ಮದ್ವೆಗೂ ಮುನ್ನ ಮನೆಗೆ ಬಂದ ಅಳಿಯ – ಮಾವನ ವಿರೋಧ

1 Min Read

– ಆತ್ಮಹತ್ಯೆಗೆ ಶರಣಾದ ತಾಯಿ, ಮಗಳು

ಲಕ್ನೋ: ಮದುವೆಗೆ ಮುನ್ನವೇ ಮಗಳ ಭೇಟಿಗೆ ಅಳಿಯ ಬರೋದನ್ನ ಮಾವ ವಿರೋಧಿಸಿದ್ದರಿಂದ ಕುಟುಂಬದ ಇಬ್ಬರು ಬಾರದ ಲೋಕಕ್ಕೆ ಪಯಣ ಬೆಳೆಸಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಫತೇಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಅಳಿಯನ ಆಗಮನಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ತಾಯಿ-ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.

ದೆಹಲಿ-ಹೌರಾ ಮಾರ್ಗದಲ್ಲಿ ರೈಲಿಗೆ ತಲೆ ಕೊಟ್ಟು ತಾಯಿ, ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಲಾಯಿ ಗ್ರಾಮದ ಯುವತಿ ಮದುವೆ ಕುಟುಂಬಸ್ಥರ ಇಚ್ಛೆ ಮೇರೆಗೆ ಮೇ 26ರಂದು ನಿಶ್ಚಯವಾಗಿತ್ತು. ಆದ್ರೆ ಮದುವೆ ನಿಶ್ಚಯವಾವ ಭಾವಿ ಅಳಿಯ ಮನೆಗೆ ಬರಲಾಂಭಿಸಿದ್ದನು. ಅಳಿಯ ಮನೆಗೆ ಆಗಮಿಸೋದಕ್ಕೆ ಮಾವ ವಿರೋಧ ವ್ಯಕ್ತಪಡಿಸಿದ್ದರು.

ಈ ಸಂಬಂಧ ತಾಯಿ-ಮಗಳು ಬೇಸರವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ಮೂವರ ನಡುವೆ ಜಗಳ ನಡೆದಿದೆ. ಕೋಪದ ಕೈಯಲ್ಲಿ ಬುದ್ಧಿ ಕೊಟ್ಟ ತಾಯಿ-ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ರೈಲು ಹಳಿಗಳ ಮೇಲೆ ಶವಗಳನ್ನ ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ಪತ್ತೆಯಾದ ಮೊಬೈಲ್ ನಿಂದ ಶವಗಳನ್ನ ಗುರುತಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *