LatestLeading NewsMain PostTechTelecom

ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನದಿಂದ ಕೆಳಗಿಳಿದ ಮುಖೇಶ್ ಅಂಬಾನಿ – ಮಗ ಆಕಾಶ್‌ಗೆ ಪಟ್ಟ

Advertisements

ಮುಂಬೈ: ರಿಲಯನ್ಸ್ ಜಿಯೋ ನಿರ್ದೇಶಕರಾಗಿದ್ದ ಮುಖೇಶ್ ಅಂಬಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ತಮ್ಮ ಹಿರಿಯ ಮಗ ಆಕಾಶ್‌ಗೆ ನಿರ್ದೇಶಕ ಸ್ಥಾನವನ್ನು ಹಸ್ತಾಂತರಿಸಿದ್ದಾರೆ.

ಕಂಪನಿಯ ನಿರ್ದೇಶಕರ ಮಂಡಳಿ ಸೋಮವಾರ ನಡೆದ ಸಭೆಯಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಕಾಶ್ ಅಂಬಾನಿ ಅವರನ್ನು ಕಂಪನಿಯ ಅಧ್ಯಕ್ಷರನ್ನಾಗಿ ನೇಮಿಸಲು ಅನುಮೋದನೆ ನೀಡಿದೆ. ಈ ಬಗ್ಗೆ ರಿಲಯನ್ಸ್ ಇನ್ಫೋಕಾಮ್ ಭಾರತೀಯ ಷೇರು ಮಾರುಕಟ್ಟೆಗಳಿಗೆ ಮಾಹಿತಿ ನೀಡಿದೆ. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ – ಕೆಎಸ್‌ಆರ್‌ಟಿಸಿ ವಿದ್ಯಾರ್ಥಿ ಬಸ್ ಪಾಸ್ ಅವಧಿ ವಿಸ್ತರಣೆ

ಆಕಾಶ್ ಅಂಬಾನಿ ಅಮೆರಿಕದ ಬ್ರೌನ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ಪದವೀಧರರಾಗಿದ್ದು, ಅವರು ಹೊಸ ತಂತ್ರಜ್ಞಾನಗಳು ಹಾಗೂ ಸಾಮರ್ಥ್ಯಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಡೇಟಾ ಮತ್ತು ತಂತ್ರಜ್ಞಾನವನ್ನು ಎಲ್ಲರಿಗೂ ಸುಲಭವಾಗಿ ತಲುಪಿಸಲು ಕೆಲಸ ಮಾಡುವುದಾಗಿ ಕಂಪನಿ ತಿಳಿಸಿದೆ.

ಇದರೊಂದಿಗೆ ಮಂಡಳಿ ತನ್ನ ಸಭೆಯಲ್ಲಿ ಪಂಕಜ್ ಮೋಹನ್ ಪವಾರ್ ಅವರನ್ನು 5 ವರ್ಷಗಳ ಅವಧಿಗೆ ರಿಲಯನ್ಸ್ ಜಿಯೋ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲು ಅನುಮೋದಿಸಿದೆ. ರಮಿಂದರ್ ಸಿಂಗ್ ಗುಜ್ರಾಲ್ ಹಾಗೂ ಕೆ.ವಿ ಚೌಧರಿ ಅವರನ್ನು ಸ್ವತಂತ್ರ ನಿರ್ದೇಶಕರನ್ನಾಗಿ ನೇಮಿಸಿದೆ. ಇದನ್ನೂ ಓದಿ: ದಿಢೀರ್ ಭಾರೀ ಇಳಿಕೆಯಾಗಲಿದೆ ಫೋನ್ ಬೆಲೆ

ರಾಜೀನಾಮೆ ನೀಡಿದ್ದರೂ ರಿಲಯನ್ಸ್ ಜಿಯೋ ಸೇರಿದಂತೆ ಎಲ್ಲಾ ಜಿಯೋ ಡಿಜಿಟಲ್ ಬ್ರ್ಯಾಂಡ್‌ಗಳ ಕಂಪನಿ ಜಿಯೋ ಪ್ಲಾಟ್‌ಫಾರ್ಮ್ ಲಿಮಿಟೆಡ್‌ನ ಅಧ್ಯಕ್ಷರಾಗಿ ಮುಖೇಶ್ ಅಂಬಾನಿಯೇ ಮುಂದುವರಿಯಲಿದ್ದಾರೆ. ಅಂಕಿ ಅಂಶಗಳ ಪ್ರಕಾರ ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಜಿಯೋ ಏಪ್ರಿಲ್‌ನಲ್ಲಿ 16.8 ಲಕ್ಷ ಮೊಬೈಲ್ ಚಂದಾದಾರರನ್ನು ಗಳಿಸಿದೆ. ದೇಶದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದ ಟೆಲಿಕಾಂ ನೆಟ್‌ವರ್ಕ್ ಪೈಕಿ ಮೊದಲ ಸ್ಥಾನದಲ್ಲಿದೆ.

Live Tv

Leave a Reply

Your email address will not be published.

Back to top button