LatestMain PostNational

13 ವರ್ಷದ ಬಾಲಕನ ಕಿವಿ ಕಚ್ಚಿ ಹರಿದು ಹಾಕಿದ ಪಿಟ್‍ಬುಲ್

Advertisements

ಚಂಡೀಗಢ: 13 ವರ್ಷದ ಬಾಲಕನ ಮೇಲೆ ಪಿಟ್‍ಬುಲ್ ನಾಯಿಯೊಂದು ದಾಳಿ ನಡೆಸಿದ್ದು, ಬಾಲಕನ ಕಿವಿಯನ್ನು ಕಚ್ಚಿ ಹರಿದು ಹಾಕಿರುವ ಘಟನೆ ಪಂಜಾಬ್‍ನ ಗುರುದಾಸ್‍ಪುರ ಜಿಲ್ಲೆಯಲ್ಲಿ ನಡೆದಿದೆ.

ಗುರುದಾಸ್‍ಪುರದ ಕೋಟ್ಲಿ ಭಾನ್ ಸಿಂಗ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇದೇ ವೇಳೆ ಬಾಲಕನ ಜೊತೆಯೇ ಇದ್ದ ತಂದೆ, ಮಗನನ್ನು ನಾಯಿಯಿಂದ ಬಿಡಿಸಿಕೊಳ್ಳಲು ಹರಸಾಹಸ ಪಟ್ಟಿದ್ದಾರೆ. ಇದನ್ನೂ ಓದಿ: ಕಾಮನ್‍ವೆಲ್ತ್ ಗೇಮ್ಸ್ 2022: ಎರಡನೇ ದಿನ ಪದಕದ ನಿರೀಕ್ಷೆಯಲ್ಲಿ ಭಾರತ – ಲವ್ಲಿನಾ, ಮೀರಾಬಾಯಿ ಚಾನು ಕಣಕ್ಕೆ

ಬಾಲಕ ಮತ್ತು ಆತನ ತಂದೆ ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ, ತನ್ನ ಮಾಲೀಕರೊಂದಿಗೆ ಹೊರಗೆ ನಿಂತಿದ್ದ ಪಿಟ್‍ಬುಲ್ ನಾಯಿ ಹುಡುಗನನ್ನು ಬೊಗಳಲು ಪ್ರಾರಂಭಿಸಿತು. ಈ ವೇಳೆ ಆಕಸ್ಮಿಕವಾಗಿ ಮಾಲೀಕ ನಾಯಿಯ ಕೊರಳಿಗೆ ಕಟ್ಟಿದ್ದ ಬೆಲ್ಟ್ ಅನ್ನು ಕೈಯಿಂದ ಕೆಳಗೆ ಬಿಟ್ಟರು. ತಕ್ಷಣವೇ ನಾಯಿ ಓಡಿಬಂದು ಬಾಲಕನ ಮೇಲೆ ದಾಳಿ ಮಾಡಿತು. ಇದನ್ನೂ ಓದಿ: ಪ್ರತಿಭಟನೆ ನಡೆಸಿದವರು ABVP ಕಾರ್ಯಕರ್ತರು ಹೌದೋ ಅಲ್ವಾ ಅಂತಾ ಅನುಮಾನ: ಆರಗ

ನಂತರ ಮಾಲೀಕರು ನಾಯಿಯನ್ನು ಹದರಿಸಿ ಹಿಡಿದುಕೊಂಡು ಮಾಲೀಕ ಮನೆಗೆ ತೆರಳಿದರು. ಇದೀಗ ಗಾಯಗೊಂಡ ಬಾಲಕನನ್ನು ಚಿಕಿತ್ಸೆಗಾಗಿ ಬಟಾಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಬಾಲಕನ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ವೈದ್ಯರು ತಿಳಿಸಿರುವುದಾಗಿ ಕುಟುಂಬಸ್ಥರು ಹೇಳಿದ್ದಾರೆ.

Live Tv

Leave a Reply

Your email address will not be published.

Back to top button