ಮುಂಬೈ: ಕೊರೊನಾ ಇನ್ನೂ ಮುಗಿದಿಲ್ಲ, ಕೊರೊನಾ ಹರಡುವಿಕೆಯನ್ನು ತಪ್ಪಿಸಲು ಎಲ್ಲಾ ಮುನ್ನೆಚ್ಚರಿಕೆ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
ದೇಶದಲ್ಲಿ ಕೋವಿಡ್-19 ಪ್ರಕರಣಗಳು ದಿನೇ, ದಿನೇ ಹೆಚ್ಚಾಗುತ್ತಿದ್ದು, ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಬುಧವಾರ ಸಭೆ ನಡೆಸಿದ್ದರು. ಇದನ್ನೂ ಓದಿ: ತಟಸ್ಥ ಧೋರಣೆ ಯುದ್ಧವನ್ನು ನಿಲ್ಲಿಸಲು ಸಹಾಯ ಮಾಡಲ್ಲ: ಭಾರತಕ್ಕೆ ಉಕ್ರೇನ್ ಸೂಚನೆ
ಈ ಹಿನ್ನೆಲೆ ಉದ್ಧವ್ ಠಾಕ್ರೆ ಅವರು, ಕೊರೊನಾ ಇನ್ನೂ ಮುಗಿದಿಲ್ಲ. ಪ್ರಪಂಚದಾದ್ಯಂತ ಹೊಸ ವೈರಸ್‍ಗಳು ಹುಟ್ಟಿಕೊಳ್ಳುತ್ತಿದೆ. ಚೀನಾದಲ್ಲಿ ಪ್ರಸ್ತುತ 40 ಕೋಟಿ ಜನರು ಲಾಕ್‍ಡೌನ್‍ನಲ್ಲಿದ್ದಾರೆ. ನಾವು ಕೂಡ ಮೂರು ಅಲೆಗಳ ವಿರುದ್ಧ ಯಶಸ್ವಿಯಾಗಿ ಹೋರಾಡಿದ್ದರೂ, ನಮ್ಮ ಕೆಲವು ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದರು.
ಎರಡು ಡೋಸ್ ಲಸಿಕೆ ಸ್ವೀಕರಿದವರು, ಕಡ್ಡಾಯವಾಗಿ ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು ಮತ್ತು ಬೂಸ್ಟರ್ ಡೋಸ್ ಪಡೆಯಲು ನೀಡಿರುವ ಒಂಬತ್ತು ತಿಂಗಳ ಅವಧಿಯನ್ನು ಕಡಿತಗೊಳಿಸುವಂತೆ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಕಳುಹಿಸುವುದಾಗಿ ತಿಳಿಸಿದರು. ಇದನ್ನೂ ಓದಿ: ಕರಾಚಿ ಸೂಸೈಡ್ ಬಾಂಬರ್ ಎಂಫಿಲ್ ಪದವೀಧರೆ, 2 ಮಕ್ಕಳ ತಾಯಿ – ಕೃತ್ಯ ಎಸಗಿದ್ದು ಯಾಕೆ?