ನಟರಾಕ್ಷಸ ಧನಂಜಯ್ ನಟನೆಯ ʻOnce Upon a Time In ಜಮಾಲಿಗುಡ್ಡʼ ಸಿನಿಮಾ ತೆರೆಗೆ ಬರಲು ಕೌಂಟ್ಡೌನ್ ಶುರುವಾಗಿದೆ. ಈ ವರ್ಷದ ಅಂತ್ಯಕ್ಕೆ ಡಾಲಿ ಮತ್ತು ಅದಿತಿ ಜೋಡಿ, ಮೋಡಿ ಮಾಡಲು ಸಜ್ಜಾಗಿದ್ದಾರೆ.
ನಿಹಾರಿಕಾ ಮೂವೀಸ್ (Niharika Movies) ನಿರ್ಮಾಣದ `ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರಕ್ಕೆ ಕುಶಾಲ್ ಗೌಡ ನಿರ್ದೇಶನ ಮಾಡಿದ್ದಾರೆ. ಇದೊಂದು 90ರ ದಶಕದ ಕಾಲ್ಪನಿಕ ಪ್ರಪಂಚದ ಭಾವನಾತ್ಮಕ ಕಥೆಯಾಗಿದ್ದು, ಧನಂಜಯ್ ಮತ್ತು ಬೇಬಿ ಪ್ರಾಣ್ಯ ನಡುವಿನ ಸನ್ನಿವೇಶಗಳು ಸುಂದರವಾಗಿ ಮೂಡಿ ಬಂದಿದೆ. ಈ ಚಿತ್ರವನ್ನು ಚಿಕ್ಕಮಗಳೂರು ಮತ್ತು ಬಾಬಾಬುಡನ್ಗಿರಿ ಸೇರಿದಂತೆ ಹಲವೆಡೆ ಚಿತ್ರೀಕರಿಸಲಾಗಿದೆ. ಇದನ್ನೂ ಓದಿ: ಬಾಲಿವುಡ್ನಿಂದ ಬಂತು ಬಿಗ್ ಆಫರ್: ಬನ್ಸಾಲಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ

ಇನ್ನೂ ನಟಿ ಅದಿತಿ ಪ್ರಭುದೇವಾ (Aditi Prabhudeva) ಕೂಡ ಮೊದಲ ಬಾರಿಗೆ ಧನಂಜಯ್ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಅದಿತಿ ಕೂಡ ಮಧ್ಯಮ ವರ್ಗದ ಸಿಂಪಲ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಟಿ ಸಿಗರೇಟ್ ಕೂಡ ಸೇದಿದ್ದಾರಂತೆ. ಡಾಲಿ, ಅದಿತಿ ಜೊತೆ ಭಾವನಾ (Bhavana) ಕೂಡ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರದಲ್ಲಿ ಧನಂಜಯ್, ಅದಿತಿ, ಭಾವನಾ, ಪ್ರಕಾಶ್ ಬೆಳವಾಡಿ, ಪ್ರಾಣ್ಯ, ಯಶ್ ಶೆಟ್ಟಿ, ತ್ರಿವೇಣಿ ರಾವ್ ನಟಿಸಿದ್ದಾರೆ.


