ದುಬೈ: ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ದೀಪಕ್ ಚಹರ್ ಗುರುವಾರ ಗೆಳತಿ ಜಯಾ ಭಾರದ್ವಾಜ್ ಅವರಿಗೆ ಸ್ಟೇಡಿಯಂನಲ್ಲೇ ಪ್ರೇಮ ನಿವೇದನೆ ಮಾಡಿದ್ದಾರೆ.
ಪಂಜಾಬ್ ಕಿಂಗ್ಸ್ ಪಂದ್ಯದ ಬಳಿಕ ಚಹರ್ ಎಲ್ಲರೆದುರೇ ಪ್ರಪೋಸ್ ಮಾಡಿದ್ದಾರೆ. ದೀಪಕ್ ಪ್ರಪೋಸ್ ಮಾಡಲು ಮುಂದಾಗುತ್ತಿದ್ದಂತೆ ಜಯಾ ಒಮ್ಮೆ ಶಾಕ್ ಆಗಿದ್ದಾರೆ.
View this post on Instagram
ನಟ ಮತ್ತು ಬಿಗ್‌ಬಾಸ್ 13ರ ವಿಜೇತ ಸಿದ್ಧಾರ್ಥ್ ಭಾರದ್ವಾಜ್ ಅವರ ಸಹೋದರಿಯಾಗಿರುವ ದೆಹಲಿಯ ಜಯಾ ಕಾರ್ಪೊರೇಟ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ಇಬ್ಬರೂ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದು, ದೀಪಕ್ ಚಹರ್ ಗೆಳತಿ ಜಯಾ ಅವರನ್ನು ಟೀಂ ಇಂಡಿಯಾದ ಆಟಗಾರರಿಗೆ ಪರಿಚಯಿಸಿದ್ದಾರೆ ಎಂದು ವರದಿಯಾಗಿದೆ.
ಬಾಲಿವುಡ್ ಮಾಡೆಲ್ ಮತ್ತು ನಟಿ ಮಾಲ್ತಿ ಚಹರ್ ಅವರ ತಮ್ಮನಾಗಿರುವ ದೀಪಕ್ ಚಹರ್ ಅವರು ಕ್ರಿಕೆಟಿಗ ರಾಹುಲ್ ಚಹರ್ ಅವರ ಅಣ್ಣನಾಗಿದ್ದಾರೆ. ಐಪಿಎಲ್ ಎರಡನೇ ಆವೃತ್ತಿ ಸಮಯದಲ್ಲಿ ದೀಪಕ್ ಜೊತೆ ಜಯಾ ಸಹ ಯುಎಇಗೆ ತೆರಳಿದ್ದರು. ದೀಪಕ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ ʼSpecial momentʼ ಎಂದು ಬರೆದು ಹೃದಯದ ಎಮೋಜಿ ಹಾಕಿದ್ದಾರೆ.