ಶಿವಮೊಗ್ಗ: ಕಾಂಗ್ರೆಸ್‍ನಲ್ಲಿ (Congress) 60 ಕ್ಷೇತ್ರಗಳಲ್ಲಿ ಸರಿಯಾದ ಅಭ್ಯರ್ಥಿಗಳೇ ಇಲ್ಲ. ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಕಾದು ಕುಳಿತು ಪಕ್ಷಕ್ಕೆ ಬರುವಂತೆ ಕರೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗದಲ್ಲಿ (Shivamogga) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಒಳಗಡೆ ಬಹಳ ಶೂರತ್ವದಲ್ಲಿ ಮಾತನಾಡುತ್ತಾರೆ ಆದರೆ ಒಳಗಡೆ ಬೇರೆಯೇ ಇರುತ್ತದೆ. ಹೀಗಾಗಿ ಕಳೆದ ಬಾರಿಗಿಂತ ಈ ಬಾರಿ ಬಹಳ ಹೀನಾಯವಾಗಿ ಸೋಲು ಅನುಭವಿಸುತ್ತದೆ. ಕಾಂಗ್ರೆಸ್‍ಗೆ ಸರಿಯಾದ ಅಭ್ಯರ್ಥಿ ಇಲ್ಲ, ಸ್ಪಷ್ಟವಾದ ನೀತಿ ಇಲ್ಲ, ಮೀಸಲಾತಿ (Reservation), ಅಭಿವೃದ್ಧಿ ಯಾವುದು ಇಲ್ಲ. ಕೇವಲ ಉಡಾಫೆ ಮಾತನಾಡಿ ಚುನಾವಣೆ ಗೆಲ್ಲಬಹುದು ಎಂಬ ಭ್ರಮೆಯಲ್ಲಿದ್ದಾರೆ. ಅದು ಎಂದಿಗೂ ಸಾಧ್ಯವಿಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಪ್ರಧಾನಿಯ ಶೈಕ್ಷಣಿಕ ಅರ್ಹತೆಯ ಕೊರತೆ ದೇಶಕ್ಕೆ ಅಪಾಯಕಾರಿ: ಮನೀಶ್ ಸಿಸೋಡಿಯಾ
ಪೈಪೋಟಿ ಹೆಚ್ಚು ಇದ್ದಾಗ, ಆಕಾಂಕ್ಷಿಗಳು ಸಹಜವಾಗಿ ಹೆಚ್ಚು ಇರುತ್ತಾರೆ. ಇದು ಬಿಜೆಪಿಯಲ್ಲೂ (BJP) ಇದೆ. ಏ.7 ಹಾಗೂ 8 ರಂದು ಸಭೆ ನಡೆಸಿ ನಂತರ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ. ಕೆಳಹಂತದ ಕಾರ್ಯಕರ್ತರು, ಪದಾಧಿಕಾರಿಗಳು, ಜನರ ಭಾವನೆ ಆಧರಿಸಿ ಈ ಬಾರಿ ಟಿಕೆಟ್ ಹಂಚಿಕೆ ನಡೆಯಲಿದೆ ಎಂದಿದ್ದಾರೆ.
ಕಿಚ್ಚ ಸುದೀಪ್ (Sudeep) ಅವರನ್ನು ಯಾರು ಬೇಕಾದರೂ ಪ್ರಚಾರಕ್ಕೆ ಕರೆಯಲಿ. ಹೋಗುವುದು, ಬಿಡುವುದು ಅವರ ಆಯ್ಕೆಗೆ ಬಿಟ್ಟಿದ್ದು. ಅವರೇ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ನಾನು ಕಷ್ಟದಲ್ಲಿ ಇದ್ದಾಗ ಯಾರು ಸ್ಪಂದಿಸಲಿಲ್ಲ. ಬೊಮ್ಮಾಯಿ ಅವರು ಸ್ಪಂದಿಸಿದರು ಎಂದಿದ್ದಾರೆ. ಇದನ್ನು ಬೇರೆಯವರು ಅರ್ಥ ಮಾಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಈಗ ಪುರುಷರ ಪಾರುಪತ್ಯ- ಹಿಂದೆ ಮಹಿಳೆಯರದ್ದೆ ಗದ್ದುಗೆ