇ ಪ್ರದೇಶದಲ್ಲಿ 3 ವರ್ಷದ ಬಾಲಕ ಚಿರತೆ ದಾಳಿಗೆ ಒಳಗಾಗಿದ್ದು, ಆತನನ್ನು ತಕ್ಷಣವೇ ರಕ್ಷಿಸಲಾಗಿತ್ತು. ಸುಮಾರು 150 ಕ್ಯಾಮೆರಾಗಳನ್ನು ಬಳಸಿ ಅದನ್ನು ಪತ್ತೆ ಹಚ್ಚಿ ಸೆರೆಹಿಡಿದ ಬಳಿಕ ದೂರದ ಕಾಡಿಗೆ ಬಿಡಲಾಗಿತ್ತು. ಇದನ್ನೂ ಓದಿ: ಸೋಲುವುದು ಕೂಡ ಒಳ್ಳೆಯದೇ, ಒಂದು ಸರಣಿ ಮ್ಯಾಟರ್‌ ಅಲ್ವೇ ಅಲ್ಲ – ಪಾಂಡ್ಯ ಸಮರ್ಥನೆ

Web Stories

Share This Article