ಕೊಪ್ಪಳ: ಗಂಗಾವತಿ ತಾಲೂಕಿನ ಕಾರಟಗಿಯಲ್ಲಿ ಮುಖಕ್ಕೆ ಟವಲ್ ಕಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿದೆ. ಯುವಕನನ್ನು 33 ವರ್ಷದ ಸಂತೋಷ ಎಂದು ಗುರುತಿಸಲಾಗಿದೆ. ಯುವಕ ಮಂಡ್ಯ ಮೂಲದ ಲಾರಿ ಚಾಲಕನಾಗಿದ್ದಾನೆ.
Advertisement
ಮೃತ ಯುವಕ ಭಾನುವಾರ ಸಂಜೆ ಲಾರಿಯಲ್ಲಿ ಭತ್ತ ತುಂಬಿಕೊಂಡು ಕೊಪ್ಪಳದ ಕಡೆ ಬಂದಿದ್ದು, ಇಂದು ಬೆಳಗ್ಗಿನ ಜಾವ ಕಾರಟಗಿಯ ವಿಶೇಷ ಎಪಿಎಂಸಿ ಆವರಣದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
Advertisement
ಸ್ಥಳಕ್ಕೆ ಕಾರಟಗಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.