ಮೈಸೂರು: ರಾತ್ರೋರಾತ್ರಿ ಅರಮನೆ ಆವರಣಕ್ಕೆ ಬಂದು ದಸರಾ ಆನೆಗಳನ್ನು (Dasara Elephants) ತಬ್ಬಿಕೊಂಡು ರೀಲ್ಸ್ ಮಾಡಿರುವ ಘಟನೆ ಮೈಸೂರಿನ (Mysuru) ಅರಮನೆ ಆವರಣದಲ್ಲಿ (Palace Ground) ನಡೆದಿದೆ.
ಯುವತಿಯೋರ್ವಳು ದಸರಾ ಆನೆಗಳನ್ನು ತಬ್ಬಿಕೊಂಡು ರೀಲ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಇದನ್ನೂ ಓದಿ: ಸುಪ್ರೀಂ ಅಂಗಳಕ್ಕೆ ದಸರಾ ಉದ್ಘಾಟನೆ – ನಾಳೆ ತುರ್ತು ವಿಚಾರಣೆ
ರಾತ್ರೋರಾತ್ರಿ ಯಾರು ಇಲ್ಲದ ವೇಳೆ ಕರಿಕಲ್ಲುತೊಟ್ಟಿ ಮೂಲಕ ಅರಮನೆ ಆವರಣಕ್ಕೆ ಎರಡು ಕಾರುಗಳಲ್ಲಿ ಪ್ರವೇಶ ಪಡೆದಿರುವ ಯುವತಿ ಆನೆಗಳು ವಾಸ್ತವ್ಯ ಹೂಡಿರುವ ಸ್ಥಳಕ್ಕೆ ಹೋಗಿ ಫೋಟೊಶೂಟ್ ಮಾಡಿಸಿದ್ದಾಳೆ. ಮೊಬೈಲ್‌ನ ಫ್ಲ್ಯಾಶ್ ಲೈಟ್ ಬಳಸಿಕೊಂಡು ರೀಲ್ಸ್ ಮಾಡಿ, ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಳೆ.
ಅರಮನೆ ನಿಯಮಗಳ ಪ್ರಕಾರ, ಆನೆಗಳು ವಾಸ್ತವ್ಯ ಹೂಡಿರುವ ಸ್ಥಳಕ್ಕೆ ರಾತ್ರಿ ವೇಳೆ ಯಾರು ಹೋಗುವಂತಿಲ್ಲ. ಫ್ಲ್ಯಾಶ್ ಲೈಟ್‌ಗಳನ್ನ ಬಳಸಿ ಫೋಟೊಶೂಟ್ ಮಾಡುವಂತಿಲ್ಲ. ಸದ್ಯ ಈ ವಿಡಿಯೋ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ಅರಣ್ಯ ಅಧಿಕಾರಿಗಳು ಪ್ರಭಾವಿಗಳ ಮುಂದೆ ಮಂಡಿಯೂರಿ ಕಾಡು ಪ್ರಾಣಿಗಳ ಜೊತೆ ಚೆಲ್ಲಾಟಕ್ಕಿಳಿದಿದ್ದಾರೆ ಎನ್ನುವ ಪ್ರಶ್ನೆ ಮೂಡಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಯುವತಿ ವಿಡಿಯೋ ಡಿಲೀಟ್ ಮಾಡಿದ್ದಾಳೆ.ಇದನ್ನೂ ಓದಿ: ಇಂದು ಸಿಂಹಾಸನ ಜೋಡಣೆ ಕಾರ್ಯ – ಮೈಸೂರು ಅರಮನೆ ಅರ್ಧ ದಿನ ಪ್ರವಾಸಿಗರಿಗೆ ನಿರ್ಬಂಧ
 


 
		 
		 
		 
		 
		
 
		 
		 
		 
		