ನವದೆಹಲಿ: ಲೈಂಗಿಕ ಕಿರುಕುಳ ಆರೋಪದ ಮೇಲೆ ದಾಖಲಾದ ಎಫ್‍ಐಆರ್ ರದ್ದುಗೊಳಿಸುವಂತೆ ಯುವ ಕಾಂಗ್ರೆಸ್ (Youth Congress) ಘಟಕದ ಅಧ್ಯಕ್ಷ ಶ್ರೀನಿವಾಸ್ ಬಿವಿ (Srinivas BV) ಸೋಮವಾರ ಸುಪ್ರೀಂ (Supreme Court) ಮೊರೆ ಹೋಗಿದ್ದಾರೆ. ಕಳೆದ ವಾರ ಗುವಾಹಾಟಿ ಹೈಕೋರ್ಟ್ (Gauhati High Court) ನಿರೀಕ್ಷಣಾ ಜಾಮೀನು ಹಾಗೂ ಎಫ್‍ಐಆರ್ (FIR) ರದ್ದುಗೊಳಿಸಲು ನಿರಾಕರಿಸಿದ ನಂತರ ಅವರು ಬಂಧನದ ಭೀತಿ ಎದುರಿಸುತ್ತಿದ್ದಾರೆ.
Advertisement
ಅರ್ಜಿದಾರರ ಪರ ಹಿರಿಯ ವಕೀಲ ದೇವದತ್ತ ಕಾಮತ್ ಅವರು ತುರ್ತು ವಿಚಾರಣೆ ಕೋರಿ ಸಿಜೆಐ (CJI) ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್ ನರಸಿಂಹ ಮತ್ತು ಜೆ.ಬಿ ಪರ್ದಿವಾಲಾ ಅವರ ಪೀಠದ ಮುಂದೆ ಈ ಮನವಿಯನ್ನು ಪ್ರಸ್ತಾಪಿಸಿದ್ದಾರೆ. ಪೀಠವು ಮುಂದಿನ ವಾರ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಇದನ್ನೂ ಓದಿ: ಶ್ರೀನಿವಾಸ್ ಬಿವಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ – ಕಾಂಗ್ರೆಸ್ ಯುವ ನಾಯಕಿಗೆ ಗೇಟ್ ಪಾಸ್
Advertisement
ಛತ್ತೀಸ್‍ಗಢದಲ್ಲಿ ನಡೆದಿದೆ ಎನ್ನಲಾದ ಅಪರಾಧವನ್ನು ತನಿಖೆ ಮಾಡಲು ಅಥವಾ ಎಫ್‍ಐಆರ್ ದಾಖಲಿಸಲು ಅಸ್ಸಾಂ (Assam) ಪೊಲೀಸರಿಗೆ ಯಾವುದೇ ಅಧಿಕಾರವಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
Advertisement
Advertisement
ಶ್ರೀನಿವಾಸ್ ನಿರಂತರವಾಗಿ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಅಶ್ಲೀಲ ಮಾತುಗಳಿಂದ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಅಸ್ಸಾಂ ಯುವ ಕಾಂಗ್ರೆಸ್‍ನ (Youth Congress) ಮಾಜಿ ಅಧ್ಯಕ್ಷೆ ಅಂಗಿತಾ ದತ್ತಾ ಅವರು ದೂರು ನೀಡಿದ್ದರು. ಅಲ್ಲದೆ ಅವರ ವರ್ತನೆ ಬಗ್ಗೆ ಕಾಂಗ್ರೆಸ್‍ನ ಉನ್ನತ ನಾಯಕರಿಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದತ್ತಾ ಆರೋಪಿಸಿದ್ದರು.
ದೂರಿನ ಮೇರೆಗೆ ಶ್ರೀನಿವಾಸ್ ವಿರುದ್ಧ ಐಪಿಸಿ ಸೆಕ್ಷನ್ 352 (ಆಕ್ರಮಣ ಅಥವಾ ಕ್ರಿಮಿನಲ್ ಬಲ ಪ್ರಯೋಗ), 354 (ಹಲ್ಲೆ), ಮತ್ತು 354ಎ (ಲೈಂಗಿಕ ಕಿರುಕುಳ) ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಶ್ರೀನಿವಾಸ್ ಅವರಿಗೆ ಅಧಿಕಾರಿಗಳ ಮುಂದೆ ಖುದ್ದಾಗಿ ಹಾಜರಾಗುವಂತೆ ದಿಸ್ಪುರ್ ಪೊಲೀಸರು ನೋಟಿಸ್ ನೀಡಿದ್ದರು. ಈ ವೇಳೆ ರಾಜಕೀಯ ವಿವಾದಗಳಿಂದ ತಮ್ಮ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಅವರು ಆರೋಪಿಸಿದ್ದರು. ಅಲ್ಲದೆ ನಿರೀಕ್ಷಣಾ ಜಾಮೀನು ಪಡೆಯಲು ಹಾಗೂ ವಿಚಾರಣೆಗೆ ತಡೆ ನೀಡುವಂತೆ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಎಫ್‍ಐಆರ್ ರಾಜಕೀಯ ಪ್ರೇರಿತವಾಗಿ ಕಂಡು ಬರುತ್ತಿಲ್ಲ ಎಂದು ಅವರ ಮನವಿಯನ್ನು ತಿರಸ್ಕರಿಸಿತ್ತು.
ದಿಸ್ಪುರ ಪೊಲೀಸರ ಮುಂದೆ ಹಾಜರಾಗಲು ಮೇ 12 ರವರೆಗೆ ಸಮಯವನ್ನು ವಿಸ್ತರಿಸಲಾಗಿದೆ. ಗುವಾಹಾಟಿಗೆ ತೆರಳಿದರೆ ಪೊಲೀಸರು ಬಂಧಿಸುವ ಆತಂಕವಿದೆ ಎಂದು ಶ್ರೀನಿವಾಸ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಯುವ ಕಾಂಗ್ರೆಸ್ ಮುಖ್ಯಸ್ಥ ಬಿವಿ ಶ್ರೀನಿವಾಸ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ – ರಾಹುಲ್ ವಿರುದ್ಧವು ಕಿಡಿಕಾರಿದ ಯುವ ನಾಯಕಿ