– ರಕ್ಷಣೆಯ ನೆಪದಲ್ಲಿ ಬಂದು ಪೊಲೀಸರ ಬಲೆಗೆ ಬಿದ್ರು
ಅಹಮದಾಬಾದ್: ಅಕ್ರಮಸಂಬಂಧದಿಂದ ಜನಿಸಿದ ಮಗುವನ್ನು ಬಿಟ್ಟುಹೋಗಿ ಬಳಿಕ ಮಗುವನ್ನು ರಕ್ಷಿಸುವ ನೆಪದಲ್ಲಿ ಜೋಡಿಯೊಂದು ಬಂದು ಪೊಲೀಸರ ಅತಿಥಿಯಾಗಿರುವ ಘಟನೆ ಅಹಮದಾಬಾದ್‍ನಲ್ಲಿ ನಡೆದಿದೆ.
ಸಫ್ರುದ್ದೀನ್ ಶೇಖ್ ನವಜಾತ ಶಿಶುವಿನ ತಂದೆ. ಈತ ತನ್ನದೇ ಮಗುವನ್ನು ದಾರಿಯಲ್ಲಿ ಬಿಟ್ಟು ಹೋಗಿ ನಂತರ ಮಗುವನ್ನು ರಕ್ಷಣೆ ಮಾಡುವ ನೆಪದಲ್ಲಿ ಬಂದಿದ್ದಾನೆ. ಈ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಆಟೋ ಚಾಲಕನಾಗಿರುವ ಸಫ್ರುದ್ದೀನ್ ಶೇಖ್ ವರ್ಷದ ಹಿಂದೆ ಮದುವೆಯಾಗಿದ್ದನು. ಆದರೆ ಈತ ಇನ್ನೊಬ್ಬ ಯುವತಿಯೊಂದಿಗೆ ಸಂಬಂಧದಲ್ಲಿದ್ದನು. ಈ ಇಬ್ಬರ ಅಕ್ರಮ ಸಂಬಂಧದಲ್ಲಿ ಮಗು ಜನಿಸಿದೆ. ಅಲ್ಲದೆ ತಮ್ಮ ಸಂಬಂಧ ಯಾರಿಗೂ ತಿಳಿಯಬಾರದು ಎಂದು ಮಗುವನ್ನು ದಾರಿಯಲ್ಲಿ ಬಿಟ್ಟು ಹೋಗಿದ್ದಾರೆ.
ನಂತರ ಸ್ವಲ್ಪ ಸಮಯದ ಬಳಿಕ ಸಫ್ರುದ್ದೀನ್ ಶೇಖ್ ಪೊಲೀಸರಿಗೆ ಫೋನ್ ಮಾಡಿ ನನಗೆ ಮಾರ್ಗ ಮಧ್ಯದಲ್ಲಿ ಒಂದು ಮಗು ಸಿಕ್ಕಿದೆ. ನಾಯಿಗಳಿಂದ ರಕ್ಷಣೆ ಮಾಡಿದ್ದೇನೆ ಎಂದು ಹೇಳಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಈತನ ಮೇಲೆ ಅನುಮಾನಗೊಂಡು ವಿಚಾರಿಸಿದಾಗ ತನ್ನದೇ ಮಗು ಎಂಬ ಸತ್ಯವನ್ನು ಬಾಯಿಬಿಟ್ಟಿದ್ದಾನೆ.