ದುಬೈ: ಐಪಿಎಲ್ 2020ರ ಆವೃತ್ತಿಯಲ್ಲಿ ಭಾಗಿಯಾಗಲು ದುಬೈಗೆ ತೆರಳಿದ್ದ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರಲ್ಲಿ ಸುರೇಶ್ ರೈನಾ ಏಕಾಏಕಿ ಭಾರತಕ್ಕೆ ವಾಪಸ್ ಆಗಲು ಹೋಟೆಲ್ ರೂಮ್ ವಿಚಾರದಲ್ಲಿ ಉಂಟಾದ ಮನಸ್ತಾಪವೇ ಕಾರಣ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಆ.29 ರಂದು ಸುರೇಶ್ ರೈನಾ ಕೌಟುಂಬಿಕ ಕಾರಣದಿಂದ ಟೂರ್ನಿಯಿಂದ ಹೊರ ನಡೆಯುತ್ತಿದ್ದಾರೆ ಎಂದು ಸಿಎಸ್‍ಕೆ ಹೇಳಿತ್ತು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಅವರಿಗೆ ನೀಡಲಾಗಿದ್ದ ಹೋಟೆಲ್ ರೂಮ್‍ನಂತೆಯೇ ತಮಗೂ ಕೊಠಡಿ ಬೇಕು ಎಂದು ರೈನಾ ತಂಡದ ಮ್ಯಾನೇಜ್‍ಮೆಂಟ್ ಜೊತೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಕೊರೊನಾ ಕಾರಣದಿಂದ ಈ ಬಾರಿ ಹೆಚ್ಚಿನ ಜಾಗೃತಿಗಳನ್ನು ಕೈಗೊಳ್ಳುತ್ತಿದ್ದು, ಕುಟುಂಬದ ಸುರಕ್ಷತೆಗೆ ಸುಸಜ್ಜಿತ ಕೊಠಡಿ ನೀಡದಿರುವುದೇ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಸಿಎಸ್‍ಕೆ ತಂಡದ ಮಾಲೀಕರು ಆಡಿದ ಮಾತುಗಳು ಸದ್ಯ ಈ ಅನುಮಾನಕ್ಕೆ ಕಾರಣವಾಗಿದೆ.
Advertisement
Advertisement
ಔಟ್‍ಲುಕ್ ವರದಿ ಮಾಡಿರುವಂತೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಬಿಸಿಸಿಐ ಅಧ್ಯಕ್ಷ, ಸಿಎಸ್‍ಕೆ ತಂಡದ ಮಾಲೀಕ ಶ್ರೀನಿವಾಸನ್, ಕೆಲವೊಮ್ಮೆ ಯಶಸ್ಸು ನಿಮ್ಮ ತಲೆಗೆ ಸೇರುತ್ತದೆ. ನಾನು ಯಾರನ್ನು ಏನನ್ನೂ ಮಾಡಲು ಒತ್ತಾಯಿಸುವುದಿಲ್ಲ. ಆದರೆ ನೀವು ಹಿಂಜರಿಯುತ್ತಿದ್ದರೆ ಅಥವಾ ಸಂತೋಷವಾಗಿದ್ದರೆ ಹಿಂತಿರುಗಿ ಎಂದು ಹೇಳಿದ್ದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
Advertisement
