ಬೆಂಗಳೂರು: ವೃದ್ಧೆಯನ್ನು ಸೆಕ್ಸ್ ಗೆ ಪೀಡಿಸಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಅಶೋಕ್ ಬಂಧಿತ ಆರೋಪಿ. ಈತ ಖಾಸಗಿ ಆಸ್ಪತ್ರೆ ಸಿಟಿ ಸ್ಕ್ಯಾನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಆಗಸ್ಟ್ 3 ರಂದು ವೃದ್ಧೆಯೊಬ್ಬರು ಅನಾರೋಗ್ಯದಿಂದ ಹೆಬ್ಬಾಳದಲ್ಲಿರೋ (Hebbal Hospital) ಆಸ್ಪತ್ರೆಗೆ ದಾಖಲಾಗಿದ್ದರು.
ಆಗಸ್ಟ್ 4 ಬೆಳಗ್ಗಿನ ಜಾವ 1:30ರ ವೇಳೆಗೆ ವೃದ್ಧೆಯನ್ನು ಸಿಟಿ ಸ್ಕ್ಯಾನ್‍ಗೆ ಕರೆದೊಯ್ದು ಕೃತ್ಯ ಎಸಗಿದ್ದಾನೆ. ಈ ಹಿನ್ನೆಲೆಯಲ್ಲಿ ಸಿಟಿ ಸ್ಕ್ಯಾನ್ ಮೆಷಿನ್ ಮೇಲೆ ಮಲಗಿಸಿ ವಿವಸ್ತ್ರಗೊಳಿಸಿದ್ದ. ಬಳಿಕ ಸೆಕ್ಸ್ ಗೆ ಸಹಕರಿಸುವಂತೆ ಪೀಡಿಸಿದ್ದಾಗಿ ವೃದ್ಧೆ ಆರೋಪಿಸಿ ದೂರು ದಾಖಲಿಸಿದ್ದರು. ಇದನ್ನೂ ಓದಿ: ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ ಕಾರು ಡಿಕ್ಕಿ – ಬೈಕ್ ಸವಾರ ಸಾವು
ಸದ್ಯ ಸಂತ್ರಸ್ತೆ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]