ಬೊಗೊಟಾ: ಕೈದಿಗಳು ಗಲಭೆ ನಡೆಸಿ ಹಾಸಿಗೆಗಳಿಗೆ ಬೆಂಕಿ ಹಚ್ಚಿದ ಪರಿಣಾಮ 51 ಮಂದಿ ಕೈದಿಗಳು ಮೃತಪಟ್ಟಿದ್ದು, ಗಾರ್ಡ್‌ಗಳು ಸೇರಿದಂತೆ 24 ಮಂದಿ ಗಾಯಗೊಂಡಿರುವ ಘಟನೆ ಪಶ್ಚಿಮ ಕೊಲಂಬಿಯಾದ ಟೊಲುವಾದಲ್ಲಿನ ಜೈಲಿನಲ್ಲಿ ನಡೆದಿದೆ.
ಜೈಲಿನ ಕೈದಿಗಳು ಪರಸ್ಪರ ಜಗಳ ಮಾಡಿಕೊಂಡಿದ್ದಾರೆ. ಒಬ್ಬ ಕೈದಿಯು ಜಗಳದ ಸಮಯದಲ್ಲಿ ಹಾಸಿಗೆಗಳಿಗೆ ಬೆಂಕಿ ಹಚ್ಚಿದ್ದಾನೆ. ಬೆಂಕಿ ಜ್ವಾಲೆಯು ಜೈಲಿನ ವಿಭಾಗದಲ್ಲಿ ಹರಡಿತು ಎಂದು ಕೊಲಂಬಿಯಾದ ಕಾನೂನು ಮಂತ್ರಿ ವಿಲ್ಸನ್ ರುಯಿಸ್ ತಿಳಿಸಿದ್ದಾರೆ. ಇದನ್ನೂ ಓದಿ: ತಂದೆಯ ಗನ್‍ನೊಂದಿಗೆ ಆಟವಾಡುತ್ತಿದ್ದ 8ರ ಬಾಲಕ- ತಂಗಿಗೆ ಗುಂಡಿಕ್ಕಿ ಹತ್ಯೆ
Advertisement
Advertisement
ದೇಶದ ಜೈಲಿನಲ್ಲಿ ನಡೆದ ಅತಿ ದೊಡ್ಡ ಗಲಭೆ ಹಾಗೂ ಸಾವು-ನೋವಿನ ಪ್ರಕರಣ ಇದಾಗಿದೆ. ಜೈಲಿನಲ್ಲಿ ಗಲಭೆಗಳಾಗಿರುವುದು ಇದೇ ಮೊದಲೇನಲ್ಲ. 2020ರ ಮಾರ್ಚ್‌ನಲ್ಲಿ ಬೊಗೋಟಾದ ಪಿಕೋಟಾ ಸೆರೆಮನೆಯಲ್ಲಿ ನಡೆದ ಗಲಭೆಯಲ್ಲಿ 24 ಕೈದಿಗಳು ಮೃತಪಟ್ಟಿದ್ದರು.
Advertisement
ಹಿಂದಿನ ವರ್ಷ ಬ್ರೆಜಿಲಿಯನ್ ಜೈಲಿನಲ್ಲಿ ಶಿರಚ್ಛೇದ ಮಾಡಲ್ಪಟ್ಟ 16 ಮಂದಿ ಸೇರಿದಂತೆ 50 ಕ್ಕೂ ಹೆಚ್ಚು ಕೈದಿಗಳು ಕೊಲ್ಲಲ್ಪಟ್ಟಿದ್ದರು. 2018ರಲ್ಲಿ ವೆನೆಜುವೆಲಾದ ಜೈಲಿನಲ್ಲಿ ಸಂಭವಿಸಿದ ಅವಘಡದಲ್ಲಿ ಅನೇಕರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಬೈಡನ್ ಪತ್ನಿ, ಮಗಳು ಸೇರಿದಂತೆ 23 ಅಮೆರಿಕನ್ನರಿಗೆ ನಿಷೇಧ ಹೇರಿದ ರಷ್ಯಾ