ಕೈಯಲ್ಲಿ ಡಮ್ಮಿ ಗನ್ ಹಿಡಿದು ಶತ್ರುಗಳ ನಾಶಕ್ಕೆ ಮುಂದಾದ ಪಬ್‍ಜಿ ಆಟಗಾರ

Public TV
1 Min Read
mobile game

ಹೈದರಾಬಾದ್: ಪಬ್‍ಜಿ ಆಟಗಾರನೊಬ್ಬ ಕೈಯಲ್ಲಿ ಡಮ್ಮಿ ಗನ್ ಹಿಡಿದು ಶತ್ರುಗಳ ಸಂಹಾರಕ್ಕೆ ಮುಂದಾದ ಘಟನೆ ಗುರುವಾರ ಮಧ್ಯಾಹ್ನ ಆಂಧ್ರ ಪ್ರದೇಶದ ಹೈದರಾಬಾದ್‍ನ ಕರೀಂನಗರದಲ್ಲಿ ನಡೆದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಪಬ್‍ಜಿ ಅಡಿಕ್ಟ್ ಆಗಿರುವ ಯುವಕನೊಬ್ಬ ಸೈನಿಕನಂತೆ ಉಡುಪು ಧರಿಸಿ ಕೈಯಲ್ಲಿ ಗನ್ ಹಿಡಿದು ರಸ್ತೆಯಲ್ಲಿ ಶತ್ರುಗಳ ಸಂಹಾರಕ್ಕೆ ನಿಂತಿದ್ದಾನೆ. ರಸ್ತೆಯಲ್ಲಿ ನಾನು ಹೀಗೆ ಮಾಡುವುದು ತಪ್ಪು ಎನ್ನುವ ಅರಿವೇ ಇಲ್ಲದೆ ಡಮ್ಮಿ ಗನ್ ಹಿಡಿದು ಓಡಾಡಿದ್ದಾನೆ. ಇದನ್ನೂ ಓದಿ: ಮೋರಿ ನೀರಿನಲ್ಲಿ ಶತ್ರುವನ್ನು ಹುಡುಕಿದ ಪಬ್‍ಜಿ ವೀರ

vlcsnap 2019 11 22 09h31m22s243 e1574395956224

ಯುವಕ ರಸ್ತೆಯಲ್ಲಿ ಈ ರೀತಿ ವರ್ತಿಸುತ್ತಿರುವುದನ್ನು ನೋಡಿ ವ್ಯಕ್ತಿಯೊಬ್ಬರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾರೆ. ಅಲ್ಲದೆ ಯಾಕೆ ಈ ರೀತಿ ಓಡಾಡುತ್ತಿದ್ದೀಯಾ?. ಪಬ್‍ಜಿ ಗೇಮ್‍ನ ಹೀಗೆ ಆಡೋದಾ ಎಂದು ಪ್ರಶ್ನಿಸಿದ್ದಾರೆ. ಆದರೆ ಯುವಕ ಮಾತ್ರ ಪಬ್‍ಜಿ ಗೇಮ್‍ನಿಂದ ಹೊರ ಬಂದಿಲ್ಲ.

ವಿಡಿಯೋದಲ್ಲಿ ವ್ಯಕ್ತಿ ಯುವಕನ ಹೆಸರು ಕೇಳಿದ್ದಾರೆ. ಈ ವೇಳೆ ಯುವಕ ಅಬ್ರಾಂ. ನೀನು ಯಾಕೆ ಹೀಗೆ ಗನ್ ಹಿಡಿದುಕೊಂಡು ಓಡಾಡುತ್ತಿದ್ದೀಯಾ?. ಪಬ್‍ಜಿ ಆಟ ಆಡುತ್ತಿದ್ದೀಯಾ ಎಂದು ಪ್ರಶ್ನಿಸಿದಾಗ ಯುವಕ ಹೌದು ಎಂದಿದ್ದಾನೆ. ಬಳಿಕ ಎಷ್ಟು ದಿನಗಳಿಂದ ಈ ಗೇಮ್ ಆಡುತ್ತಿದ್ದೀಯಾ ಎಂದು ಕೇಳಿದಾಗ ಒಂದು ವರ್ಷದಿಂದ ಆಡುತ್ತಿದ್ದೇನೆ ಎಂದಿದ್ದಾನೆ.

pubg e1574395986902

ವ್ಯಕ್ತಿ ಆತನ ಹಿಂದೆಯೇ ಹೋಗಿ ಯಾಕೆ ಈ ರೀತಿ ಗನ್ ಹಿಡಿದುಕೊಂಡು ಹೋಗುತ್ತಿದ್ದೀಯಾ. ಯಾರನ್ನು ಕೊಲೆ ಮಾಡಬೇಕೆಂದು ಇದ್ದೀಯಾ ಎಂದು ಪ್ರಶ್ನಿಸಿದಾಗ ಶತ್ರುಗಳನ್ನು ಕೊಲ್ಲಲ್ಲು ಹೋಗುತ್ತಿದ್ದೇನೆ. ಇದುವರೆಗೂ 20 ಶತ್ರುಗಳನ್ನು ಕೊಂದಿದ್ದೇನೆ. ಈಗ 50 ಶತ್ರುಗಳನ್ನು ಕೊಲೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ವಿಡಿಯೋ ಮಾಡಿದ ವ್ಯಕ್ತಿ ಕೊನೆಯಲ್ಲಿ ಪಬ್‍ಜಿ ಆಡುವ ವ್ಯಕ್ತಿ ಯಾವ ರೀತಿ ವರ್ತಿಸುತ್ತಿದ್ದಾನೆ ನೋಡಿ. ದಯವಿಟ್ಟು ಯಾರು ಪಬ್‍ಜಿ ಆಡಬೇಡಿ. ನಿಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಸದ್ಯ ಯುವಕ ಗನ್ ಹಿಡಿದುಕೊಂಡು ರಸ್ತೆಯಲ್ಲಿ ಓಡಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *