ದಾವಣಗೆರೆ: ಇತ್ತೀಚೆಗಷ್ಟೇ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ (SS Mallikarjun) ಒಡೆತನದ ಕಲ್ಲೇಶ್ವರ ಮಿಲ್ ಹಿಂಭಾಗದ ಫಾರ್ಮಹೌಸ್‌ನಲ್ಲಿ ಪತ್ತೆ ಆಗಿದ್ದ ವನ್ಯ ಜೀವಿಗಳ ಪೈಕಿ ಕೃಷ್ಣಮೃಗ (Blackbuck) ಹಾಗೂ ಕಾಡುಹಂದಿ (Wild Boar) ಮೃತಪಟ್ಟಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಖಾತ್ರಿ ಪಡಿಸಿದ್ದಾರೆ.
ಡಿ.21ಕ್ಕೆ ಕಲ್ಲೇಶ್ವರ ಮಿಲ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದ ವೇಳೆ ಒಟ್ಟು 30 ಜೀವಿಗಳನ್ನು ವಶಕ್ಕೆ ಪಡೆದು, ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿತ್ತು. ಜೊತೆಗೆ ಘಟನೆಯ ಕುರಿತು ಸಂಪಣ್ಣ, ಕರಿಬಸವಯ್ಯ, ಸೆಂಥಿಲ್ ಹಾಗೂ ಮಿಲ್‌ನ ಮಾಲೀಕರಾದ ಮಾಜಿ ಸಚಿವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
Advertisement
Advertisement
ಇದಾದ ಬಳಿಕ ಒಟ್ಟು 30 ವನ್ಯಜೀವಿಗಳನ್ನು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶದಂತೆ ಅರಣ್ಯ ಇಲಾಖೆ ಕಲ್ಲೇಶರ ಮಿಲ್ ಹಿಂಭಾಗದ ಫಾರ್ಮ್‌ಹೌಸ್‌ನಿಂದ ವಶಕ್ಕೆ ಪಡೆದು, ಕಿರು ಮೃಗಾಲಯಕ್ಕೆ ಸ್ಥಳಾಂತರಿಸಲಾಗಿತ್ತು. ಮಿಲ್‌ನಲ್ಲಿ ಪತ್ತೆಯಾದ 6 ಕಾಡು ಹಂದಿಗಳನ್ನು ಅರಣ್ಯ ಪ್ರದೇಶಕ್ಕೆ ಬಿಡಲಾಗಿದ್ದು, ಇನ್ನುಳಿದ 22 ಕಾಡು ಪ್ರಾಣಿಗಳನ್ನು ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ಬಿಡಲಾಗಿತ್ತು. ಆ ವನ್ಯ ಜೀವಿಗಳಲ್ಲಿ 11 ಕೃಷ್ಣಮೃಗ, 7 ಜಿಂಕೆ, 2 ನರಿ, 3 ಮುಂಗುಸಿ, 7 ಕಾಡು ಹಂದಿಗಳಿತ್ತು.
Advertisement
ಈ ಪೈಕಿ ಈಗಾಗಲೇ ಮೃತಪಟ್ಟಿದ್ದ ಕಾಡು ಹಂದಿಯನ್ನು ಕೋರ್ಟ್ ಆದೇಶದಂತೆ ವಿಲೇವಾರಿ ಮಾಡಲಾಗಿದೆ. ಅಲ್ಲದೆ, ಸೋಮವಾರ ಒಂದು ಕೃಷ್ಣಮೃಗ ಸಾವನ್ನಪ್ಪಿದ್ದು, ಅದರ ದೇಹ ವಿಲೇವಾರಿಗಾಗಿ ನ್ಯಾಯಾಲಯಕ್ಕೆ ಅರಣ್ಯ ಇಲಾಖೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ. ಇನ್ನುಳಿದಂತೆ ಇದೀಗ ಮೃತಪಟ್ಟಿರುವ ಒಂದು ಕೃಷ್ಣಮೃಗ ಹೊರತುಪಡಿಸಿ, 10 ಕೃಷ್ಣಮೃಗ ಹಾಗೂ 7 ಜಿಂಕೆಗಳನ್ನು ಅರಣ್ಯ ಪ್ರದೇಶಕ್ಕೆ ಬಿಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಕೋರ್ಟ್ ಅನುಮತಿ ದೊರೆತರೆ, ಅವುಗಳನ್ನು ಸಹ ಕಾಡಿಗೆ ಬಿಡಲಾಗುವುದು ಎಂದು ಅಧಿಕಾರಿಗಳು ಮಾಧ್ಯಮದವರಿಗೆ ಮಾಹಿತಿ ನೀಡಿದರು. ಇದನ್ನೂ ಓದಿ: ಗಂಜಲ ಹಾಕಿ ವಿಧಾನ ಸೌಧ ಕ್ಲೀನ್ ಮಾಡಿಸ್ತೀವಿ: ಡಿಕೆಶಿ
Advertisement
ನ್ಯಾಯಾಲಯದ ಆದೇಶದಂತೆ ಕಿರು ಮೃಗಾಲಯದಲ್ಲಿ ಇರಿಸಲಾಗಿದೆ. ಕೋರ್ಟ್ ಅನುಮತಿ ನೀಡಿದ ಪ್ರಾಣಿಗಳನ್ನು ಕಾಡಿಗೆ ಬಿಡಲಾಗಿದೆ. ಇನ್ನುಳಿದ ಪ್ರಾಣಿಗಳನ್ನು ಅರಣ್ಯ ಪ್ರದೇಶಕ್ಕೆ ಬಿಡಲು ನಿರ್ದೇಶನ ನೀಡಿದರೆ, ಅವುಗಳನ್ನು ಅರಣ್ಯ ಪ್ರದೇಶಕ್ಕೆ ಬಿಡುತ್ತೇವೆ. ಡಿಎಫ್ಓ ಜಗನ್ನಾಥ್ ಅವರು ಪ್ರಾಣಿಗಳನ್ನು ಸಾವ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದರು. ಇದನ್ನೂ ಓದಿ: ನನಗೆ ಬೆಂಬಲ ಕೊಡಿ.. ನಾನು ನಿಮಗೆ ಹಿಂದೂ ರಾಷ್ಟ್ರ ಕೊಡುತ್ತೇನೆ – ಧೀರೇಂದ್ರ ಶಾಸ್ತ್ರಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k