Advertisements

71ರ ವೃದ್ಧೆಯನ್ನು ಅತ್ಯಾಚಾರಗೈದಿದ್ದ 31ರ ಕಾಮುಕ ಅರೆಸ್ಟ್

ಬೆಂಗಳೂರು: 71 ವರ್ಷದ ವೃದ್ಧೆಯನ್ನ ಅತ್ಯಾಚಾರಗೈದಿದ್ದ 31 ವರ್ಷದ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisements

ಬೆಂಗಳೂರಿನ ಕೋರಮಂಗಲದ 6ನೇ ಬ್ಲಾಕ್‍ನಲ್ಲಿ ವೃದ್ಧೆ ವಾಸವಾಗಿದ್ದರು. ಇವರ ಬಾಡಿಗೆ ಮನೆಯಲ್ಲಿಯೇ ಅರೋಪಿ ಜ್ಯೂಲಿರೋಸ್ ವಾಸವಾಗಿದ್ದನು. ವೃದ್ಧೆಗೆ ಸಹಾಯ ಮಾಡುವ ನೆಪದಲ್ಲಿ ಜ್ಯೂಲಿರೋಸ್ ಮಹಿಳೆಗೆ ಹತ್ತಿರವಾಗಿದ್ದನು. ಹಾಗಾಗಿ ಮನೆಗೆ ಬಂದು ಹೋಗಿ ಮಾಡುತ್ತಿದ್ದನು.

Advertisements

ಕೆಲ ದಿನಗಳ ಹಿಂದೆ ವೃದ್ಧೆ ಮಲಗಿದ್ದ ವೇಳೆ ಜ್ಯೂಲಿರೋಸ್ ಅತ್ಯಾಚಾರಗೈದು ಪರಾರಿಯಾಗಿದ್ದನು. ಅತ್ಯಾಚಾರದ ಬಳಿಕ ಸಂತ್ರಸ್ತ ವೃದ್ಧೆ ಕೋರಮಂಗಲ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

Advertisements
Exit mobile version