Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಂಗನಾ ಕಚೇರಿ ನೆಲಸಮ ಅರ್ಜಿ- ಸೆ.22ಕ್ಕೆ ವಿಚಾರಣೆ ಮುಂದೂಡಿಕೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಕಂಗನಾ ಕಚೇರಿ ನೆಲಸಮ ಅರ್ಜಿ- ಸೆ.22ಕ್ಕೆ ವಿಚಾರಣೆ ಮುಂದೂಡಿಕೆ

Cinema

ಕಂಗನಾ ಕಚೇರಿ ನೆಲಸಮ ಅರ್ಜಿ- ಸೆ.22ಕ್ಕೆ ವಿಚಾರಣೆ ಮುಂದೂಡಿಕೆ

Public TV
Last updated: September 10, 2020 6:43 pm
Public TV
Share
3 Min Read
Kangana 6 e1599742994496
SHARE

-ಕೋರ್ಟ್ ನಲ್ಲಿ ಬಿಎಂಸಿ ಹೇಳಿದ್ದೇನು?
-ನೆಲಸಮದಿಂದ ಕಂಗನಾಗೆ ನಷ್ಟವಾಗಿದೆಷ್ಟು?

ಮುಂಬೈ: ಬಾಲಿವುಡ್ ಕ್ವೀನ್ ನಟಿ ಕಂಗನಾ ರಣಾವತ್ ಕಟ್ಟಡ ನೆಲಸಮಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನ ಬಾಂಬೆ ಹೈಕೋರ್ಟ್ ಸೆಪ್ಟೆಂಬರ್ 22ಕ್ಕೆ ಮುಂದೂಡಿದೆ.

ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ಬಿಎಂಸಿ(ಬೃಹತ್ ಮುಂಬೈ ಕಾರ್ಪೋರೇಷನ್) ಪರ ವಕೀಲರು, ನ್ಯಾಯಾಲಯ ಬುಧವಾರ ಆದೇಶ ನೀಡಿದ ನಂತರ ಕಟ್ಟಡ ನೆಲಸಮ ಮಾಡುವ ಕೆಲಸಗಳನ್ನು ನಿಲ್ಲಿಸಲಾಗಿದೆ. ಆದ್ರೆ ಸದ್ಯವಿರುವ ಸ್ಥಿತಿಯಲ್ಲಿಯೇ ಕಟ್ಟಡವಿರುವಂತೆ ಇರಬೇಕು ಎಂದರು. ಇತ್ತ ಕಂಗನಾ ಪರ ವಕೀಲರಾದ ರಿಜ್ವಾನ್ ಸಿದ್ಧಿಕಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನ ಒಟ್ಟಾಗಿಸಬೇಕಿದೆ. ನನ್ನ ಕಕ್ಷಿದಾರರು ಬುಧವರ ಮುಂಬೈಗೆ ಆಗಮಿಸಿದ್ದಾರೆ. ಫೈಲ್ ಸಿದ್ಧ ಮಾಡಿಕೊಳ್ಳಲು ನ್ಯಾಯಾಲಯ ಸಮಯ ನೀಡಬೇಕು ಎಂದು ನ್ಯಾಯಾಲಯದ ಮುಂದೆ ಮನವಿ ಮಾಡಿಕೊಂಡರು.

Kangana 2 1

ಕಂಗನಾ ಪರ ವಕೀಲರ ವಾದ ಪ್ರತಿವಾದ ಮಂಡಿಸಿದ ಬಿಎಂಸಿ ಪರ ವಕೀಲರು, ಸೋಮವಾರದೊಳಗೆ ತಮ್ಮ ಅರ್ಜಿಯಲ್ಲಿ ಕೆಲ ಬದಲಾವಣೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹಾಗಾಗಿ ರಿಜ್ವಾನ್ ಸಿದ್ಧಿಕಿ, ಬದಲಾವಣೆ ಕುರಿತು ಪಿಸಿಶನ್ ಫೈಲ್ ಮಾಡಬೇಕು ಎಂದರು. ವಕೀಲ ಸಿದ್ಧಿಕಿ, ಕಂಗನಾ ವರ ಮನೆಗೆ ನೀರು ಮತ್ತು ವಿದ್ಯುತ್ ಸಂಪರ್ಕವಿಲ್ಲ ಎಂದರು. ಕೊನೆನೆಗೆ ನ್ಯಾಯಾಲಯದ ಅರ್ಜಿ ವಿಚಾರಣೆಯನ್ನ ಸೆ.22ಕ್ಕೆ ಮುಂದೂಡಿ, ಮುಂದಿನ ಆದೇಶದವರೆಗೂ ಕಟ್ಟಡ ನೆಲಸಮ ಮಾಡುವಂತಿಲ್ಲ ಎಂದು ನ್ಯಾಯಾಲಯ ಆದೇಶ ನೀಡಿದೆ. ಇದನ್ನೂ ಓದಿ: ಕಂಗನಾ V/s ಮಹಾರಾಷ್ಟ್ರ ಸರ್ಕಾರ- ಮನೆ, ಕಚೇರಿ ನೆಲಸಮಕ್ಕೆ ಹೈಕೋರ್ಟ್ ತಡೆ-ಮಹಾರಾಷ್ಟ್ರ ಸರ್ಕಾರಕ್ಕೆ ಮುಖಭಂಗ

