ಬೆಂಗಳೂರು: ನಗರದ (Bengaluru) ನಾನಾ ಭಾಗದಲ್ಲಿ ಪಟಾಕಿ (Firecrackers) ಸಿಡಿತದಿಂದ 9 ಮಂದಿಯ ಕಣ್ಣಿಗೆ (Eyes) ಹಾನಿಯಾಗಿದೆ. ಗಾಯಗೊಂಡವರಿಗೆ ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ದೀಪಾವಳಿಯ (Deepavali) ಸಂಭ್ರಮದಲ್ಲಿ ಪಟಾಕಿ ಸಿಡಿಸುವಾಗ ಈ ಅವಘಡ ನಡೆದಿದೆ. ಪಟಾಕಿ ಸಿಡಿತದಿಂದ ಕಣ್ಣಿಗೆ ಯಾವ ಪ್ರಮಾಣದ ಹಾನಿಯಾಗಿದೆ ಎಂಬುದು ತಿಳಿದುಬಂದಿಲ್ಲ. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ.
ಹಬ್ಬದ ಸಂಭ್ರಮದಲ್ಲಿ ಪಟಾಕಿ ಹೊಡೆಯುವಾಗ ಮುಂಜಾಗ್ರತ ಕ್ರಮಕೈಗೊಳ್ಳಬೇಕು. ಆದಷ್ಟು ದೂರದಿಂದಲೇ ಪಟಾಕಿ ಹಚ್ಚಬೇಕು. ಭಾರೀ ಸ್ಫೋಟಗೊಳ್ಳುವ ಪಟಾಕಿಯನ್ನು ಮಕ್ಕಳಿಗೆ ನೀಡಬಾರದು. ಸುರಕ್ಷಿತವಾದ ಕನ್ನಡಕ ಧರಿಸಿ ಪಟಾಕಿ ಹಚ್ಚಬೇಕು. ಆಗ ಇಂತಹ ಅವಘಡಗಳನ್ನು ತಪ್ಪಿಸಬಹುದಾಗಿದೆ.
