ಚೆನ್ನೈ: ಇವತ್ತು ಸಂಜೆ ಚೆಪಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯಕ್ಕೆ ಸುಮಾರು 4000 ಪೊಲೀಸರನ್ನು ನಿಯೋಜಿಸಲಾಗಿದೆ. ಕಾವೇರಿ ನಿರ್ವಹಣಾ ಮಂಡಳಿ ರಚನೆಗಾಗಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಂದ್ಯಕ್ಕೆ ಅಡ್ಡಿಯಾಗದಂತೆ ಈ ವ್ಯವಸ್ಥೆಯನ್ನು ಮಾಡಲಾಗಿದೆ.
ಕಾವೇರಿ ನಿರ್ವಹಣಾ ಮಂಡಳಿ ರಚನೆಯಾಗುವರೆಗು ಚೆನ್ನೈನಲ್ಲಿ ನಡೆಯಲಿರುವ 7 ಪಂದ್ಯಗಳನ್ನು ನಡೆಸದಂತೆ ಅಥವಾ ಮುಂದೂಡುವಂತೆ ರಾಜಕೀಯ ಪಕ್ಷಗಳು ಹಾಗೂ ಸಣ್ಣ ಪುಟ್ಟ ಸಂಘಟನೆಗಳು ಒತ್ತಾಯ ಮಾಡುತ್ತಿವೆ. ಪಂದ್ಯ ವೀಕ್ಷಣೆಯನ್ನು ಬಹಿಷ್ಕರಿಸುವಂತೆ ಪ್ರೇಕ್ಷಕರಿಗೆ ಕರೆ ಕೊಟ್ಟಿದ್ದಾರೆ.
Advertisement
ಖಾಲಿ ಕ್ರೀಡಾಂಗಣ ಕೇಂದ್ರಕ್ಕೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಕುರಿತು ಸಂದೇಶವನ್ನು ಕಳಿಸುತ್ತದೆ. ಕೆಲವು ಸಂಘಟನೆಗಳು ಪಂದ್ಯ ನಡೆಯುವ ವೇಳೆ ಕಪ್ಪು ಬಾವುಟ ಪ್ರದರ್ಶನಕ್ಕೆ ಸಜ್ಜಾಗಿವೆ.
Advertisement
ಅಹಿತಕರ ಘಟನೆ ನಡೆಯದಂತೆ ತಡೆಯಲು ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಪ್ರೇಕ್ಷಕರಿಗೆ ಬ್ಯಾನರ್, ಮೊಬೈಲ್ ಪೋನ್, ಕ್ಯಾಮೆರಾಗಳನ್ನು ಕ್ರೀಡಾಂಗಣದೊಳಗೆ ನಿಷೇಧಿಸಲಾಗಿದೆ. ಅವಾಚ್ಯ ಶಬ್ದಗಳನ್ನು ಬಳಸುವಂತಿಲ್ಲ ಎಂದು ಎಚ್ಚರಿಕೆ ಕೊಡಲಾಗಿದೆ. ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಕಾವೇರಿ ಪ್ರತಿಭಟನೆ ನಡೆಯುತ್ತಿರುವಾಗಲೇ ಐಪಿಎಲ್ ಪಂದ್ಯ ಆಯೋಜನೆ ಮಾಡಿರುವುದು ಮುಜುಗರದ ಸಂಗತಿಯಾಗಿದೆ. ಪಂದ್ಯಗಳನ್ನು ಆಯೋಜನೆ ಮಾಡದಂತೆ ಸೂಪರ್ ಸ್ಟಾರ್ ರಜನಿಕಾಂತ್ ಮನವಿ ಮಾಡಿದ್ದರು. ಕಾವೇರಿ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಪ್ಪು ಪಟ್ಟಿ ಧರಿಸುವುದರ ಮೂಲಕ ಪ್ರತಿಭಟನೆಗೆ ಬೆಂಬಲ ತೋರಿಸುವಂತೆ ತಿಳಿಸಿದ್ದರು. ಪ್ರೇಕ್ಷಕರು ಕೂಡ ಕಪ್ಪು ಬಟ್ಟೆ ಧರಿಸಿ ನೋಡುವುದರ ಮೂಲಕ ಪ್ರತಿಭಟನೆಗೆ ಬೆಂಬಲ ನೀಡವಂತೆ ತಿಳಿಸಿದ್ದರು.
Advertisement
ರಾಜಕಾರಣ ಕ್ರೀಡೆ ಎರಡೂ ಬೇರೆ. ರೈತರ ಬಗ್ಗೆ ನಮಗೆ ಕನಿಕರ ಇದೆ. ಪಂದ್ಯಗಳನ್ನು ರದ್ದುಮಾಡುವುದು ಕಾವೇರಿ ಸಮಸ್ಯೆಗೆ ಉತ್ತರ ಅಲ್ಲ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.
ಇಂದು ಚೆನ್ನೈ ಸೂಪರ್ ಕಿಂಗ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯ ಸಂಜೆ 8 ಗಂಟೆಗೆ ಚೆಪಕ್ ಕ್ರೀಡಾಂಗಣದಲ್ಲಿ ನಡೆಯಲಿದೆ.