Connect with us

Cinema

ಶಿವಸೇನಾ ಅಲ್ಲ ಸೋನಿಯಾ ಸೇನಾ – ಮಹಾ ಸರ್ಕಾರದ ಮೇಲೆ ಮತ್ತೆ ಕಂಗನಾ ಕಿಡಿ

Published

on

– ಅಧಿಕಾರಕ್ಕಾಗಿ ಬಾಳಾಸಾಹೇಬರ ಸಿದ್ಧಾಂತವನ್ನೇ ಮಾರಿದ್ದಾರೆ

ಮುಂಬೈ: ಮಹಾರಾಷ್ಟ್ರ ಸರ್ಕಾರ ಮತ್ತು ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಜಟಾಪಟಿ ಮುಂದುವರೆದಿದ್ದು, ಇಂದು ಕೂಡ ಬಾಲಿವುಡ್ ಕ್ವೀನ್ ಕಂಗನಾ ಶಿವಸೇನಾದ ಮೇಲೆ ಕಿಡಿಕಾರಿದ್ದಾರೆ.

ಬುಧವಾರ ಬಿಎಂಸಿ (ಬೃಹತ್ ಮುಂಬೈ ಮುನಿಸಿಪಲ್ ಕಾರ್ಪೋರೇಶನ್) ಕಂಗನಾ ಅವರ ಮನೆ ಮತ್ತು ಕಚೇರಿಯನ್ನು ಒಡೆದು ಹಾಕಿತ್ತು. ಈಗ ಈ ಪ್ರಕರಣ ಕೋರ್ಟಿನಲ್ಲಿದ್ದು, ಇಂದು ಇದರ ಪ್ರಕರಣ ವಿಚಾರಣೆ ನಡೆಯಲಿದೆ. ಇದಕ್ಕೂ ಮುನ್ನಾ ಕಂಗನಾ ಅವರು, ಶಿವಸೇನಾವನ್ನು ಸೋನಿಯಾ ಸೇನೆ ಎಂದು ಟ್ವೀಟ್ ಮಾಡುವ ಮೂಲಕ ವ್ಯಂಗ್ಯವಾಡಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಂಗನಾ, ಯಾವ ಸಿದ್ಧಾಂತವನ್ನು ಇಟ್ಟುಕೊಂಡು ಬಾಳಾ ಸಾಹೇಬ್ ಠಾಕ್ರೆ ಅವರು ಶಿವಸೇನಾವನ್ನು ಕಟ್ಟಿದರೋ, ಇಂದು ಅಧಿಕಾರಕ್ಕಾಗಿ ಅದೇ ಸಿದ್ಧಾಂತವನ್ನು ಮಾರಾಟ ಮಾಡುವ ಮೂಲಕ ಶಿವಸೇನಾ ಈಗ ಸೋನಿಯಾ ಸೇನೆ ಆಗಿದೆ. ಗೂಂಡಾಗಳು ನನ್ನ ಮನೆಯನ್ನು ಒಡೆದು ಹಾಕಿದ್ದಾರೆ. ಅವರನ್ನು ನಾಗರಿಕ ಅಧಿಕಾರಿಗಳು ಎಂದು ಕರೆಯಬೇಡಿ, ಅದು ಸಂವಿಧಾನದಕ್ಕೆ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆಯಿಂದ ಸರಣಿ ಟ್ವೀಟ್ ಮಾಡುತ್ತಿರುವ ಕಂಗನಾ, ಇಂದು ನನ್ನ ಧ್ವನಿಯನ್ನು ಮುಚ್ಚಿಸಲು ಪ್ರಯತ್ನ ಮಾಡಿದರೆ ಅದು ನಾಳೆ ಕೋಟಿ ಜನರ ಪ್ರತಿಧ್ವನಿಯಾಗಿ ಬದಲಾಗುತ್ತೆ. ಉದ್ಧವ್ ಠಾಕ್ರೆ ಗ್ಯಾಂಗ್ ಮತ್ತು ಕರಣ್ ಜೋಹರ್ ಗ್ಯಾಂಗ್ ನನ್ನ ಮನೆ ಆಫೀಸ್ ಅನ್ನು ಒಡೆದು ಹಾಕಿದೆ. ನನ್ನ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತದೆ. ಆದರೆ ನಾನು ಸತ್ತರೂ ನಿಮ್ಮ ಬಂಡವಾಳವನ್ನು ಬಹಿರಂಗ ಮಾಡುತ್ತೇನೆ ಎಂದು ಕಂಗನಾ ಸವಾಲ್ ಎಸೆದಿದ್ದಾರೆ.

ಬುಧವಾರ ಟ್ವೀಟ್ ಮಾಡಿದ್ದ ಕಂಗನಾ, ನಾನು ಯಾವತ್ತೂ ತಪ್ಪು ಮಾಡುವುದಿಲ್ಲ ಎಂದು ನನ್ನ ಶತ್ರುಗಳು ಮತ್ತೆ ಮತ್ತೆ ಸಾಬೀತು ಮಾಡುತ್ತಿದ್ದಾರೆ. ಹೀಗಾಗಿಯೇ ನಾನು ಹೇಳಿದ್ದು, ನನ್ನ ಮುಂಬೈ ಈಗ ಪಿಓಕೆ ಆಗಿದೆ ಎಂದು ಟ್ವೀಟ್ ಮಾಡಿ, ಅಧಿಕಾರಿಗಳು ಮನೆಯನ್ನು ಒಡೆದು ಹಾಕುತ್ತಿರುವ ಫೋಟೋವನ್ನು ಹಾಕಿದ್ದರು. ಜೊತೆಗೆ ಇನ್ನೊಂದು ಟ್ವೀಟ್ ಮಾಡಿರುವ ಪಾಕಿಸ್ತಾನ ಪ್ರಜಾಪ್ರಭುತ್ವದ ಕಗ್ಗೋಲೆ ಬಾಬರ್ ಮತ್ತು ಅವನ ಸೈನಿಕರು ಎಂದು ವ್ಯಂಗ್ಯವಾಡಿದ್ದರು.

ನಾನು ಮುಂಬೈಗೆ ಬರಲು ವಿಮಾನ ನಿಲ್ದಾಣದಲ್ಲಿದ್ದಾಗ, ಮಹಾರಾಷ್ಟ್ರ ಸರ್ಕಾರ ಮತ್ತು ಅವರ ಗೂಂಡಾಗಳು ನನ್ನ ಮನೆ ಮತ್ತು ಕಚೇರಿಯನ್ನು ಅಕ್ರಮವಾಗಿ ಕಟ್ಟಲಾಗಿದೆ ಎಂದು ಆರೋಪಿಸಿ ಒಡೆದು ಹಾಕಿದ್ದಾರೆ. ಅವರು ಒಡೆದು ಹಾಕಲಿ. ನಾನು ಮುಂಬೈಗಾಗಿ ನನ್ನ ರಕ್ತವನ್ನು ಬೇಕಾದರೂ ಕೊಡಲು ಸಿದ್ಧವಿದ್ದೇನೆ. ಅವರು ಏನೇ ಕಿತ್ತುಕೊಂಡರೂ ನನ್ನ ಹೋರಾಟದ ಗುಣವನ್ನು ಕಿತ್ತುಕೊಳ್ಳಲು ಆಗುವುದಿಲ್ಲ ಎಂದು ಕಂಗನಾ ಟ್ವೀಟ್ ಮಾಡಿದ್ದರು.

Click to comment

Leave a Reply

Your email address will not be published. Required fields are marked *