ನವದೆಹಲಿ: ಜನರು ತಮ್ಮ ಬ್ಯಾಂಕಿಂಗ್ ಪಾಸ್‌ವರ್ಡ್‌ಗಳನ್ನು (Banking Passwords) ಸುರಕ್ಷಿತವಾಗಿ ಇಟ್ಟುಕೊಳ್ಳದ ಕಾರಣ ಆನ್‌ಲೈನ್ ಕಳ್ಳತನಗಳು ಹೆಚ್ಚಾಗುತ್ತಿವೆ ಎಂದು ಲೋಕಲ್ ಸರ್ಕಲ್ಸ್ ಸಮೀಕ್ಷೆ (LocalCirles Survey) ಹೇಳಿದೆ.
ಕಳೆದ 5 ವರ್ಷಗಳಲ್ಲಿ ತಾವು ಅಥವಾ ತಮ್ಮ ಕುಟುಂಬದಲ್ಲಿ ಯಾರಾದರೂ ಒಬ್ಬರು ಆರ್ಥಿಕ ವಂಚನೆ ಅನುಭವಿಸಿದ್ದಾರೆ ಎಂದು ಒಟ್ಟು 53% ಭಾರತೀಯರು (Indians) ಹೇಳಿಕೊಂಡಿದ್ದಾರೆ ಎಂದು ಸಮೀಕ್ಷೆ ಉಲ್ಲೇಖಿಸಿದೆ. ಇದನ್ನೂ ಓದಿ: ಸಮುದ್ರದ ಅಲೆಗಳ ನಡುವೆ ಸ್ಕೂಟರ್ ಸಮೇತ ನೀರಿಗೆ ಇಳಿದ ಯುವಕ- ವೀಡಿಯೋ ವೈರಲ್
Advertisement
Advertisement
ಲೋಕಲ್ ಸರ್ಕಲ್ಸ್ ಸಮೀಕ್ಷೆಯು ಭಾರತದ 367 ಜಿಲ್ಲೆಗಳಲ್ಲಿ ನೆಲೆಸಿರುವ ನಾಗರಿಕರಿಂದ 48,000ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ. 63 ಪ್ರತಿಶತ ಪುರುಷರು, 37 ಪ್ರತಿಶತ ಮಹಿಳೆಯರು ಸಮೀಕ್ಷೆಯಲ್ಲಿ ಭಾಗಿಯಾಗಿ ಪ್ರತಿಕ್ರಿಯಿಸಿದ್ದಾರೆ. ಇದರಲ್ಲಿ ಕನಿಷ್ಠ 17% ನಾಗರಿಕರು ತಮ್ಮ ಪ್ರಮುಖ ಹಣಕಾಸಿನ ಪಾಸ್‌ವರ್ಡ್‌ಗಳನ್ನು ಮೊಬೈಲ್ (Mobile) ಫೋನ್‌ಗಳಲ್ಲಿ ಅಸುರಕ್ಷಿತ ರೀತಿಯಲ್ಲಿ ಸಂಗ್ರಹಿಸುವುದನ್ನು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಸಮುದ್ರದ ಅಲೆಗಳ ನಡುವೆ ಸ್ಕೂಟರ್ ಸಮೇತ ನೀರಿಗೆ ಇಳಿದ ಯುವಕ- ವೀಡಿಯೋ ವೈರಲ್
Advertisement
Advertisement
ಸ್ಥಳೀಯ ಸರ್ಕಲ್ಸ್ ಸಮೀಕ್ಷೆಯಲ್ಲಿ 34% ಜನರು ತಮ್ಮ ಪಾಸ್‌ವರ್ಡ್‌ಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ ಎಂದೂ ಸಮೀಕ್ಷೆ ಹೇಳಿದೆ. ಜನರು ತಮ್ಮ ಪಾಸ್‌ವರ್ಡ್‌ಗಳನ್ನು ಎಲ್ಲಿ ಸಂಗ್ರಹಿಸುತ್ತಾರೆ ಎಂದು ಕೇಳಿದ ಪ್ರಶ್ನೆಗೆ 4% ಜನರು ಮೊಬೈಲ್ ಫೋನ್ ಸಂಪರ್ಕ ಪಟ್ಟಿಯಲ್ಲಿ ಪಾಸ್‌ವರ್ಡ್‌ಗಳನ್ನು ಸಂಗ್ರಹಿಸುತ್ತಾರೆ ಎಂದು ಹೇಳಿದ್ದಾರೆ. ಇನ್ನೂ 4% ಜನರು ಫೋನ್‌ನಲ್ಲಿರುವ ಪಾಸ್‌ವರ್ಡ್ ಅಪ್ಲಿಕೇಶನ್‌ನಲ್ಲಿ, 5% ರಷ್ಟು ಜನರು ವ್ಯಾಲೆಟ್ ಅಥವಾ ಪರ್ಸ್‌ನಲ್ಲಿ ಇಟ್ಟುಕೊಳ್ಳುತ್ತಾರೆ. 14% ಜನರು ಕಂಠಪಾಠ ಮಾಡಿ ಮತ್ತು 16% ಜನರು ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಇಟ್ಟುಕೊಂಡಿರುವುದಾಗಿ ಹೇಳಿದ್ದಾರೆ.
ಎಟಿಎಂ ಮತ್ತು ಕ್ರಿಡಿಟ್ ಕಾರ್ಡ್ ಪಿನ್ ಬಗ್ಗೆ ಪ್ರಶ್ನಿಸಿದಾಗ, ಸಮೀಕ್ಷೆಯಲ್ಲಿ ಭಾಗವಹಿಸಿದ 34% ರಷ್ಟು ನಾಗರಿಕರು ತಮ್ಮ ಪ್ರಮುಖ ಪಾಸ್‌ವರ್ಡ್‌ಗಳನ್ನು ಬೇರೆಯವರೊಂದಿಗೆ ಹಂಚಿಕೊಂಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಇವರಲ್ಲಿ, 28 ಪ್ರತಿಶತದಷ್ಟು ಜನ ತಮ್ಮ ಕುಟುಂಬ ಸದಸ್ಯರಲ್ಲಿ ಒಬ್ಬರು ಅಥವಾ ಹೆಚ್ಚಿನವರು ತಮ್ಮ ಪಾಸ್‌ವರ್ಡ್‌ಗಳನ್ನು ಹಂಚಿಕೊಂಡಿದ್ದಾರೆ. ಉಳಿದ 66% ತಮ್ಮನ್ನು ಹೊರತು ಬೇರೆ ಯಾರಿಗೂ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಒಳ್ಳೆಯ ಸ್ಟ್ಯಾಂಡಪ್ ಕಾಮಿಡಿಯನ್ ಆಕ್ಟ್ ಮಾಡಿದ್ದಾರೆ: ಕಂಗನಾ ಲೇವಡಿ