ಯುಟ್ಯೂಬ್ ಸ್ಟಾರ್ ರಕ್ಷಿತಾ ಶೆಟ್ಟಿ (Rakshita Shetty) ಬಿಗ್‌ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ (Bigg Boss) ರಕ್ಷಿತಾ ಮಾತು ಕೇಳಿ ನಿರೂಪಕ ಕಿಚ್ಚ ಸುದೀಪ್ (Sudeep) ಒಂದು ಕ್ಷಣ ಶಾಕ್ ಆಗಿದ್ದಾರೆ. ರಕ್ಷಿತಾ ಯೂಟ್ಯೂಬ್‌ನಲ್ಲಿ ಅಡುಗೆ ಮಾಡುತ್ತಾ, ಕನ್ನಡ ಮಾತಾಡಾಲು ಪಡುವ ಕಷ್ಟ ಎಲ್ಲರಿಗೂ ಗೊತ್ತೇ ಇದೆ. ಆದರೆ ಬಿಗ್‌ಬಾಸ್‌ನಲ್ಲಿ ಅವರ ಆಟದ ವೈಖರಿ ಹಾಗೂ ಅಡುಗೆ ಮಾಡುವ ಶೈಲಿ, ಕನ್ನಡ ಮಾತುಗಳನ್ನ ಕೇಳಲು ಪ್ರೇಕ್ಷಕರು ಕ್ಯೂರಿಯಾಸಿಟಿಯಿಂದ ಕಾಯ್ತಿದ್ದಾರೆ. ಇದನ್ನೂ ಓದಿ: ಮೈಸೂರು ಅರಮನೆ ಥೀಮ್‌ನಲ್ಲಿ ಬಿಗ್‌ಬಾಸ್ ಹೌಸ್, ಈ ಸಲ ಸಿಕ್ಕಾಪಟ್ಟೆ ಡಿಫರೆಂಟ್ ಸ್ವಾಮಿ !
ಸೋಶಿಯಲ್ ಮೀಡಿಯಾದಲ್ಲಿ ಅಲ್ಲೆಯನ್ನೇ ಎಬ್ಬಿಸಿದ ಕರಾವಳಿ ಪ್ರತಿಭೆ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆ ಕಂಟೆಸ್ಟೆಂಟ್
ಬಿಗ್ ಬಾಸ್ GRAND OPENING | ಇಂದು ಸಂಜೆ 6 | ಪ್ರತಿ ರಾತ್ರಿ 9:30#BiggBossKannada12 #BBK12 #ColorsKannada #AdeBeruHosaChiguru #KicchaSudeep #ExpectTheUnexpected #CKPromo pic.twitter.com/h75kQZM6au
— Colors Kannada (@ColorsKannada) September 28, 2025
ಸದ್ಯ ರಕ್ಷಿತಾ ಬಿಗ್‌ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಸುದೀಪ್ ಮುಂದೆ ಅಡುಗೆ ಮಾಡುವ ಪರಿ ವಿವರಿಸಿದ್ದಾರೆ. ಇಷ್ಟಕ್ಕೆ ಕಿಚ್ಚ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಮೂಲತಃ ಮಂಗಳೂರಿನವರಾದ ರಕ್ಷಿತಾ ಮುಂಬೈನಲ್ಲಿ ವಾಸವಾಗಿದ್ದಾರೆ. ಹೀಗಾಗಿ ಕನ್ನಡ ಮಾತಾಡಲು ರಕ್ಷಿತಾ ತ್ರಾಸ ಪಡುತ್ತಾರೆ. ಆದರೂ ಆ ಮೂಲಕವೇ ಅಡುಗೆ ಮಾಡಿ ಮನರಂಜನೆ ಮಾಡುತ್ತಾರೆ.
ಮಂಗಳೂರಿನ ವಿವಿಧ ಅಡುಗೆಯನ್ನು ರಕ್ಷಿತಾ ಅವರ ಶೈಲಿಯಲ್ಲೇ ಮಾಡುತ್ತಾರೆ. ಜೊತೆಗೆ ರಕ್ಷಿತಾ ಅವರು ಮಾತಾಡೋ ರೀತಿಗೆ ಸಾಕಷ್ಟು ಬಾರಿ ಟ್ರೋಲ್ ಆಗಿದ್ದಾರೆ. ಇದೀಗ ಬಿಗ್‌ಬಾಸ್ ಮನೆಯಲಿ ಸ್ಪರ್ಧಿಯಾಗಿ ಮನರಂಜನೆ ನೀಡಲು ಬರುತ್ತಿದ್ದಾರೆ.