LatestMain PostNational

ಚಲಿಸುವ ಕಾರಿನ ಬಾನೆಟ್ ಮೇಲೆ ಕೂತು ಯುವತಿ ಜಾಲಿ ರೈಡ್ – ವಾಹನ ಪೊಲೀಸರ ವಶಕ್ಕೆ

ಲಕ್ನೋ: ವೇಗವಾಗಿ ಚಲಿಸುತ್ತಿದ್ದ ಕಾರಿನ ಬಾನೆಟ್ (Car Bonnet) ಮೇಲೆ ಕುಳಿತು ಯುವತಿಯೊಬ್ಬಳು (Young Woman) ಜಾಲಿ ರೈಡ್ ಮಾಡಿದ್ದಾಳೆ. ಅಪಾಯಕಾರಿ ರೀತಿಯಲ್ಲಿ ಕಾರಿನ ಮೇಲೆ ಕೂತು ಸ್ಟಂಟ್ ಮಾಡಿದ ಯುವತಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಆಕೆಗೆ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ.

ಅಪಾಯಕರ ರೀತಿಯಲ್ಲಿ ಯುವತಿ ಸ್ಕಾರ್ಪಿಯೋ ಕಾರಿನ ಬಾನೆಟ್ ಮೇಲೆ ಕೂತು ಜಾಲಿ ರೈಡ್ ಮಾಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ನೋಯ್ಡಾದಲ್ಲಿ (Noida) ನಡೆದಿದೆ. ಯುವತಿ ಅಪಾಯಕರ ರೀತಿಯಲ್ಲಿ ಸ್ಟಂಟ್ ಮಾಡಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ಪೊಲೀಸರು ಎಚ್ಚೆತ್ತುಕೊಂಡು ಯುವತಿ ಮೇಲೆ ಕಠಿಣ ಕ್ರಮವನ್ನು ಕೈಗೊಂಡಿದ್ದಾರೆ. ಇದನ್ನೂ ಓದಿ: ನನ್ನ ಹೆಂಡತಿಗೆ ಮೊಟ್ಟೆನೂ ಬೇಯಿಸೋಕೆ ಬರಲ್ಲ: ಸೀದು ಹೋದ ಮೊಟ್ಟೆ ಹಂಚಿಕೊಂಡ ರವೀಂದ್ರ

ಚಲಿಸುವ ಕಾರಿನ ಬಾನೆಟ್ ಮೇಲೆ ಕೂತು ಯುವತಿ ಜಾಲಿ ರೈಡ್ - ವಾಹನ ಪೊಲೀಸರ ವಶಕ್ಕೆ

ವೈರಲ್ ವೀಡಿಯೋವನ್ನು ಆಧರಿಸಿಕೊಂಡು ಸೆಕ್ಟರ್ 24 ಪೊಲೀಸ್ ಠಾಣೆಯ ಪೊಲೀಸರು ಯುವತಿಯನ್ನು ಮತ್ತು ಕಾರನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಶೋಕಿಗೆ ಕಾರು, ಕದಿಯೋದು ಮಾತ್ರ ಬಲ್ಬ್ – ಕಿರಾತಕರ ಕೈಚಳಕ ಕ್ಯಾಮೆರಾದಲ್ಲಿ ಸೆರೆ

Live Tv

Leave a Reply

Your email address will not be published. Required fields are marked *

Back to top button