ಬೀಜಿಂಗ್: ಚೀನಾದಲ್ಲಿ (China) ಸುರಿಯುತ್ತಿರುವ ಭಾರೀ ಮಳೆ ಮತ್ತು ಪ್ರವಾಹದಿಂದ ಹಾವುಗಳ ಸಂತಾನೋತ್ಪತ್ತಿ ಕೇಂದ್ರಗಳು ಹಾನಿಗೊಳಗಾಗಿವೆ. ಇದರ ಪರಿಣಾಮ ಗುವಾಂಗ್ಕ್ಸಿ (Guangxi) ಪ್ರದೇಶದಲ್ಲಿ 900ಕ್ಕೂ ಹೆಚ್ಚು ಸರ್ಪಗಳು ತಪ್ಪಿಸಿಕೊಂಡಿವೆ.
ಪ್ರವಾಹದಿಂದ ಗುವಾಂಗ್ಕ್ಸಿ ಸುತ್ತಲಿನ ಗ್ರಾಮಗಳು ಜಲಾವೃತವಾಗಿವೆ. ಕೆರೆಯಂತೆ ಕಾಣುತ್ತಿರುವ ಹಳ್ಳಿಗಳಲ್ಲಿ ಹಾವುಗಳು ಎಲ್ಲಡೆ ಕಾಣಿಸಿಕೊಳ್ಳುತ್ತಿವೆ. ನೀರಿನಲ್ಲಿ ಗ್ರಾಮಗಳೊಳಗೆ ಈಜಾಡುತ್ತಿರುವ ವಿಷಸರ್ಪಗಳು ಜನರಲ್ಲಿ ಭಾರೀ ಆತಂಕ ಮೂಡಿಸಿವೆ. ಈಗಾಗಲೇ ಹಲವರಿಗೆ ವಿಷಸರ್ಪಗಳು ಕಚ್ಚಿದ ಘಟನೆಗಳೂ ವರದಿಯಾಗಿವೆ.
ಪ್ರವಾಹದಿಂದ ತಳಿ ಸಾಕಣೆ ಕೇಂದ್ರಗಳ ಬೇಲಿಗಳು ಒಡೆದಿದ್ದು, ನಾಗರಹಾವು ಸೇರಿ ಹಲವು ವಿಷಕಾರಿ ಹಾವುಗಳು ಹೊರಬಂದಿವೆ. ರಸ್ತೆಗಳು, ಗ್ರಾಮಗಳು ಮತ್ತು ಪ್ರವಾಹದ ನೀರಿನಲ್ಲಿ ಹಾವುಗಳು ಈಜಾಡುತ್ತಿರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಹಾವು ಕಡಿತಕ್ಕೆ ಸಾವನ್ನಪ್ಪಿರುವವ ಘಟನೆಯೂ ಸಹ ನಡೆದಿದೆ.
ಸ್ಥಳೀಯ ಆಡಳಿತ ತಪ್ಪಿಸಿಕೊಂಡ ಹಾವುಗಳನ್ನು ಹಿಡಿಯಲು ವಿಶೇಷ ತಂಡಗಳನ್ನು ನಿಯೋಜಿಸಿದೆ. ಹಾವು ಕಚ್ಚಿದವರಿಗೆ ತಕ್ಷಣ ಚಿಕಿತ್ಸೆ ನೀಡಲು ತಾತ್ಕಾಲಿಕ ವೈದ್ಯಕೀಯ ಕೇಂದ್ರಗಳನ್ನೂ ತೆರೆಯಲಾಗಿದೆ. ಇದನ್ನೂ ಓದಿ; ಯುಎಸ್ ಫೆಡ್‌ನ ಪ್ರಮುಖ ನೀತಿ ಪರಿಶೀಲನಾ ಕಾರ್ಯಪಡೆಗೆ ರಘುರಾಮ್ ರಾಜನ್, ರಾಜ್ ಚೆಟ್ಟಿ, ಆಶಾ ಶರ್ಮಾ ನೇಮಕ
ಗುವಾಂಗ್ಕ್ಸಿ ಚೀನಾದ ಅತಿದೊಡ್ಡ ವಾಣಿಜ್ಯ ಹಾವು ಸಾಕಣೆ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿ ಸಾಂಪ್ರದಾಯಿಕ ಔಷಧ, ಚರ್ಮ ಹಾಗೂ ಮಾಂಸಕ್ಕಾಗಿ ಲಕ್ಷಾಂತರ ಹಾವುಗಳನ್ನು ಸಾಕಲಾಗುತ್ತದೆ. ಪ್ರವಾಹದ ಹೊಡೆತದಿಂದ ಹಲವು ಸಾಕಣೆ ಕೇಂದ್ರಗಳು ಜಲಾವೃತಗೊಂಡಿವೆ.
ಇದರ ಜೊತೆಗೆ ಭಾರೀ ಮಳೆಯಿಂದ ಆರು ಮಂದಿ ಮೃತಪಟ್ಟಿದ್ದು, ಸುಮಾರು 1.30 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 8 ಸಾವಿರಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ ಮತ್ತು ಸಾವಿರಾರು ದೋಣಿಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.
📌 Hengzhou, #China 🇨🇳 July 6 /2026
After days of heavy rain 🌧️ and flooding across China, around 900 snakes 🐍 escaped from a breeding farm in Hengzhou. Reports say the reptiles included venomous cobras, with villagers attempting to catch them in the floodwaters. pic.twitter.com/cTcgAZ4nZd— CAUGHTIN4KHQ (@CaughtIn4KHQ) July 9, 2026
ಪ್ರವಾಹದಿಂದ ಹಂದಿ ಸಾಕಣೆ ಕೇಂದ್ರಗಳು, ಕೃಷಿ ಜಮೀನುಗಳು ಹಾಗೂ ಮೃಗಾಲಯಗಳಿಗೂ ಹಾನಿಯಾಗಿದೆ. ಮೃಗಾಲಯದಿಂದ ಅಲ್ಪಕಾ, ಚಿಕ್ಕ ಹಂದಿಗಳು ಹಾಗೂ ಜೀಬ್ರಾ ಸೇರಿದಂತೆ 100ಕ್ಕೂ ಹೆಚ್ಚು ಪ್ರಾಣಿಗಳು ತಪ್ಪಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ; ಚೆನ್ನೈನಲ್ಲಿ ಬಿಗ್ ಬ್ಯಾಷ್ ಲೀಗ್ ಉದ್ಘಾಟನಾ ಪಂದ್ಯ – ಆಸೀಸ್ ಪ್ರಧಾನಿ ಅಧಿಕೃತ ಘೋಷಣೆ
