ಬೆಂಗಳೂರು: ಕಾಂಗ್ರೆಸ್ (Congress) 60 ವರ್ಷ ಅವಧಿಯಲ್ಲಿ ಅಕ್ರಮ ಮಾಡಿದ್ರೆ ಅದನ್ನು ಈ ಸರ್ಕಾರ ತನಿಖೆ ಮಾಡಿಸಲಿ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಬಿಜೆಪಿಗೆ (BJP) ಸವಾಲು ಹಾಕಿದ್ದಾರೆ.
60 ವರ್ಷ ಕಾಂಗ್ರೆಸ್ ಸಾಧನೆ ಭ್ರಷ್ಟಾಚಾರ ಮಾತ್ರ ಅಂತ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದ ಸಚಿವ ಕೆ.ಸುಧಾಕರ್ (K.Sudhakar) ಹೇಳಿಕೆಗೆ ಟ್ರಿನಿಟಿ ಸರ್ಕಲ್ನಲ್ಲಿ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಭಾಗಿಯಾಗಿ ತಿರುಗೇಟು ನೀಡಿದ ಸಿದ್ದರಾಮಯ್ಯ, ಕೊರೊನಾ (Corona) ಸಮಯದಲ್ಲಿ ಲೂಟಿ ಮಾಡಿದವರು ಯಾರು? ಸುಧಾಕರ್ ಯಾರ ಪಕ್ಷದಲ್ಲಿ ಇದ್ದರು. ಈಗ ನಮ್ಮ ವಿರುದ್ಧ ಮಾತನಾಡುತ್ತಾರೆ. ಲಸಿಕೆ, ಔಷಧಿ, ಬೆಡ್ನಲ್ಲಿ ಹಣ ಮಾಡಿದ್ದು ಇವರೇ ಅಲ್ಲವೇ? ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಈ ಬಾರಿಯೂ ಸಿದ್ದರಾಮಯ್ಯ ಸುತ್ತಲೂ 360° ಚಕ್ರವ್ಯೂಹ ರಚನೆ?
ಕಾಂಗ್ರೆಸ್ನವರು ಅವರ ಮುಖ ನೋಡಿಕೊಳ್ಳಲಿ ಎಂಬ ಸಚಿವ ಸುಧಾಕರ್ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನಮ್ಮ ಮುಖಗಳು ಸರಿಯಾಗಿಯೇ ಇವೆ. ಅವರ ಮುಖ ಮೊದಲು ಕನ್ನಡಿಯಲ್ಲಿ ನೋಡಿಕೊಳ್ಳಲಿ. 60 ವರ್ಷ ಅಕ್ರಮ ಮಾಡಿದ್ರೆ ತನಿಖೆ ಮಾಡಿಸಲಿ. ಈಗ ಮಾತಾಡಿದ್ರೆ ಹೇಗೆ? ಈ ಸರ್ಕಾರದಲ್ಲಿ ಲಂಚ ಇಲ್ಲದೆ ಏನು ಆಗ್ತಿಲ್ಲ. ಡಿಸಿಪಿ, SP ಪೋಸ್ಟಿಂಗ್ಗೆ ಲಂಚ ಕೊಡಬೇಕು. ಎಲ್ಲಾ ಕಡೆ ಲಂಚ, ಲಂಚ, ಲಂಚ. ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಅಂತ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಮಾಡಿರುವ ಕರ್ಮಕಾಂಡ ಮುಚ್ಚಿಹಾಕಲೆಂದೇ ಲೋಕಾಯುಕ್ತ ಮುಚ್ಚಿದರು: ಬೊಮ್ಮಾಯಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k