ಕ್ರಿಕೆಟಿಗರೂ ಪ್ರೈಮಾ ಡೊನ್ನಾಸ್ (ಮುಖ್ಯ ಮಹಿಳಾ ಗಾಯಕಿ)ರಂತೆ. ಹಳೆ ದಿನಗಳ ಮನೋಧರ್ಮದ ನಟರಂತೆ. ಆದರೆ ಸೂಪರ್ ಕಿಂಗ್ಸ್ ತಂಡ ಯಾವಾಗಲೂ ಕುಟುಂಬದಂತೆಯೇ ಇದ್ದು, ಎಲ್ಲಾ ಹಿರಿಯ ಆಟಗಾರರು ಉತ್ತಮ ಬಾಂಧವ್ಯ ಕಲಿತ್ತಿದ್ದಾರೆ. ನಾನು ಧೋನಿ ಅವರೊಂದಿಗೆ ಮಾತನಾಡಿದ್ದು, ಸೋಂಕಿನ ಸಂಖ್ಯೆಗಳು ಹೆಚ್ಚಾಗಿದ್ದರೂ ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಅವರು ನನಗೆ ಭರವಸೆ ನೀಡಿದ್ದಾರೆ. ಅವರೊಂದಿಗೆ ಜೂಮ್ ಕರೆಯ ಮೂಲಕ ಮಾತನಾಡಿ, ಸುರಕ್ಷಿತವಾಗಿರಲು ಹೇಳಿದ್ದೇನೆ ಎಂದು ಶ್ರೀನಿವಾಸನ್ ಹೇಳಿದ್ದಾರೆ. ಇದನ್ನೂ ಓದಿ: ಐಪಿಎಲ್ ಶೆಡ್ಯೂಲ್‍ನಲ್ಲಿ ಬದಲಾವಣೆ- ಮೊದಲ ಪಂದ್ಯದಿಂದ ಚೆನ್ನೈ ಔಟ್
Advertisement
ಈ ಬಾರಿಯ ಆವೃತ್ತಿ ಇನ್ನೂ ಪ್ರಾರಂಭವಾಗಿಲ್ಲ. ರೈನಾ ಅವರು ಏನನ್ನು ಕಳೆದುಕೊಂಡಿದ್ದಾರೆ ಎಂಬುದನ್ನು ಖಂಡಿತ ಅರಿತುಕೊಳ್ಳುತ್ತಾರೆ. ಆದರೆ ಈ ಆವೃತ್ತಿಯ ಎಲ್ಲಾ ಹಣವನ್ನು (11 ಕೋಟಿ ರೂ.) ಅವರು ಕಳೆದುಕೊಳ್ಳಲಿದ್ದಾರೆ ಎಂದು ಸಿಎಸ್‍ಕೆ ಮಾಲೀಕ ಹೇಳಿದ್ದಾರೆ. ಸದ್ಯ ಶ್ರೀನಿವಾಸನ್ ಅವರ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಚೆನ್ನೈ ತಂಡದಲ್ಲಿ ಎಲ್ಲವೂ ಸರಿ ಇದೇಯಾ ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ. ಇದನ್ನೂ ಓದಿ: ನಾವು ಕುಟುಂಬದ ಜೊತೆ ಇದ್ದಾಗ ಮಾಸ್ಕ್ ಹಾಕಲ್ಲ- ಚಹರ್ ಕಮೆಂಟ್ ವೈರಲ್
ದುಬೈಗೆ ಪ್ರಯಾಣ ಬೆಳೆಸಿದ್ದ ಚೆನ್ನೈ ತಂಡದ ಆಟಗಾರರು ಹಾಗೂ ಸಿಬ್ಬಂದಿಯಲ್ಲಿ 12 ಮಂದಿಗೆ ಕೊರೊನಾ ಪಾಟಿಸಿವ್ ವರದಿ ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ರೈನಾ ತೀವ್ರ ಆತಂಕಕ್ಕೆ ಒಳಗಾಗಿದ್ದರು. ಆದ್ದರಿಂದಲೇ ಹೆಚ್ಚಿನ ಸುರಕ್ಷಿತೆ ಹೊಂದಿರುವ ಹೋಟೆಲ್ ಕೊಠಡಿ ಪಡೆಯಲು ಕೇಳಿದ್ದರು. ಈ ಹಂತದಲ್ಲಿ ತಂಡದ ಮ್ಯಾನೇಜ್‍ಮೆಂಟ್‍ನೊಂದಿಗೆ ಅಸಮಾಧಾನದಿಂದ ರೈನಾ ಟೂರ್ನಿಯಿಂದ ಹೊರ ನಡೆದಿದ್ದಾರೆ ಎನ್ನಲಾಗಿದೆ. ಧೋನಿ ಸಹ ರೈನಾ ಅವರಿಗೆ ಈ ಕುರಿತು ಮನವರಿಕೆ ಮಾಡಿಕೊಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಸಿಎಸ್‍ಕೆ ತಂಡದ ಬೌಲರ್ ಸೇರಿ 12 ಮಂದಿ ಸಹಾಯ ಸಿಬ್ಬಂದಿಗೆ ಕೊರೊನಾ