Saturday, 23rd June 2018

Recent News

2 weeks ago

ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ, ಅತೃಪ್ತ ಶಾಸಕರೊಂದಿಗೆ ದಿನಕ್ಕೆರಡು ಬಾರಿ ಮಾತನಾಡುತ್ತಿದ್ದೇನೆ: ಸಿದ್ದರಾಮಯ್ಯ

ಬಾಗಲಕೋಟೆ: ಅತೃಪ್ತ ಶಾಸಕರೊಂದಿಗೆ ಸ್ಪಂದಿಸಿಲ್ಲ ಅನ್ನೋದು ಊಹಾಪೋಹ ಎಲ್ಲಾ ಶಾಸಕರೊಂದಿಗೆ ದಿನಕ್ಕೆ ಎರಡರಿಂದ ಮೂರು ಸಾರಿ ಮಾತನಾಡ್ತಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸದ್ಯಕ್ಕೆ ಶಾಸಕರೆಲ್ಲಾ ಸಮಾಧಾನಗೊಂಡಿದ್ದು, ಯಾವುದೇ ರೀತಿಯ ಅಸಮಾಧಾನವಿಲ್ಲ. ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಹೈಕಮಾಂಡ್ ಜೊತೆ ಫೋನ್ ನಲ್ಲಿ ಮಾತನಾಡಿದ್ದೇನೆ ಎಂದು ಬಾದಾಮಿ ತಾಲೂಕಿನ ನೀಲಗುಂದ ಗ್ರಾಮದಲ್ಲಿ ತಿಳಿಸಿದರು. ಮಂತ್ರಿಗಳನ್ನ ಮಾಡಿರುವುದು ಎರಡು ವರ್ಷಕ್ಕೆ. ಮುಂದೆ ಅರ್ಹರಿಗೆ ಮಂತ್ರಿ ಸ್ಥಾನ ನೀಡುತ್ತೇವೆ. ಮತ್ತೊಂದು ಡಿಸಿಎಂ ಸ್ಥಾನ ಯಾವುದೇ ಕಾರಣಕ್ಕೂ ಸೃಷ್ಟಿಯಾಗಲ್ಲ ಎಂದು […]

2 weeks ago

ಎಲ್ಲವೂ ಹಳೆಯದು, ಹೊಸದೇನಿಲ್ಲ, ಹೊರಟು ಹೋಗಿ – ಮಾಧ್ಯಮಗಳ ಮೇಲೆ ಮಾಜಿ ಸಿಎಂ ಗರಂ

ಬಾಗಲಕೋಟೆ: ಕಾಂಗ್ರೆಸ್ ಜೆಡಿಎಸ್ ಸರ್ಕಾರದಲ್ಲಿನ ಅಸಮಾಧಾನ ಕುರಿತ ಪ್ರಶ್ನೆಯನ್ನು ಕೇಳಿದ್ದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ವಿರುದ್ಧವೇ ಗರಂ ಆಗಿದ್ದಾರೆ. ಬಾದಾಮಿ ಕ್ಷೇತ್ರದಲ್ಲಿ ಪ್ರವಾಸದಲ್ಲಿರುವ ಸಿದ್ದರಾಮಯ್ಯನವರಿಗೆ ಮಾಧ್ಯಮದವರು ಪಕ್ಷದಲ್ಲಿನ ಅಸಮಾಧಾನ ಕುರಿತು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ “ನೋ ರಿಯಾಕ್ಷನ್” ಎಂದು ಉತ್ತರಿಸಿ ಕೈ ಮುಗಿದರು. ಈ ವೇಳೆ ಪತ್ರಕರ್ತರು ಮತ್ತೊಮ್ಮೆ ಹೈಕಮಾಂಡ್ ದೆಹಲಿಗೆ ಬರುವಂತೆ ಬರಲು...

ಮಳೆಯಿಂದಾಗಿ ರಸ್ತೆ ಬದಿ ತಡೆಗೋಡೆ ಏರಿದ ಸಾರಿಗೆ ಬಸ್ – ತಪ್ಪಿದ ಭಾರೀ ಅನಾಹುತ

2 weeks ago

ಬಾಗಲಕೋಟೆ: ನಗರದಲ್ಲಿ ಸಂಜೆ ವೇಳೆಗೆ ಸುರಿದ ಭಾರೀ ಮಳೆಗೆ ರಸ್ತೆಗಳೆಲ್ಲಾ ನೀರಿನಿಂದ ತುಂಬಿ ಕೆರೆಯಂತಾಗಿದ್ದು, ಈ ವೇಳೆ ಬಸ್ ಒಂದು ರಸ್ತೆ ಬದಿಯ ತಡೆಗೋಡೆ ಏರಿದ ಘಟನೆ ನಗರದ ಬಗಿನಿ ಸಮಾಜ ಬಳಿ ರಸ್ತೆಯಲ್ಲಿ ಘಟನೆ ನಡೆದಿದೆ. ಬಾಗಲಕೋಟೆಯಿಂದ ನವನಗರಕ್ಕೆ ಹೊರಟಿದ್ದ...

ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ ಎಸ್.ಆರ್ ಪಾಟೀಲ್

3 weeks ago

– ವೈಯಕ್ತಿಕವಾಗಿ 2 ಲಕ್ಷ ರೂ. ಪರಿಹಾರ ಬಾಗಲಕೋಟೆ: ಜಿಲ್ಲೆಯ ವಿದ್ಯಾಗಿರಿ ಬಳಿ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಶಾಲಾ ಮಕ್ಕಳನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್ ಪಾಟೀಲ್ ಭೇಟಿ ನೀಡಿ ಆರೋಗ್ಯಸ್ಥಿತಿ ವಿಚಾರಿಸಿದ್ದಾರೆ. ಮಕ್ಕಳ ಆರೋಗ್ಯ ಹಾಗೂ ಚಿಕಿತ್ಸೆಯ ಬಗ್ಗೆ ವೈದ್ಯರೊಂದಿಗೆ...

ಟಂಟಂ ಹಿಂಬದಿಗೆ ಬೊಲೆರೊ ಡಿಕ್ಕಿ – ವಿದ್ಯಾರ್ಥಿಯ ಕೈ ಕಟ್, 6 ಮಂದಿ ವಿದ್ಯಾರ್ಥಿಗಳಿಗೆ ಗಂಭೀರ ಗಾಯ

3 weeks ago

ಬಾಗಲಕೋಟೆ: ಟಂಟಂ, ಬೊಲೆರೊ ಮುಖಾಮುಖಿ ಡಿಕ್ಕಿಯಾದ ಪರಿಣಾಮ ವಿದ್ಯಾರ್ಥಿಯ ಕೈ ತುಂಡಾಗಿ, ಆರು ಮಂದಿ ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬಾಗಲಕೋಟೆಯ ನಗರದ ವಿದ್ಯಾಗಿರಿಯಲ್ಲಿ ನಡೆದಿದೆ. ಅಭಿಷೇಕ್ ಘಟನೆಯಲ್ಲಿ ಬಲಗೈ ಕಳೆದು ಕೊಂಡ ವಿದ್ಯಾರ್ಥಿಯಾಗಿದ್ದು, ಉಳಿದಂತೆ ಆರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯ...

ಕ್ಯಾಂಟರ್ ಗೆ ಅಪರಿಚಿತ ವಾಹನ ಡಿಕ್ಕಿ-ಚಾಲಕ ಸಾವು, ಓರ್ವ ಗಾಯ

4 weeks ago

ಬಾಗಲಕೋಟೆ: ಕ್ಯಾಂಟರ್‍ಗೆ ಅಪರಿಚಿವ ವಾಹನ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬದಾಮಿ ತಾಲೂಕಿನ ಕೆರೂರು ಪಟ್ಟಣದ ಬಳಿ ಹುಬ್ಬಳ್ಳಿ-ವಿಜಯಪುರ ರಸ್ತೆಯಲ್ಲಿ ನಡೆದಿದೆ. ಕ್ಯಾಂಟರ್ ಚಾಲಕ ಸ್ಥಳದಲ್ಲೆ ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಕ್ಯಾಂಟರ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ...

ಸ್ಕಾರ್ಪಿಯೊ, ಟಾಟಾ ಏಸ್, ಸ್ಕೂಟಿ ನಡುವೆ ಸರಣಿ ಅಪಘಾತ- ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ

4 weeks ago

ಬಾಗಲಕೋಟೆ: ಸ್ಕಾರ್ಪಿಯೊ, ಟಾಟಾ ಏಸ್, ಸ್ಕೂಟಿ ನಡುವೆ ಡಿಕ್ಕಿಯಾಗಿ ಸರಣಿ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಜಮಖಂಡಿ-ಮುಧೋಳ ಮಾರ್ಗ ಮಧ್ಯೆ ನಡೆದಿದೆ. ಸ್ಕಾರ್ಪಿಯೋ ಬೆಳಗಾವಿ ಜಿಲ್ಲೆಯ ಸವದತ್ತಿಯಿಂದ ಮಹಾರಾಷ್ಟ್ರದ ಸೋಲಾಪುರಕ್ಕೆ ಹೊರಟಿತ್ತು. ಈ ವೇಳೆ ಸ್ಕಾರ್ಪಿಯೋ...

ಭೂ ತಾಯಿಯ ಮಡಿಲಿನಲ್ಲಿ ಚಿರ ನಿದ್ರೆಗೆ ಜಾರಿದ ಶಾಸಕ ಸಿದ್ದು ನ್ಯಾಮಗೌಡ

4 weeks ago

ಬಾಗಲಕೋಟೆ: ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಅಂತ್ಯಕ್ರಿಯೆಯನ್ನು ಜಮಖಂಡಿ ತಾಲೂಕಿನ ನಾಗನೂರು ಗ್ರಾಮದ ಬಳಿ ಇರುವ ಜಮಖಂಡಿ ಶುಗರ್ಸ್ ಕಾರ್ಖಾನೆಯ ಆವರಣದಲ್ಲಿ ವೀರಶೈವ ಲಿಂಗಾಯತ ವಿಧಿ ವಿಧಾನಗಳ ಮೂಲಕ ನೆರವೇರಿಸಲಾಯಿತು. ಮುಂದಿನ ದಿನಗಳಲ್ಲಿ ಸಿದ್ದು ನ್ಯಾಮಗೌಡರ ಪುತ್ಥಳಿ ನಿರ್ಮಿಸುವ ಉದ್ದೇಶದಿಂದ ಕಾರ್ಖಾನೆ...