ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಮದ್ಯವ್ಯಸನಿ ಮಹಿಳೆ (Alcohol Woman) ಯೊಬ್ಬಳು ಯುವಕನನ್ನು ಹತ್ಯೆಗೈದ ಘಟನೆ ಬೆಳಗಾವಿಯ ಚವ್ಹಾಟ್ ಗಲ್ಲಿಯಲ್ಲಿ ನಡೆದಿದೆ.
ನಾಗರಾಜ್ ರಾಗಿಪಾಟೀಲ್ (25) ಹತ್ಯೆಯಾದ ಯುವಕ. ಬೆಳಗಾವಿ (Belagavi) ತಾಲೂಕಿನ ತಾರಿಹಾಳ ನಿವಾಸಿಯಾಗಿರುವ ಈತನನ್ನು, ಕಂಗ್ರಾಳಿ ಕೆ.ಹೆಚ್. ಗ್ರಾಮದ ನಿವಾಸಿ ಜಯಶ್ರೀ ಪವಾರ್(40) ಭಾನುವಾರ ರಾತ್ರಿ ಹತ್ಯೆಗೈದಿದ್ದಾಳೆ. ಇದನ್ನೂ ಓದಿ: ಮದುವೆ ಮನೆಯಲ್ಲಿ ಸಾವಿನ ಸೂತಕ – ಕುದಿಯುವ ರಸಂ ಪಾತ್ರೆಗೆ ಬಿದ್ದು ಯುವಕ ಸಾವು
ಮಹಾರಾಷ್ಟ್ರ(Maharastra) ದ ಕರಾಡ್‍ನಲ್ಲಿ ಗೌಂಡಿ ಕೆಲಸ ಮಾಡುತ್ತಿದ್ದ ನಾಗರಾಜ್, ಸ್ವಗ್ರಾಮ ತಾರಿಹಾಳದಲ್ಲಿ ರಾಮೇಶ್ವರ ದೇವರ ಜಾತ್ರೆಗೆ ಆಗಮಿಸಿದ್ದನು. ಭಾನುವಾರ ಸ್ನೇಹಿತನ ಜೊತೆ ಬಟ್ಟೆ ತರಲು ಬೆಳಗಾವಿ ನಗರಕ್ಕೆ ಆಗಮಿಸಿದ್ದು, ಚವ್ಹಾಟ ಗಲ್ಲಿ ಕಾರ್ನರ್‍ನಲ್ಲಿ ಸ್ನೇಹಿತನ ಜೊತೆ ನಿಂತಿದ್ದನು.
ಹೀಗೆ ನಿಂತಿದ್ದವನ ಬಳಿ ಬಂದ ಮದ್ಯವ್ಯಸನಿ ಜಯಶ್ರಿ, ಮೊಬೈಲ್ (Mobile) ನೀಡುವಂತೆ ಕಿರಿಕ್ ಮಾಡಿದ್ದಾಳೆ. ಯಾಕೆ ಮೊಬೈಲ್ ಎಂದು ಪ್ರಶ್ನಿಸುತ್ತಿದ್ದಂತೆಯೇ ಜಯಶ್ರೀ ಪವಾರ್ ಚಾಕುವಿನಿಂದ ನಾಗರಾಜ್ ಎದೆಗೆ ಚುಚ್ಚಿದ್ದಾಳೆ. ಕೂಡಲೇ ಗಾಯಾಳು ನಾಗರಾಜ್‍ನನ್ನ ಸ್ನೇಹಿತ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದನು.
ಆದರೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಾಗರಾಜ್ ಸಾವನ್ನಪ್ಪಿದ್ದಾನೆ. ಈ ಘಟನೆ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.