ಕಳೆದ ವರ್ಷ ಭಾರತೀಯ ಸಿನಿಮಾ ರಂಗದಲ್ಲಿ ಭಾರೀ ಸಂಚಲನ ಮೂಡಿಸಿದ್ದ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಇದೀಗ ಮತ್ತೆ ರಿರಿಲೀಸ್ (Rerelease) ಆಗುತ್ತಿದೆ. ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾ ಇನ್ನೂರಕ್ಕೂ ಹೆಚ್ಚು ಕೋಟಿ ರೂಪಾಯಿ ಗಳಿಸಿತ್ತು. ದೇಶದ ನಾನಾ ಭಾಷೆಗಳಿಗೆ ಡಬ್ ಆಗಿಯೂ ಬಿಡುಗಡೆ ಆಗುತ್ತಿದೆ. ಸಿನಿಮಾ ಬಿಡುಗಡೆಯ ದಿನದಿಂದ ಈವರೆಗೂ ಒಂದಿಲ್ಲೊಂದು ವಿವಾದಕ್ಕೂ ಈ ಸಿನಿಮಾ ಕಾರಣವಾಗಿತ್ತು.
ಸಿನಿಮಾ ಥಿಯೇಟರ್ ನಲ್ಲಿ ರಿಲೀಸ್ ಆಗಿ, ಟಿವಿಯಲ್ಲೂ ಪ್ರಸಾರವಾಗಿ, ಓಟಿಟಿಯಲ್ಲೂ ಇರುವ ಈ ಸಿನಿಮಾವನ್ನು ಇಂದು ಮತ್ತೆ ಬಿಡುಗಡೆ ಮಾಡುತ್ತಿರುವುದಕ್ಕೆ ಕಾರಣವನ್ನು ತಿಳಿಸಿದ್ದಾರೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದು ಕಾಶ್ಮೀರ ಪಂಡಿತರ ಹತ್ಯೆಯ ಹಿನ್ನೆಲೆಯಾಗಿಟ್ಟುಕೊಂಡು ತಯಾರಾದ ಸಿನಿಮಾ. ಆ ಹತ್ಯೆ ನಡೆದು ಇಂದಿಗೆ 33 ವರ್ಷಗಳು. ಆ ಗೌರವಾರ್ಥವಾಗಿ ಸಿನಿಮಾ ರಿಲೀಸ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸಿನಿಮಾರಂಗಕ್ಕೆ ದಾರಿ ತೋರಿಸಿದ್ದೇ ರಕ್ಷಿತ್, ರಿಷಬ್: ನಟಿ ರಶ್ಮಿಕಾ ಮಂದಣ್ಣ
ಕಾಶ್ಮೀರ ಪಂಡಿತರ ನರಮೇಧ ನಡೆದು ಜನವರಿ 19ಕ್ಕೆ 33 ವರ್ಷಗಳು ಆಗುತ್ತಿವೆ. ಇಂತಹ ಕರಾಳ ಅಧ್ಯಾಯವನ್ನು ಮತ್ತೊಮ್ಮೆ ಜನರಿಗೆ ನೆನಪಿಸಬೇಕು. ನರಹತ್ಯೆಯಲ್ಲಿ ಹತರಾದ ಕಾಶ್ಮೀರ ಪಂಡಿತರಿಗೆ ಗೌರವವನ್ನು ಸೂಚಿಸುವುದಕ್ಕಾಗಿ ಇಂದು ಮತ್ತೆ ದಿ ಕಾಶ್ಮೀರ್ ಫೈಲ್ಸ್ ತೆರೆಯ ಮೇಲೆ ಇರಲಿದೆ. ಪ್ರಕಾಶ್ ಬೆಳವಾಡಿ, ಅನುಪಮ್ ಖೇರ್ (Anupam Kher) ಸೇರಿದಂತೆ ಹಲವು ನುರಿತ ಕಲಾವಿದರು ಈ ಸಿನಿಮಾದಲ್ಲಿ ಇದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k