10,900 ಅಕ್ರಮ ಧ್ವನಿವರ್ಧಕಗಳ ತೆರವು

Public TV
1 Min Read
loudspeakers

ಲಕ್ನೋ: ಧಾರ್ಮಿಕ ಕ್ಷೇತ್ರಗಳಲ್ಲಿ ಧ್ವನಿವರ್ಧಕಗಳನ್ನು ತೆರವು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದಲ್ಲಿ ದೊಡ್ಡ ರಾಜಕೀಯ ಹೈಡ್ರಾಮಾವೇ ನಡೆಯುತ್ತಿರುವ ಹೊತ್ತಲ್ಲಿ ಉತ್ತರ ಪ್ರದೇಶದಲ್ಲಿ ತೆರವು ಕಾರ್ಯಚರಣೆ ಆರಂಭಗೊಂಡಿದೆ. ಇತ್ತೀಚೆನ ವರದಿ ಬಳಿಕ ಉತ್ತರಪ್ರದೇಶದಲ್ಲಿ ಈವರೆಗೂ 10,900 ಅಕ್ರಮ ಮತ್ತು ಅನಧಿಕೃತ ಧ್ವನಿವರ್ಧಕಗಳನ್ನು ತೆರವು ಮಾಡಲಾಗಿದೆ.

mosque-loudspeakers

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆ ಬಳಿಕ ಕಾರ್ಯಚರಣೆ ಆರಂಭಿಸಿರುವ ಪೊಲೀಸರು ಅಕ್ರಮ ಮತ್ತು ಅನಧಿಕೃತ ಧ್ವನಿವರ್ಧಕಗಳನ್ನು ತೆರವು ಮಾಡುತ್ತಿದ್ದಾರೆ. ಅಲ್ಲದೇ 3,5000ಕ್ಕೂ ಹೆಚ್ಚು ಧ್ವನಿವರ್ಧಕಗಳನ್ನು ನಿಗದಿತ ಡೆಸಿಬಲ್ ಮಿತಿಯೊಳಗೆ ತರಲಾಗಿದೆ. ಇದನ್ನೂ ಓದಿ: ಹಲಾಲ್‌ ಮಾಂಸ, ಮಸೀದಿಗಳಲ್ಲಿ ಧ್ವನಿವರ್ಧಕ ಏಕೆ ನಿಷೇಧಿಸಬೇಕು: ಒಮರ್‌ ಅಬ್ದುಲ್ಲಾ ಪ್ರಶ್ನೆ

Yogi Adityanath

ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅವರ ಪ್ರಕಾರ, ಲಕ್ನೋದಲ್ಲಿ 2,395, ಗೋರಖಪುರ್‍ದಲ್ಲಿ 1,788 ಧ್ವನಿವರ್ಧಕಗಳ ತೆರವು ಮಾಡಲಾಗಿದೆ. 2018ರ ನ್ಯಾಯಾಲಯದ ಆದೇಶ ಪ್ರಕಾರ ಅಕ್ರಮ, ಅನಧಿಕೃತ ಧ್ವನಿವರ್ಧಕಗಳ ತೆರವು ನಡೆಯುತ್ತಿದ್ದು, ಧ್ವನಿವರ್ಧಕಗಳಿಂದ ಶಬ್ದ ಮಾಲಿನ್ಯವಾಗದಂತೆ ನಿಗದಿತ ಡೆಸಿಬಲ್ ಫಿಕ್ಸ್ ಮಾಡಲಾಗುತ್ತಿದೆ. ಇದನ್ನೂ ಓದಿ: ಕೊರೊನಾ ಇನ್ನೂ ಮುಗಿದಿಲ್ಲ, ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಿ: ಉದ್ಧವ್ ಠಾಕ್ರೆ

&

ಸರ್ಕಾರದ ಈ ಕಾರ್ಯಚರಣೆ ಆರಂಭಗೊಳ್ಳುತ್ತಿದ್ದಂತೆ ಮಥುರಾದ ಶ್ರೀಕೃಷ್ಣ ದೇವಸ್ಥಾನವೂ ಸೇರಿ ಹಲವು ಮಂದಿರ ಮಸೀದಿಗಳು ತಮ್ಮ ಧ್ವನಿವರ್ಧಕಗಳ ಡೆಸಿಬಲ್ ಅನ್ನು ಇಳಿಕೆ ಮಾಡಿಕೊಂಡರೇ ಮತ್ತಷ್ಟು ಧಾರ್ಮಿಕ ಕ್ಷೇತ್ರಗಳು ಅಕ್ರಮ ಧ್ವನಿವರ್ಧಕಗಳನ್ನು ಖುದ್ದು ತೆರವು ಮಾಡುತ್ತಿದ್ದಾರೆ. ಏಪ್ರಿಲ್ 30 ರೊಳಗೆ ಅಕ್ರಮ ಧ್ವನಿವರ್ಧಕಗಳ ತೆರವು ಆಗಬೇಕು ಎಂದು ಯೋಗಿ ಆದಿತ್ಯನಾಥ್ ಸೂಚಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *