ಚಿಕ್ಕಬಳ್ಳಾಪುರ: ನಿನಲ್ಲ, ನಿಮ್ಮಪ್ಪನ ಕೈಲೂ ನನ್ನ ಟಚ್ ಮಾಡಕ್ಕಾಗಲ್ಲ ಎಂದು ಸುಧಾಕರ್ ಮಾತಿಗೆ ಪ್ರತಿಕ್ರಿಯಿಸಿ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ನೆಪೋಟಿಸಂನಿಂದ ನಾನು ಕೂಡ ಸಮಸ್ಯೆ ಎದುರಿಸಿದ್ದೇನೆ: ರಕುಲ್ ಪ್ರೀತ್ ಸಿಂಗ್
ನಗರಸಭೆ ಚುನಾವೆಣೆ ಬಳಿಕ ಮಾತನಾಡಿದ ಅವರು, ಕೆ. ಸುಧಾಕರ್ (K.Sudhakar) ಒಬ್ಬ ಕೋವಿಡ್ ಕಳ್ಳ. ಸುಧಾಕರ್‌ನನ್ನು ಜೈಲಿಗೆ ಹಾಕುವವರೆಗೂ ಬಿಡಲ್ಲ. ತಾಕತ್ತು, ದಮ್ಮು ಇದ್ರೆ ಬಚಾವ್ ಆಗು ನೋಡೋಣ ಎಂದು ಕೆ. ಸುಧಾಕರ್ ಅವರ ಮಾತಿಗೆ ಸವಾಲ್ ಹಾಕುವ ಮೂಲಕ ಪ್ರತಿಕ್ರಿಯಿಸಿದ್ದಾರೆ.
ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ 7-8 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಸಂಸದರು ಖರ್ಚು ಮಾಡಿ ಕಾಂಗ್ರೆಸ್ ಸದಸ್ಯರನ್ನು ಖರೀದಿ ಮಾಡಿದ್ದಾರೆ. ನನ್ನ ಒಂದು ಕೂದಲನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಹೆಣಗಳ ಮೇಲೆ ದುಡ್ಡು ಮಾಡಿ ನಗರಸಭೆ ಚುನಾವಣೆಯಲ್ಲಿ ಹಾಕಿದ್ದಾರೆ. ನಮ್ಮ ಬಳಿ ಹಣ ಇಲ್ಲ. ನಿನ್ನ ಅಖಾಡದಲ್ಲಿ ಬಂದು ನಾನು ನಿನ್ನನ್ನು ಹೊಡಿದಿದ್ದೇನೆ. ನಾನು ಒಬ್ಬ ಗಂಡಸು. ಮುಂದಿನ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸುತ್ತೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ತಾಯಿಯ ನೆನಪು ಹಂಚಿಕೊಂಡ ನಟ ಜಗ್ಗೇಶ್