ಪಾಟ್ನಾ: ಅನುಚಿತ ವರ್ತನೆ ತೋರಿದ ಆರೋಪದ ಹಿನ್ನೆಲೆಯಲ್ಲಿ ದೆಹಲಿ- ಪಾಟ್ನಾ ಇಂಡಿಗೋ (Indigo) ವಿಮಾನದಲ್ಲಿ ಇಬ್ಬರು ಮದ್ಯ ಸೇವಿಸಿದ್ದ ಪ್ರಯಾಣಿಕರನ್ನು (Passengers) ಪಾಟ್ನಾ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.
ದೆಹಲಿಯಿಂದ ವಿಮಾನ ಹತ್ತುವಾಗ ಇಬ್ಬರು ಪ್ರಯಾಣಿಕರು ಕುಡಿದಿದ್ದರು. ಅದಾದ ಬಳಿಕವೂ ವಿಮಾನದಲ್ಲಿ (Flight) ಮದ್ಯ ಸೇವನೆ ಮಾಡಲು ಯತ್ನಿಸಿದ್ದರು. ಅಷ್ಟೇ ಅಲ್ಲದೇ ವಿಮಾನದಲ್ಲಿ ಆ ಇಬ್ಬರು ಪ್ರಯಾಣಿಕರು ಅನುಚಿತವಾಗಿ ವರ್ತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಏರ್ಲೈನ್ಸ್ ಏರ್ ಟ್ರಾಫಿಕ್ ಕಾಂಟ್ರೊಲ್ಗೆ ಮಾಹಿತಿ ನೀಡಲಾಗಿತ್ತು.
ವಿಮಾನದಲ್ಲಿ ಮದ್ಯ ಸೇವನೆಯನ್ನು ನಿಷೇಧದ ಹಿನ್ನೆಲೆಯಲ್ಲಿ ಇಬ್ಬರು ಪ್ರಯಾಣಿಕರನ್ನು ಬಂಧಿಸಿದ್ದಾರೆ. ವಿಮಾನದಲ್ಲಿ ಯಾವುದೇ ಗಲಾಟೆ ನಡೆದಿಲ್ಲ ಎಂದು ಮೂಲಗಳು ತಿಳಿಸಿದೆ. ಇದೊಂದು ಗಂಭೀರ ಸಮಸ್ಯೆ ಆಗಿದ್ದು, ಆ ಇಬ್ಬರು ಆರೋಪಿಗಳಿಗೆ ವಿಮಾನದಲ್ಲಿ ಬಿಯರ್ ಎಲ್ಲಿಂದ ದೊರಕಿದೆ ಎನ್ನುವುದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಟಿಪ್ಪು ನಿಜಕನಸುಗಳು ಮಾದರಿಯಲ್ಲಿ ಸಿದ್ದು ನಿಜಕನಸುಗಳು ಪುಸ್ತಕ ಇಂದು ಬಿಡುಗಡೆ
ಇತ್ತೀಚೆಗಷ್ಟೇ ಏರ್ ಇಂಡಿಯಾ ವಿಮಾನದಲ್ಲಿ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾದಲ್ಲಿ ಮೂತ್ರವಿಸರ್ಜನೆ ಪ್ರಕರಣ ಬಳಿಕ ಗೋ ಫಸ್ಟ್ನಲ್ಲಿ ಗಗನಸಖಿಗೆ ವಿದೇಶಿಗನಿಂದ ಕಿರುಕುಳ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k