ದುಬೈ: ಕೆಲದಿನಗಳ ಹಿಂದೆ ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ನನ್ನ ಕೊನೆಯ ಪಂದ್ಯವನ್ನು ಆಡುತ್ತೇನೆ ಎಂದಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಇದೀಗ ಇನ್ಮುಂದೆ ಚೆನ್ನೈ ಪರ ಆಡುತ್ತೀನಾ ಇಲ್ಲವೋ ಗೊತ್ತಿಲ್ಲ ಎಂದು ಅಚ್ಚರಿಯ ಹೇಳಿಕೆ ನೀಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
Advertisement
ದುಬೈನಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ಐಪಿಎಲ್‍ನ ಪಂಜಾಬ್ ವಿರುದ್ಧದ ಟಾಸ್ ವೇಳೆ ಮಾತನಾಡಿದ ಧೋನಿ, ನೀವು ನನ್ನನ್ನು ಹಳದಿ ಜೆರ್ಸಿತೊಟ್ಟು ಇನ್ಮುಂದೆ ಚೆನ್ನೈ ಪರ ನೋಡುತ್ತಿರೋ ಇಲ್ಲವೋ ಗೊತ್ತಿಲ್ಲ. ಮುಂದಿನ ಐಪಿಎಲ್ ಆವೃತ್ತಿಗೆ 2 ಹೊಸ ತಂಡಗಳು ಸೇರ್ಪಡೆಗೊಳ್ಳುವುದರಿಂದಾಗಿ ಹಲವು ಬದಲಾವಣೆಗಳು ಸಂಭವಿಸಲಿದ್ದು, ಫ್ರಾಂಚೈಸಿಗಳು ಎಷ್ಟು ವಿದೇಶಿ ಆಟಗಾರರು ಮತ್ತು ಎಷ್ಟು ಭಾರತೀಯ ಆಟಗಾರರನ್ನು ಉಳಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ಮುಂದಿನ ಐಪಿಎಲ್‍ನಲ್ಲಿ ಏನಾಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಆ ಒಂದು ಆಸೆಗಾಗಿ ಧೋನಿ ಈ ಬಾರಿ ಐಪಿಎಲ್‍ಗೆ ನಿವೃತ್ತಿ ಘೋಷಿಸಿಲ್ಲ
Advertisement
Advertisement
ಧೋನಿಯ ಈ ರೀತಿಯ ಹೇಳಿಕೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 2022ರ ಐಪಿಎಲ್‍ನಲ್ಲಿ ಕಾಣಿಸಿಕೊಳ್ಳುವ 2 ಹೊಸ ತಂಡಗಳ ಪೈಕಿ ಒಂದು ತಂಡ ಧೋನಿಯನ್ನು ಈಗಾಗಲೇ ಆಹ್ವಾನಿಸಿದೆ ಎಂದು ವರದಿಯಾಗಿದ್ದು, ಈ ಮೂಲಕ 2022ರ ಆವೃತ್ತಿಯ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ, ಧೋನಿ ಚೆನ್ನೈ ತಂಡವನ್ನು ತೊರೆಯುವ ಬಗ್ಗೆ ಮತ್ತು ಹೊಸ ತಂಡಗಳ ಸೇರ್ಪಡೆ ಬಗ್ಗೆ ಕುತೂಹಲ ಹೆಚ್ಚಾಗಿದೆ. ಇದನ್ನೂ ಓದಿ: ಪ್ರಥಮ ದರ್ಜೆ ಕ್ರಿಕೆಟ್‍ಗೆ ವಿದಾಯ ಘೋಷಿಸಿದ ಕನ್ನಡಿಗ ಅಭಿಮನ್ಯು ಮಿಥುನ್
Advertisement
ಈ ನಡುವೆ ಧೋನಿ ಧೋನಿಯ ಐಪಿಎಲ್‍ನಲ್ಲಿ ಬ್ಯಾಟಿಂಗ್ ಪ್ರದರ್ಶನ ನೋಡಿದರೆ ಧೋನಿ ಹಿಂದಿನ ಚಾರ್ಮ್ ಕಳೆದುಕೊಂಡಂತೆ ಕಾಣಿಸುತ್ತಿದ್ದು, ಐಪಿಎಲ್‍ಗೆ ನಿವೃತ್ತಿ ಘೋಷಿಸದೆ ಸಿಎಸ್‍ಕೆ ತಂಡದಿಂದ ಹೊರ ನಡೆದರೆ, ಧೋನಿಯನ್ನು ಖರೀದಿಸಲು ಯಾವ ತಂಡ ಮುಂದೆ ಬರಬಹುದು ಎಂಬ ಅಂಶ ಕೂಡ ಅಭಿಮಾನಿಗಳಲ್ಲಿ ಮೂಡಿದೆ. ಈ ನಡುವೆ ಧೋನಿ ನಡೆ ಅನುಮಾನಗಳೆಡೆಗೆ ಎಂಬಂತಾಗಿದೆ. ಇದನ್ನೂ ಓದಿ: ಗೆಳತಿಗೆ ಸ್ಟೇಡಿಯಂನಲ್ಲೇ ಪ್ರಪೋಸ್ ಮಾಡಿದ ದೀಪಕ್ ಚಹರ್