ಹೈದರಾಬಾದ್: ಒಂದುವರೆಕೋಟಿ ಬೆಲೆ ಬಾಳುವ ಚಿನ್ನದ ಸರವನ್ನು ವ್ಯಕ್ತಿ ಕೋಣವೊಂದಕ್ಕೆ ತೊಡಿಸಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಹರಿಯಾಣದಿಂದ ಒಂದು ಕೋಣವನ್ನು ತರಿಸಲಾಗಿದ್ದು, ಅದಕ್ಕೆ ಬಾಹುಬಲಿ ಕೋಣ ಎಂದು ಹೆಸರಿಡಲಾಗಿದೆ. ಹೈದರಾಬಾದ್ನ ಚಾಪೆಲ್ ಬಜಾರ್ನ ಲಡ್ಡು ಯಾದವ್ ಎಂಬಾತ ಕೋಣವನ್ನು ಹರಿಯಾಣದ ಬಲ್ವೀರ್ ಸಿಂಗ್ ಎಂಬಾತನಿಂದ ತಂದು, ಸದರ್ ಉತ್ಸವದಲ್ಲಿ ಪ್ರದರ್ಶಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಬೊಕ್ಕಸಕ್ಕೆ 2,100 ಕೋಟಿ ಆದಾಯ ನಷ್ಟ: ಸಿಎಂ
- Advertisement 2
- Advertisement 3
ಈ ಕೋಣವನ್ನು ಪ್ರದರ್ಶನಕ್ಕಾಗಿ ಮಾತ್ರ ತಂದಿದ್ದು, ಇದಕ್ಕೆ ಕೋಣದ ಮಾಲೀಕ ಬಲ್ವೀರ್ ಸಿಂಗ್ ಯಾವುದೇ ಹಣವನ್ನೂ ಪಡೆದಿಲ್ಲ. ಕೋಣ ತಂದ ಲಡ್ಡು ಯಾದವ್ ಸುಮಾರು 3 ಕೆ.ಜಿ ತೂಕವಿರುವ, ಒಂದೂವರೆ ಕೋಟಿ ಬೆಲೆ ಬಾಳುವ ಚಿನ್ನದ ಸರವನ್ನು ಕೋಣಕ್ಕೆ ತೊಡಿಸಿದ್ದಾನೆ. ನಿಜಾಮರ ಕಾಲದಿಂದಲೂ ಸದರ್ ಉತ್ಸವ ಪ್ರತಿ ವರ್ಷ ನಡೆಯುತ್ತಿದ್ದು, ಹಸುಗಳು, ಎಮ್ಮೆ, ಎತ್ತು ಕೋಣಗಳನ್ನು ಈ ಉತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ. ಇದನ್ನೂ ಓದಿ: ದಲಿತರ ಬಗ್ಗೆ ಮಾತನಾಡಿದ್ರೆ ಮುಂದಿನ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕಾಗುತ್ತೆ: ಮುನಿಸ್ವಾಮಿ
- Advertisement 4
ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಮೆರುಗು ನೀಡುವ ಕೋಣಗಳ ಉತ್ಸವವಾದ ಸದರ್ ಉತ್ಸವಕ್ಕೆ ಹೈದರಾಬಾದ್ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಾಹುಬಲಿ ಕೋಣ ಸಾಕಷ್ಟು ಗಮನ ಸೆಳೆಯುತ್ತಿದೆ.