CrimeLatestLeading NewsMain PostNational

ಪ್ರವಾದಿಗಾಗಿ ಒಂದು ಕೊಲೆ ಮಾಡೋಕಾಗಲ್ವೆ? – ಉದಯಪುರ ಹತ್ಯೆಯ ಮಾಸ್ಟರ್‌ಮೈಂಡ್ ವೀಡಿಯೋ ವೈರಲ್

Advertisements

ಜೈಪುರ: ನೀವು ತುಂಬಾ ಕೊಲೆಗಳನ್ನು ಮಾಡುತ್ತೀರಿ, ಪ್ರವಾದಿಗಾಗಿ ಒಂದು ಕೊಲೆಯನ್ನು ಏಕೆ ಮಾಡಬಾರದು? ಎಂದು ಮುಸ್ಲಿಂ ಮೂಲಭೂತವಾದಿ ರಿಯಾಜ್ ಮೊಹಮ್ಮದ್ ಅಕ್ತಾರಿ ಉದಯಪುರ ಹತ್ಯೆಗೆ ಪ್ರಚೋದನೆ ನೀಡಿದ್ದ ವೀಡಿಯೋ ಈಗ ಜಾಲತಾಣದಲ್ಲಿ ವೈರಲ್ ಆಗಿದೆ.

ಉದಯಪುರದಲ್ಲಿ ಟೈಲರ್‌ನನ್ನು ಇಬ್ಬರು ಮುಸ್ಲಿಂ ಮೂಲಭೂತವಾದಿ ಯುವಕರು ಶಿರಚ್ಛೇದನ ಮಾಡಿ ಹತ್ಯೆಗೈದಿದ್ದರು. ಹತ್ಯೆಗೆ ಪ್ರಚೋದನೆ ನೀಡಿದ್ದ ಮತ್ತೊಬ್ಬ ಮುಸ್ಲಿಂ ಮೂಲಭೂತವಾದಿಯ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ. ಆರೋಪಿಗಳು ರಾಜಾಸ್ಥಾನದಲ್ಲಿ ಬಂಧನವಾಗುವುದಕ್ಕೆ ಕೆಲವೇ ಕ್ಷಣಗಳಿಗೂ ಮುನ್ನವೇ ಜೂನ್ 17ರಂದೇ ಮಾಡಿದ್ದ 2:20 ನಿಮಿಷದ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ರಾಷ್ಟ್ರಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ರೈತ

ವೀಡಿಯೋನಲ್ಲಿ ವ್ಯಕ್ತಿಯೊಬ್ಬ ಪ್ರವಾದಿ ವಿರೋಧಿಗಳ ಹತ್ಯೆಗೆ ಪ್ರಚೋದನೆ ನೀಡುವ ಜೊತೆಗೆ ರಾಜಾಸ್ಥಾನ ಸರ್ಕಾರಕ್ಕೂ ಪರೋಕ್ಷವಾಗಿ ಸವಾಲು ಹಾಕಿದ್ದಾನೆ.

ವೀಡಿಯೋ ನಲ್ಲಿ ಏನಿದೆ?
ನಾನು ನನ್ನ ಮುಸ್ಲಿಂ ಬಂಧುಗಳಿಗೆ ಮತ್ತೊಂದು ಸಂದೇಶ ನೀಡಲು ಬಯಸುತ್ತೇನೆ. ಎಲ್ಲರಿಗೂ ನನ್ನ ಕುಟುಂಬ ಏನಾಗುತ್ತದೆ? ಪರಿವಾರಕ್ಕೆ ಏನಾಗುತ್ತದೆ? ಎನ್ನುವ ಚಿಂತೆ ಇರುತ್ತದೆ. ನನಗೂ ಒಂದು ಕುಟುಂಬವಿದೆ, ಕೆಲಸವಿದೆ. ಅದರ ಚಿಂತೆ ಬಿಟ್ಟುಬಿಡಿ. ನೀವು ಎಷ್ಟೋ ಕೊಲೆಗಳನ್ನು ಮಾಡುತ್ತೀರಿ ಪ್ರವಾದಿಗಾಗಿ ಏಕೆ ಒಂದು ಕೊಲೆಯನ್ನು ಮಾಡಬಾರದು? ಹೆದರಬೇಡಿ, ನಮಗೆ ಅಲ್ಹಾನ ಆಶ್ರಯವಿದೆ. ಹೆಚ್ಚೆಂದರೆ ಜೈಲಿಗೆ ಹಾಕುತ್ತಾರೆ. ಇದನ್ನೂ ಓದಿ: ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನದಿಂದ ಕೆಳಗಿಳಿದ ಮುಖೇಶ್ ಅಂಬಾನಿ – ಮಗ ಆಕಾಶ್‌ಗೆ ಪಟ್ಟ

ಉದಯಪುರದಲ್ಲಿ ದೊಡ್ಡದೊಡ್ಡ ದಾದಾಗಳಿಗೆ ನಾನೊಂದು ಸವಾಲು ಹಾಕುತ್ತೇನೆ. ನನ್ನಂಥವರನ್ನು ಕೊಲ್ಲಬೇಕು, ನಮ್ಮ ಆಸ್ತಿಗಳನ್ನು ಜಪ್ತಿ ಮಾಡಬೇಕು ಅನ್ನೋರು ಗಟ್ಸ್ ಇದ್ದರೆ ಮಾಡಲಿ, ಇಲ್ಲವಾದರೆ ಬಳೆಗಳನ್ನು ತೊಟ್ಟುಕೊಳ್ಳಲಿ ಎಂದು ಸವಾಲು ಹಾಕಿದ್ದಾನೆ.

Live Tv

Leave a Reply

Your email address will not be published.

Back to top button