ಶಿವಮೊಗ್ಗ: ಹಿಂದೂ ಯುವತಿಯರನ್ನು ಅನ್ಯಕೋಮಿನ ಯುವಕರ ಗುಂಪೊಂದು ಚುಡಾಯಿಸುತಿತ್ತು. ಅಲ್ಲೇ ಇದ್ದ ಯುವಕನೋರ್ವ ಯುವತಿಯರನ್ನು ಏಕೆ ಚುಡಾಯಿಸುತ್ತೀರಾ ಎಂದು ಪ್ರಶ್ನಿಸಿದ್ದಕ್ಕೆ ಯುವಕನ ಮೇಲೆ ಅನ್ಯಕೋಮಿನ ಯುವಕರ ಗುಂಪು ಹಲ್ಲೆ ನಡೆಸಿದ ಘಟನೆ ಶಿವಮೊಗ್ಗದ ಬಾಲರಾಜ್ ಅರಸು ರಸ್ತೆಯ ಮಥುರಾ ಪ್ಯಾರಡೈಸ್ ಹೋಟೆಲ್ ಬಳಿ ನಡೆದಿದೆ.
ಹಲ್ಲೆಗೊಳಗಾದ ಯುವಕನನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಹರ್ಷ(18) ಎಂದು ಗುರುತಿಸಲಾಗಿದೆ. ಯುವಕನ ಮೇಲೆ ಹಲ್ಲೆ ನಡೆಸಿದ ಅನ್ಯಕೋಮಿನ ಯುವಕರ ಗುಂಪು ತಾವು ತಂದಿದ್ದ ದ್ವಿಚಕ್ರ ವಾಹನವನ್ನು ಸ್ಥಳದಲ್ಲೇ ಬಿಟ್ಟು ಆಟೋ ಹತ್ತಿಕೊಂಡು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಒಟ್ಟು 773 – ಬೆಂಗ್ಳೂರಲ್ಲಿ 621 ಕೇಸ್, ಗದಗದಲ್ಲಿ ಏಕೈಕ ಮರಣ ಪ್ರಕರಣ
ಹಲ್ಲೆಗೊಳಗಾದ ಯುವಕ ಹರ್ಷನನ್ನು ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ನಂತರ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ಯುವಕನಿಂದ ಮಾಹಿತಿ ಕಲೆ ಹಾಕಿದ್ದಾರೆ. ಹಲ್ಲೆ ಮಾಡಿದವರು ಒಟ್ಟು 8 ಮಂದಿ ಇದ್ದರು ಎಂದು ಹರ್ಷ ಪೊಲೀಸರ ಬಳಿ ತಿಳಿಸಿದ್ದಾರೆ. ಇದನ್ನೂ ಓದಿ: ಚಲಿಸುತಿದ್ದ ಕಾರಿನಲ್ಲೇ ಹೃದಯಾಘಾತ – ಸ್ಥಳದಲ್ಲೇ ಸಾವನ್ನಪ್ಪಿದ ಇಂಜಿನಿಯರ್