– 81 ಕೆಜಿಯಿಂದ 225ಕೆಜಿಯವರೆಗೆ ತೂಕ ಹೆಚ್ಚಳ
ಫ್ಲೋರಿಡಾ: 225 ಕೆಜಿ ತೂಕವಿರುವ ಓರ್ವ ವ್ಯಕ್ತಿ ತನ್ನ ಆನ್‍ಲೈನ್ ಫಾಲೋವರ್ಸ್‍ಗಳಿಗಾಗಿ ದಿನ 10 ಸಾವಿರ ಕ್ಯಾಲೊರಿ ಫುಡ್ ತಿನ್ನುತ್ತಿದ್ದಾರೆ.
ತನ್ನ ತೂಕವನ್ನು ಜಾಸ್ತಿ ಮಾಡಿಕೊಳ್ಳಲು ಗೇನರ್ ಬುಲ್ ಹೆಸರಿನ ವ್ಯಕ್ತಿ ದಿನಕ್ಕೆ 10 ಸಾವಿರ ಕ್ಯಾಲೋರಿ ಆಹಾರ ತಿನ್ನುತ್ತಾರೆ. ಇವರ ನಿಜವಾದ ಹೆಸರು ಬ್ರಿಯಾನ್. 20 ವರ್ಷಗಳ ಹಿಂದೆ ಕೇವಲ 81 ಕೆಜಿ ತೂಕವಿದ್ದಾಗ ತನ್ನ ತೂಕ ಹೆಚ್ಚಿಸುವ ಕೆಲಸವನ್ನು ಪ್ರಾರಂಭಿಸಿದರು. ಈಗ ಅವರು ಪ್ರಪಂಚದ ದಪ್ಪಗಿನ ವ್ಯಕ್ತಿಗಳ ಸಮುದಾಯದ ಸದಸ್ಯರಾಗಿದ್ದಾರೆ ಮತ್ತು ತೂಕವನ್ನು ಹೆಚ್ಚಿಸುವಲ್ಲಿ ಸಂತೋಷವನ್ನು ಪಡೆಯುತ್ತಾರೆ.
Advertisement
https://www.instagram.com/p/B-QrlKKjO-S/?utm_source=ig_embed
Advertisement
ಈ ಬಗ್ಗೆ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಬ್ರಿಯಾನ್, ನಾನು ಮೊದಲಿನಿಂದ ಈ ರೀತಿ ದಪ್ಪ ವ್ಯಕ್ತಿಯಾಗಬೇಕು ಎಂದುಕೊಂಡವನಲ್ಲ. ಆದರೆ ನಾನು ಚಿಕ್ಕ ವಯಸ್ಸಿನಲ್ಲಿ ಇರಬೇಕಾದರೆ, ದಪ್ಪ ದಪ್ಪ ಇರುವ ಗೊಂಬೆಗಳನ್ನು ಟಿವಿಯಲ್ಲಿ ನೋಡುತ್ತಿದ್ದೆ. ಆಗ ನನಗೆ ನಾನೂ ಈ ರೀತಿ ಆಗಬೇಕು ಎಂದುಕೊಂಡಿದ್ದೆ. ಅದರಂತೆ ನಾನು 24 ವರ್ಷವಿದ್ದಾಗ ತೂಕವನ್ನು ಹೆಚ್ಚಿಸಿಕೊಳ್ಳಬೇಕು ಎಂದು ತೀರ್ಮಾನ ಮಾಡಿದೆ ಎಂದು ಹೇಳಿದ್ದಾರೆ.
Advertisement
https://www.instagram.com/p/CDUIfNKJBSu/?utm_source=ig_embed
Advertisement
ಬ್ರಿಯಾನ್ ಪ್ರತಿದಿನ ಸುಮಾರು 10,000 ಕ್ಯಾಲೊರಿಗಳನ್ನು ತಿನ್ನುತ್ತಾರೆ. ಇದು ಸಾಮಾನ್ಯ ಮನುಷ್ಯನು ದಿನದಲ್ಲಿ ಸೇವಿಸುವ ಆಹಾರ ಪ್ರಮಾಣಕ್ಕಿಂತ ನಾಲ್ಕು ಪಟ್ಟು ಹೆಚ್ಚಳವಾಗಿದೆ. ಜೊತೆಗೆ ದಿನಪೂರ್ತಿ ತಿನ್ನುವ ಕೆಲಸದಲ್ಲಿ ನಿರತರಾಗಿರುವ ಬ್ರಿಯಾನ್ ಇದರಿಂದ ಹಣವನ್ನು ಗಳಿಸುತ್ತಾರೆ. ಅವರು ಇನ್ಸ್ಟಾಗ್ರಾಮ್ ಖಾತೆಯನ್ನು ಸಹ ಹೊಂದಿದ್ದು, ಅಲ್ಲಿ ಅವರು ತಮ್ಮ ದಿನಚರಿಯ ಫೋಟೋ ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಇದರಿಂದ ಅವರಿಗೆ ಹಣ ಗಳಿಸುತ್ತಿದ್ದಾರೆ.