Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪಡಿಕ್ಕಲ್ ಶತಕ, ಕೊಹ್ಲಿಯಿಂದ 2 ದಾಖಲೆ – ಬೆಂಗಳೂರಿಗೆ 10 ವಿಕೆಟ್‌ಗಳ ಭರ್ಜರಿ ಜಯ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಪಡಿಕ್ಕಲ್ ಶತಕ, ಕೊಹ್ಲಿಯಿಂದ 2 ದಾಖಲೆ – ಬೆಂಗಳೂರಿಗೆ 10 ವಿಕೆಟ್‌ಗಳ ಭರ್ಜರಿ ಜಯ

Latest

ಪಡಿಕ್ಕಲ್ ಶತಕ, ಕೊಹ್ಲಿಯಿಂದ 2 ದಾಖಲೆ – ಬೆಂಗಳೂರಿಗೆ 10 ವಿಕೆಟ್‌ಗಳ ಭರ್ಜರಿ ಜಯ

Public TV
Last updated: April 23, 2021 10:52 am
Public TV
Share
2 Min Read
RCB Devdutt Padikkal 2
SHARE

– ಮೊದಲ ವಿಕೆಟ್‌ಗೆ 181 ರನ್ ಜೊತೆಯಾಟ
– ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿತ

ಮುಂಬೈ: ದೇವದತ್ ಪಡಿಕ್ಕಲ್ ಶತಕ ಮತ್ತು ನಾಯಕ ವಿರಾಟ್ ಕೊಹ್ಲಿ ಅರ್ಧಶತಕದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಜಸ್ಥಾನ 9 ವಿಕೆಟ್‌ಗೆ 177 ರನ್ ಗಳಿಸಿತು. ಸವಾಲಿನ ಮೊತ್ತವನ್ನು ಸುಲಭವಾಗಿ ಚೇಸ್ ಮಾಡಿದ ಆರ್‌ಸಿಬಿ 16.3 ಓವರ್‌ಗಳಲ್ಲಿ 181 ರನ್ ಹೊಡೆದು ಜಯ ಸಾಧಿಸಿತು.

virat kohli

ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸತತ 4 ಪಂದ್ಯಗಳನ್ನು ಆರ್‌ಸಿಬಿ ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಬೆಂಗಳೂರು ಒಟ್ಟು 8 ಅಂಕದೊಂದಿಗೆ ಮತ್ತೆ ಮೊದಲ ಸ್ಥಾನಕ್ಕೆ ಜಿಗಿದಿದೆ.

ದೇವದತ್ ಪಡಿಕ್ಕಲ್ 27 ಎಸೆತಗಳಲ್ಲಿ ಅರ್ಧಶತಕ ಹೊಡೆದರೆ 51 ಎಸೆತದಲ್ಲಿ ಶತಕ ಹೊಡೆದರು. ವಿರಾಟ್ ಕೊಹ್ಲಿ 34 ಎಸೆತದಲ್ಲಿ ಅರ್ಧಶತಕ ಹೊಡೆದರು. ಅಂತಿಮವಾಗಿ ಪಡಿಕ್ಕಲ್ 101 ರನ್(52 ಎಸೆತ, 11 ಬೌಂಡರಿ, 6 ಸಿಕ್ಸ್) ಹೊಡೆದರೆ ವಿರಾಟ್ ಕೊಹ್ಲಿ 72 ರನ್(47 ಎಸೆತ, 6 ಬೌಂಡರಿ, 3 ಸಿಕ್ಸರ್) ಹೊಡೆದರು.

rcb team

ರಾಜಸ್ಥಾನ ರಾಯಲ್ಸ್ 7 ಮಂದಿ ಬೌಲರ್‌ಗಳನ್ನು ಪ್ರಯೋಗಿಸಿದ್ದರೂ ಆರಂಭಿಕ ಜೋಡಿಯನ್ನು ಬೇರ್ಪಡಿಸಲು ಸಾಧ್ಯವಾಗಲೇ ಇಲ್ಲ.

ಕೊಹ್ಲಿ ದಾಖಲೆ – ಈ ಪಂದ್ಯ ಆಡುವ ಮೊದಲು ಕೊಹ್ಲಿ 5,949 ರನ್ ಗಳಿಸಿದ್ದರು. ಇಂದಿನ ಪಂದ್ಯದಲ್ಲಿ 51 ರನ್ ಹೊಡೆಯುವ ಮೂಲಕ 6 ಸಾವಿರ ರನ್‌ಗಳ ಗಡಿಯನ್ನು ದಾಟಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಎರಡು ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ  6 ಸಾವಿರ ರನ್ ಗಳಿಸಿದ ಮೊದಲ ಆಟಗಾರ ಎಂಬ ಪಟ್ಟದ ಜೊತೆಗೆ ಒಂದೇ ತಂಡದ ಪರವಾಗಿ ಆಡಿ 6 ಸಾವಿರ ರನ್ ಹೊಡೆದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರವಾಗಿದ್ದಾರೆ.

