ಬಹುಭಾಷಾ ನಟಿಯಾಗಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ದು ಮಾಡ್ತಿದ್ದಾರೆ. ಸದ್ಯ `ಮಿಷನ್ ಮಜ್ನು’ (Mission Majnu) ಚಿತ್ರದ ಪ್ರಚಾರ ಕಾರ್ಯದಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಕಿರಿಕ್ ಬ್ಯೂಟಿ ರಶ್ಮಿಕಾ, ರಕ್ಷಿತ್ ಮತ್ತು ರಿಷಬ್ ಮತ್ತು ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನ ನೆನಪಿಸಿಕೊಂಡಿದ್ದಾರೆ. ಇಬ್ಬರ ಬಗ್ಗೆ ಮಾತನಾಡಿರುವ ನಟಿಯ ಹೇಳಿಕೆ ಸಖತ್ ಸದ್ದು ಮಾಡುತ್ತಿದೆ.
ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದೇ ಕಿರಿಕ್ ಪಾರ್ಟಿ ಸಿನಿಮಾದಿಂದ, ರಿಷಬ್ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ರಶ್ಮಿಕಾ ನಟಿಸಿದ್ದರು. ಎರಡನೇ ಸಿನಿಮಾ `ಅಂಜನಿಪುತ್ರ’ ಚಿತ್ರದಲ್ಲಿ ಪುನೀತ್ ಜೊತೆ ರಶ್ಮಿಕಾ ನಟಿಸಿದ್ದರು. ರಶ್ಮಿಕಾ ನಟಿಸಿದ ಈ ಎರಡು ಸಿನಿಮಾಗಳ ಬಗ್ಗೆ ಸಂದರ್ಶನವೊಂದರಲ್ಲಿ ಮತ್ತೆ ಪ್ರಶ್ನೆ ಎದುರಾಗಿದೆ. ಈ ನಟಿ ಅಚ್ಚರಿಯ ಹೇಳಿಕೆಯನ್ನ ಕೊಟ್ಟಿದ್ದಾರೆ. ಇದನ್ನೂ ಓದಿ: ದುಬೈಗೆ ಹಾರಿದ ರಿಷಬ್ ಶೆಟ್ಟಿ ಫ್ಯಾಮಿಲಿ: ಶೆಟ್ರ ಅಡ್ವೆಂಚರ್ ಹೇಗಿದೆ ಗೊತ್ತಾ?
ರಕ್ಷಿತ್ ಶೆಟ್ಟಿ (Rakshith Shetty) ಹಾಗೂ ರಿಷಬ್ (Rishab) ಅವರು ಸಿನಿಮಾ ಇಂಡಸ್ಟ್ರಿಯ (Film Industry) ದಾರಿ ತೋರಿಸಿದರು. ಅವರು ನನಗೆ ಅವಕಾಶ ನೀಡಿದರು. `ಅಂಜನಿಪುತ್ರ’ ಚಿತ್ರದಲ್ಲಿ ಪುನೀತ್ ಜೊತೆ ನಟಿಸಿದೆ. ಅವರು ವಿಶಾಲವಾಗಿ ಹೇಗೆ ಆಲೋಚಿಸೋದು ಅಂತಾ ಹೇಳಿಕೊಟ್ಟರು. ನಾನು ನಾಲ್ಕು ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನೇ ಅಚ್ಚರಿಗೊಳ್ಳುತ್ತೇನೆ. ನನ್ನ ಕಡೆಯಿಂದ ಅವರಿಗೆ ಧನ್ಯವಾದ ಎಂದಿದ್ದಾರೆ ರಶ್ಮಿಕಾ.
ಇದೀಗ ರಶ್ಮಿಕಾ ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ. ಕೆಟ್ಟ ಮೇಲೆ ಈಗ ಬುದ್ಧಿ ಬಂತಾ ಅಂದರೆ, ಇನ್ನೂ ಕೆಲವರು ನಮ್ಮವರಾಗಲು ಪ್ರಯತ್ನಿಸಬೇಡಿ ಎಂದು ರಶ್ಮಿಕಾಗೆ (Rashmika) ಟಾಂಗ್ ಕೊಟ್ಟಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k