– ಸೀಜ್ ಆದ ಧಾನ್ಯ, ಸಿಲಿಂಡರ್, ಪೆಟ್ರೋಲ್ಗಳ ಒಟ್ಟು ಬೆಲೆ ಸುಮಾರು 10 ಕೋಟಿ ರೂ.
ಬೆಂಗಳೂರು: ಪಡಿತರ ಕಳ್ಳ ಸಾಗಣೆ ವಿರುದ್ಧ ಆಹಾರ, ಸಾರ್ವಜನಿಕ ವಿತರಣೆ ಹಾಗೂ ಗ್ರಾಹಕ ಇಲಾಖೆಯ ಅಧಿಕಾರಿಗಳ ಕಾರ್ಯಾಚರಣೆ ಮುಂದುವರೆದಿದ್ದು, ಮೂರು ತಿಂಗಳಲ್ಲಿ 17.78 ಲಕ್ಷ ಕೆಜಿ ಪಡಿತರ ಅಕ್ಕಿ, ಕಾಳು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ 215 ಜನರನ್ನು ಅರೆಸ್ಟ್ ಮಾಡಿದ್ದಾರೆ.
ಸಚಿವ ರಿಜ್ವಾನ್ ಅರ್ಷದ್ (Rizwan Arshad) ಅವರ ನಿರ್ದೇಶನದ ಮೇರೆಗೆ, ಕಳೆದ ಆಗಸ್ಟ್ 1ರಿಂದ ಪಡಿತರ ಸಾಗಣೆ ವಾಹನಗಳ ನಿರಂತರ ತಪಾಸಣೆ ಹಾಗೂ ಖಾಸಗಿ ಗೋಡೌನ್ಗಳ ಪರಿಶೀಲನೆ ನಡೆಸಲಾಗಿದೆ. ಈ ವೇಳೆ 17.78 ಲಕ್ಷ ಕೆಜಿ ಪಡಿತರ ಅಕ್ಕಿ, ಕಾಳು ವಶಪಡಿಸಿಕೊಳ್ಳಲಾಗಿದೆ. ಪ್ರಮುಖವಾಗಿ ಬೆಳಗಾವಿ ಜಿಲ್ಲೆಯೊಂದರಲ್ಲಿಯೇ 5 ಲಕ್ಷ ಕೆಜಿಗೂ ಹೆಚ್ಚು ಪಡಿತರ ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಪರಿಷತ್ನ 4 ಕ್ಷೇತ್ರಗಳಲ್ಲಿ ‘ಕೈ’ ಕಳಪೆ ಪ್ರದರ್ಶನ; ನಾಡಿದ್ದು ಹೈಕಮಾಂಡ್ ಮುಂದೆ ರಾಜ್ಯ ನಾಯಕರ ಚಾರ್ಜ್ಶೀಟ್
ಇನ್ನೂ ಕೋಲಾರ ಜಿಲ್ಲೆಯಲ್ಲಿ 3.5 ಲಕ್ಷ ಕೆಜಿ ಅಕ್ಕಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ತಲಾ 1 ಲಕ್ಷಕ್ಕೂ ಹೆಚ್ಚು ಕೆಜಿ ಪಡಿತರ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. ದಾಳಿ ವೇಳೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 238 ಎಫ್ಐಆರ್ಗಳು ದಾಖಲಾಗಿದ್ದು, 215 ಜನರನ್ನು ಬಂಧಿಸಿದ್ದಾರೆ. ಇದೇ ವೇಳೆ ಪಡಿತರ ಕಳ್ಳ ಸಾಗಣೆಗೆ ಬಳಸಲಾಗುತ್ತಿದ್ದ 156 ವಾಹನಗಳ ಜಪ್ತಿ ಮಾಡಲಾಗಿದೆ.
ಅಡುಗೆ ಅನಿಲ (ಸಿಲಿಂಡರ್) ಹಾಗೂ ಪೆಟ್ರೋಲ್/ಡೀಸೆಲ್ ಅಕ್ರಮ ದಾಸ್ತಾನುಗಳ ಮೇಲೂ ದಾಳಿ ನಡೆಸಿ ಕಳೆದ ಮೂರು ತಿಂಗಳಿನಲ್ಲಿ 14,250 ಲೀಟರ್ ಪೆಟ್ರೋಲ್ ಹಾಗೂ 1,492 ಗ್ಯಾಸ್ ಸಿಲಿಂಡರ್ಗಳ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಪಡಿತರ ಧಾನ್ಯ, ಸಿಲಿಂಡರ್ ಹಾಗೂ ಪೆಟ್ರೋಲ್ಗಳ ಒಟ್ಟು ಬೆಲೆ ಸುಮಾರು 10 ಕೋಟಿ ರೂ.ಯಾಗಿದೆ.ಇದನ್ನೂ ಓದಿ: ಕಲಬುರಗಿ ನಗರದ ಪ್ರಮುಖ ರಸ್ತೆಗಳಲ್ಲಿ ಭೂಗತ ವಿದ್ಯುತ್ ಸಂಪರ್ಕ ಜಾಲ ನಿರ್ಮಾಣಕ್ಕೆ ಯೋಜನೆ: ಪ್ರಿಯಾಂಕ್ ಖರ್ಗೆ