Devdutt Padikkal virat kohli

ರನ್ ಏರಿದ್ದು ಹೇಗೆ?
50 ರನ್ – 31 ಎಸೆತ
100 ರನ್ – 58 ಎಸೆತ
150 ರನ್ – 81 ಎಸೆತ
181 ರನ್ – 99 ಎಸೆತ

Rahul Tewatia

43 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಸಂಜು ಸ್ಯಾಮ್ಸನ್ ಮತ್ತು ಶಿವಂ ದುಬೆ ನೆರವಾದರು. ನಾಯಕ ಸಂಜು ಸ್ಯಾಮ್ಸನ್ 21 ರನ್(18 ಎಸೆತ, 2 ಬೌಂಡರಿ, 1 ಸಿಕ್ಸರ್) ಹೊಡೆದರೆ ಶಿವಂ ದುಬೆ 46 ರನ್(32 ಎಸೆತ, 5 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು.

ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ರಿಯಾನ್ ಪರಾಗ್ 25 ರನ್(16 ಎಸೆತ, 4 ಬೌಂಡರಿ), ರಾಹುಲ್ ತೆವಾಟಿಯಾ 40 ರನ್(23 ಎಸೆತ, 4 ಬೌಂಡರಿ, 2 ಸಿಕ್ಸರ್) ಸಹಾಯದಿಂದ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತು.

Mohammed Siraj

ಮೊಹಮ್ಮದ್ ಸಿರಾಜ್ 27 ರನ್ ನೀಡಿ 3 ವಿಕೆಟ್ ಕಿತ್ತರು. ಹರ್ಷಲ್ ಪಟೇಲ್ 47 ರನ್ ನೀಡಿ 3 ವಿಕೆಟ್ ಪಡೆದರು. ಜೆಮಿಸನ್, ಕೇನ್ ರಿಚರ್ಡ್ಸನ್, ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಪಡೆದರು.

TAGGED:bengalurucricketIPLRajasthan RoyalsrcbRoyal Challengers Bangaloreಆರ್‍ಸಿಬಿಐಪಿಎಲ್ದೇವದತ್ತ ಪಡಿಕ್ಕಲ್ಬೆಂಗಳೂರುರಾಜಸ್ಥಾನ ರಾಯಲ್ಸ್ವಿರಾಟ್ ಕೊಹ್ಲಿ
Share This Article
Facebook Whatsapp Whatsapp Telegram

Cinema news

Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories
darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood

You Might Also Like

more than 40 electric poles have been broken due to wind and rain in athani
Belgaum

ಅಥಣಿಯಲ್ಲಿ ಗಾಳಿ ಮಳೆ ಅಬ್ಬರ – ಧರೆಗುರುಳಿದ 40ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು

Public TV
By Public TV
40 seconds ago
Donald Trump Angry
Latest

ಮತ್ತೆ ಪಾಕ್‌ನಲ್ಲಿ ಮಾತುಕತೆ – ಈ ಬಾರಿ ವಿಫಲವಾದರೆ ಇರಾನ್‌ ನಾಶ್‌: ಟ್ರಂಪ್‌ ಎಚ್ಚರಿಕೆ

Public TV
By Public TV
2 minutes ago
Rinku Singh
Cricket

ಕೊನೆಯಲ್ಲಿ ಸಿಕ್ಸರ್‌ ಸಿಡಿಸಿ ಗೆಲುವು ತಂದ ರಿಂಕು – ಸತತ ಸೋಲಿನ ಬಳಿಕ ಖಾತೆ ತೆರೆದ ಕೋಲ್ಕತ್ತಾ

Public TV
By Public TV
37 minutes ago
West Bengal Election PM Narendra Modi jhalmuri break in the middle of high octane Bengal campaign
Latest

ಇದ್ದಕ್ಕಿದ್ದಂತೆ ಕಾನ್ವಾಯ್‌ ನಿಲ್ಲಿಸಿ ರಸ್ತೆಯ ಬದಿ ಅಂಗಡಿಗೆ ತೆರಳಿ ಝಲ್ಮುರಿ ಸವಿದ ಮೋದಿ

Public TV
By Public TV
39 minutes ago
IPL 2026 Dhruv Jurel off balance and diving away from the stumps but hits the target
Cricket

IPL 2026 – ಧ್ರುವ್ ಜುರೆಲ್ ಕೈಚಳಕಕ್ಕೆ ಬೆಚ್ಚಿಬಿದ್ದ ಕ್ಯಾಮರೂನ್ ಗ್ರೀನ್!

Public TV
By Public TV
1 hour ago
HD Kumaraswamy 3
Latest

ಜೆಡಿಎಸ್‌ʼಗೆ ಜಮೀರ್‌ – ಗಾಳಿಸುದ್ದಿಗೆ ಕುಮಾರಸ್ವಾಮಿ ಸ್ಪಷ್ಟನೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?