ಬೆಂಗಳೂರು: ಕನ್ನಡ ಹಾಡು ಹಾಕಲಿಲ್ಲ ಎಂದು ಯುವಕನಿಗೆ ಥಳಿಸಿದ ಘಟನೆ ಬೆಂಗಳೂರಿನ ಪಿಯೋನಿಕ್ಸ್ ಮಾರ್ಕೆಟ್ ಸಿಟಿ ಮಾಲ್ ನಲ್ಲಿ ನಡೆದಿದೆ.
ವೈಟ್ ಫೀಲ್ಡ್ ಬಳಿಯಿರುವ ಮಾಲ್‍ನಲ್ಲಿ ಮ್ಯೂಸಿಕ್ ಬ್ಯಾಂಡ್ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರಮ ಮುಗಿಯುವ ವೇಳೆಗೆ ನಾಲ್ವರು ಕುಡುಕರ ಗುಂಪು ಅಲ್ಲಿಗೆ ಬಂದಿದೆ. ಅಲ್ಲಿಗೆ ಬಂದ ತಕ್ಷಣ ಕನ್ನಡ ಹಾಡುಗಳನ್ನು ಹಾಡುವಂತೆ ಒತ್ತಾಯಿಸಿದ್ದಾರೆ.
Advertisement
ಈ ವೇಳೆ ಮ್ಯೂಸಿಕ್ ಉಪಕರಣಗಳನ್ನು ಡಿಸ್ಕನೇಕ್ಟ್ ಮಾಡಲಾಗಿದೆ ಎಂದು ಯುವಕರು ಆ ಗುಂಪಿಗೆ ಹೇಳಿದ್ದಾರೆ. ಇಷ್ಟಕ್ಕೆ ಮ್ಯೂಸಿಷೀಯನ್ಸ್ ಮೇಲೆ ಕುಡುಕರ ಗುಂಪು ಹಲ್ಲೆ ಮಾಡಿದೆ. ಹಲ್ಲೆ ವೇಳೆ ಗೀಟಾರ್ ವಾದಕ ಅನುಭವ್ ಎಂಬವರ ಕಣ್ಣಿಗೆ ಗಾಯವಾಗಿದೆ.
Advertisement
ಈ ಬಗ್ಗೆ ಮಹದೇಹಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.