Kangana 3 1

ಮಾಧ್ಯಮಗಳ ಜೊತೆ ಮಾತನಾಡಿದ ವಕೀಲ ರಿಜ್ವಾನ್ ಸಿದ್ಧಿಕಿ, ಕನಸಿನ ಕಚೇರಿ ಕಟ್ಟಡ ನೆಲಸಮ ಮಾಡಿದ್ದರಿಂದ ಕಂಗನಾ ನೊಂದುಕೊಂಡಿದ್ದಾರೆ. ಆದ್ರೆ ಕಂಗನಾ ಓರ್ವ ಶಕ್ತಿಶಾಲಿ ಮಹಿಳೆಯಾಗಿದ್ದು, ಕಾನೂನಿನಲ್ಲಿ ನಂಬಿಕೆ ಹೊಂದಿದ್ದಾರೆ. ಬಿಎಂಸಿ ಅಕ್ರಮ ಪ್ರವೇಶ ನಡೆಸಿ ಕಟ್ಟಡ ಒಳಾಂಗಣವನ್ನ ಕೆಡವಿದೆ. ಬಿಎಂಸಿ ನಡೆಸಿದ ಕಾರ್ಯಚರಣೆಯಿಂದ ಕಂಗನಾ ಅವರಿಗೆ ಅಂದಾಜು 2 ಕೋಟಿ ರೂ. ನಷ್ಟವಾಗಿದೆ. ಬಿಎಂಸಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಆ್ಯಕ್ಷನ್ ತೆಗೆದುಕೊಳ್ಳುವದರ ಕುರಿತು ಚಿಂತಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಿವಸೇನಾ ಅಲ್ಲ ಸೋನಿಯಾ ಸೇನಾ – ಮಹಾ ಸರ್ಕಾರದ ಮೇಲೆ ಮತ್ತೆ ಕಂಗನಾ ಕಿಡಿ

kangana 4 1

ಕಟ್ಟಡದ ಒಳವಿನ್ಯಾಸ ನೆಲಸಮ ಬಳಿಕ ಇಂದು ತಮ್ಮ ಕಚೇರಿಗೆ ಕಂಗನಾ ಭೇಟಿ ನೀಡಿದ್ದರು. 10 ನಿಮಿಷ ಕಚೇರಿಯೊಳಗಿದ್ದ ಕಂಗನಾ ನಿರಾಶೆಗೊಂಡು ಹೊರ ಬಂದಿದ್ದರು. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೇ ಕಾರ್ ಹತ್ತಿ ಹೊರಟರು. ಇದನ್ನೂ ಓದಿ: ಕಂಗನಾ ಮನೆ, ಆಫೀಸ್ ಕೆಡವಿದ ಬಿಎಂಸಿ – ನನ್ನ ಮುಂಬೈ ಪಿಓಕೆ ಆಗಿದೆಯೆಂದ ನಟಿ

Kangana aa

ಇತ್ತ ಶಿವಸೇನೆಯ ಸಂಸದ ಸಂಜಯ್ ರಾವತ್, ಈ ಘಟನೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಪಕ್ಷಕ್ಕೆ ಮತ್ತು ಕಂಗನಾಗೂ ಯಾವುದೇ ವೈಯಕ್ತಿಕ ದ್ವೇಷಗಳಿಲ್ಲ. ಬಿಎಂಸಿ ತನ್ನ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತದೆ ಎಂದು ಹೇಳುವ ಮೂಲಕ ಪಕ್ಷ ಮತ್ತು ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕೇಳಿ ಬಂದ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಇದನ್ನೂ ಓದಿ: ಕಂಗನಾ ಕಟ್ಟಡ ನೆಲಸಮಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಕಂಗನಾ ಮೇಲೆ ವೈಯಕ್ತಿಕ ದ್ವೇಷವಿಲ್ಲ: ಶಿವಸೇನೆ

Kangana ranaut office demolished by BMC

ಅಹಂಕಾರ ನೆಲಸಮ ಆಗುತ್ತೆ: ಬುಧವಾರ ಮುಂಬೈಗೆ ವೈ ದರ್ಜೆಯಲ್ಲಿ ಬಂದಿಳಿದ ಕಂಗನಾ ರಣಾವತ್ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ಉದ್ಧವ್ ಠಾಕ್ರೆ ಫಿಲಂ ಮಾಫಿಯಾ ಜೊತೆ ಶಾಮೀಲಾಗಿ ಮನೆ ನಾಶ ಮಾಡಿ ನನ್ನ ವಿರುದ್ಧ ಸೇಡು ತೀರಿಸಿಕೊಂಡೆ ಎಂದು ತಿಳಿದುಕೊಂಡಿದ್ದೀಯಾ?. ಇಂದು ನನ್ನ ಮನೆ ನೆಲಸಮ ಆಗಿರಬಹುದು, ನಾಳೆ ನಿನ್ನ ಅಹಂಕಾರ ನೆಲಸಮ ಆಗುತ್ತೆ. ಇದು ಸಮಯದಾಟ, ಪ್ರತಿ ಬಾರಿ ಒಂದೇ ಆಗಿರಲ್ಲ. ಕಾಶ್ಮೀರಿ ಪಂಡಿತರ ಮೇಲೆ ಏನಾಗುತ್ತಿತ್ತು ಎಂಬುವುದು ಇಂದು ನನಗೆ ಅರ್ಥವಾಗಿದೆ. ನಾನು ಕೇವಲ ಅಯೋಧ್ಯೆ ಮಾತ್ರವಲ್ಲ, ಕಾಶ್ಮೀರದ ಕುರಿತು ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದು ಮಾತು ನೀಡುತ್ತಾನೆ. ಸಿನಿಮಾಗಳ ಮೂಲಕ ದೇಶದ ಜನರನ್ನ ಎಚ್ಚರಿಸುವ ಕೆಲಸ ಮಾಡುತ್ತೇನೆ. ಈ ರೀತಿ ಕೆಲಸಗಳ ನಡೆಯುತ್ತಿರುವ ಬಗ್ಗೆ ಕೇಳಿದ್ದೆ. ಆದ್ರೆ ಇಂದು ನನ್ನೊಂದಿಗೆ ನಡೆದಿದೆ. ಉದ್ಧವ್ ಠಾಕ್ರೆಯ ಕ್ರೂರತ್ವದ ಭಯೋತ್ಪಾದನೆ ನನ್ನೊಂದಿಗೆ ನಡೆದಿರೋದು ಒಳ್ಳೆಯದು ಆಯ್ತು. ಕಾರಣ ಇದಕ್ಕೆ ಕೆಲ ಮಹತ್ವದ ಕಾರಣವಿದೆ. ಜೈ ಹಿಂದ್, ಜೈ ಮಹಾರಾಷ್ಟ್ರ ಇದನ್ನೂ ಓದಿ: ಶಿವಸೇನೆ ಧಮ್ಕಿ -ನಟಿ ಕಂಗನಾ ರಣಾವತ್‍ಗೆ ವೈ ದರ್ಜೆಯ ಭದ್ರತೆ

TAGGED:BMCbollywoodCM Uddhav ThakreyKangana RanautPublic TVಕಂಗನಾ ರಣಾವತ್ಪಬ್ಲಿಕ್ ಟಿವಿಬಾಲಿವುಡ್ಬಿಎಂಸಿಸಿಎಂ ಉದ್ಧವ್ ಠಾಕ್ರೆ
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

Education Dept fails Karwar blind student by showing her absence even though she attended the exam
Districts

ಪರೀಕ್ಷೆಗೆ ಹಾಜರಾಗಿದ್ರೂ ಗೈರು – ಅಂಧ ವಿದ್ಯಾರ್ಥಿನಿ ಫೇಲ್‌

Public TV
By Public TV
8 minutes ago
Chikkaballapura Dubai Adoption 1
Chikkaballapur

ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಯ ದತ್ತು ಪಡೆದ ದುಬೈ ದಂಪತಿ

Public TV
By Public TV
14 minutes ago
g.parameshwara 2
Bengaluru City

ಕಾಂಗ್ರೆಸ್‌ಗೆ ಮುಸ್ಲಿಮರ ತಲಾಖ್‌ ಎಚ್ಚರಿಕೆ – ತಪ್ಪಾಗಿದ್ದರೆ ಸರಿಪಡಿಸಿಕೊಳ್ಳೋಣ ಎಂದ ಪರಮೇಶ್ವರ್‌

Public TV
By Public TV
16 minutes ago
Jayanagar Blackmail 2
Bengaluru City

ಖಾಸಗಿ ಫೋಟೋ, ವಿಡಿಯೋ ಇಟ್ಕೊಂಡು 1.5 ಕೋಟಿ ರೂ.ಗೆ ಬೇಡಿಕೆ – ಲೇಡಿ ಇನ್ಫ್ಲುಯೆನ್ಸರ್‌ ವಿರುದ್ಧ FIR

Public TV
By Public TV
23 minutes ago
West Bengal Election Election elephant appeared at a booth in the Jangalmahal forest region during the first phase of voting
Latest

West Bengal Election | ಮತದಾನ ಆರಂಭವಾಗುವ ಮೊದಲೇ ಮತಗಟ್ಟೆಗೆ ಆಗಮಿಸಿದ ಆನೆ!

Public TV
By Public TV
49 minutes ago
G Parameshwar 1
Bengaluru City

ಕಬಡ್ಡಿ ಬೆಟ್ಟಿಂಗ್ ಕೇಸ್‌ನಲ್ಲಿ ಪರಮೇಶ್ವರ್‌ಗೆ ಬಿಗ್ ರಿಲೀಫ್ – FIR ದಾಖಲಿಸದಂತೆ ಹೈಕೋರ್ಟ್ ತಡೆ

Public TV
By Public TV
51 minutes ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?