InternationalLatestMain Post

ತಂದೆಯ ಗನ್‍ನೊಂದಿಗೆ ಆಟವಾಡುತ್ತಿದ್ದ 8ರ ಬಾಲಕ- ತಂಗಿಗೆ ಗುಂಡಿಕ್ಕಿ ಹತ್ಯೆ

Advertisements

ವಾಷಿಂಗ್ಟನ್: ಬಾಲಕನೊಬ್ಬ ತನ್ನ ತಂದೆಯ ಗನ್‍ನೊಂದಿಗೆ ಆಟವಾಡುತ್ತಿದ್ದಾಗ ತಂಗಿಗೆ ಗುಂಡು ಹಾರಿಸಿ ಹತ್ಯೆಗೈದ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿ ತಂದೆ ರೋಡ್ರಿಕ್ ರಾಂಡಲ್(45) ಬಂಧಿಸಲಾಗಿದೆ. ರೋಡ್ರಿಕ್ ರಾಂಡಾಲ್ ಅವರ ನಿರ್ಲಕ್ಷ್ಯ ಹಾಗೂ ಸಾಕ್ಷ್ಯ ಮರೆಮಾಚುವ ಆರೋಪದ ಮೇರೆಗೆ ಬಂಧಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

crime

ರೋಡ್ರಿಕ್ ತನ್ನಲ್ಲಿದ್ದ ಗನ್ ಅನ್ನು ಮನೆಯಲ್ಲೇ ಬಚ್ಚಿಟ್ಟಿದ್ದನು. ಇದನ್ನು ನೋಡಿದ್ದ 8 ವರ್ಷದ ಬಾಲಕ ತನ್ನ ತಾಯಿ ಮಲಗಿದ್ದ ಸಂದರ್ಭದಲ್ಲಿ ಅದನ್ನು ಹೊರತೆಗೆದು ಆಟವಾಡಲು ಪ್ರಾರಂಭಿಸಿದ್ದಾನೆ. ಇದನ್ನೂ ಓದಿ:  ಮುಂಬೈನಲ್ಲಿ ಕಟ್ಟಡ ಕುಸಿತ – 17ಕ್ಕೆ ಏರಿದ ಸಾವಿನ ಸಂಖ್ಯೆ

crime

ಆ ಸಂದರ್ಭದಲ್ಲಿ ಅಲ್ಲೆ ಇದ್ದ ತನ್ನ 2 ವರ್ಷದ ತಂಗಿಯ ಮೇಲೆ ಗುಂಡು ಹಾರಿಸಿದ್ದಾನೆ. ಇದರಿಂದ ಆಕೆ ಗಂಭೀರ ಗಾಯಗೊಂಡಿದ್ದಳು. ತಕ್ಷಣ ಆಸ್ಪತ್ರೆಗೆ ಸೇರಿಸಲಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಪ್ರವಾದಿಗಾಗಿ ಒಂದು ಕೊಲೆ ಮಾಡೋಕಾಗಲ್ವೆ? – ಉದಯಪುರ ಹತ್ಯೆಯ ಮಾಸ್ಟರ್‌ಮೈಂಡ್ ವೀಡಿಯೋ ವೈರಲ್

Live Tv

Leave a Reply

Your email address will not be published.

Back to top button