ಲಕ್ನೋ: ಟೀಂ ಇಂಡಿಯಾ (Team India) ಮತ್ತು ಇಂಗ್ಲೆಂಡ್ (England) ವಿರುದ್ಧದ ಪಂದ್ಯದ ವೇಳೆ ರವಿಶಾಸ್ತ್ರಿ (Ravi Shastri) ಕಾಮೆಂಟರಿ ಮಾಡುವಾಗ ನಿಮ್ಮನ್ನು ಇನ್ನೂ ಮುಂದೆಯೂ ಹಾಲಿ ಚಾಂಪಿಯನ್ ಎಂದು ಕರೆದುಕೊಳ್ಳುತ್ತೀರಾ? ಎಂದು ಕುಟುಕಿದ್ದಾರೆ.
ಭಾನುವಾರದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬುಮ್ರಾ ಬೌಲಿಂಗ್ ದಾಳಿಯ ನೆರವಿನಿಂದ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧ 100 ರನ್‍ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಬರೋಬ್ಬರಿ 20 ವರ್ಷಗಳ ಬಳಿಕ ವಿಶ್ವಕಪ್ (World Cup )ಟೂರ್ನಿಯಲ್ಲಿ ಆಂಗ್ಲರನ್ನ ಸೋಲಿಸಿ ಜಯದ ಮಾಲೆ ಧರಿಸಿದೆ. ಇದರೊಂದಿಗೆ 6 ಪಂದ್ಯಗಳಲ್ಲಿ ಜಯ ಸಾಧಿಸಿ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ. ನಿರಂತರ ಸೋಲಿನ ಸುಳಿಗೆ ಸುಲುಕಿರುವ ಇಂಗ್ಲೆಂಡ್ ತಂಡದ ವಿರುದ್ಧ ಕಮೆಂಟ್ ಮಾಡಿ ಕಾಲೆಳೆದಿದ್ದಾರೆ. ಇದನ್ನೂ ಓದಿ: ಬಾತುಕೋಳಿ ತಲೆಗೆ ಕೊಹ್ಲಿ ಫೋಟೊ ಹಾಕಿ ತಗ್ಲಾಕ್ಕೊಂಡ ಇಂಗ್ಲೆಂಡ್ ಫ್ಯಾನ್ಸ್ – ಇಂಗ್ಲೆಂಡ್ ಆರ್ಮಿಗೆ ಭಾರತ್ ಆರ್ಮಿ ಕೌಂಟರ್
Advertisement
Advertisement
ಬಾಂಗ್ಲಾದೇಶ ವಿರುದ್ಧದ ಗೆಲುವನ್ನು ಹೊರತುಪಡಿಸಿ ಇಂಗ್ಲೆಂಡ್‍ನ ಎಲ್ಲಾ ಐದು ಪಂದ್ಯಗಳಲ್ಲಿ ಸೋಲು ಕಂಡಿದೆ. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ 9 ವಿಕೆಟ್‍ಗಳಿಂದ ಸೋಲಿಸಿತ್ತು. ಅಫ್ಘಾನಿಸ್ತಾನ 69 ರನ್‍ಗಳಿಂದ ಆಂಗ್ಲರಿಗೆ ಶಾಕ್ ಕೊಟ್ಟಿತ್ತು. ಸೌತ್ ಆಫ್ರಿಕಾ ತಂಡ ಅವರನ್ನು 229 ರನ್‍ಗಳಿಂದ ಸೋಲುಣಿಸಿತ್ತು. ಶ್ರೀಲಂಕಾ ವಿರುದ್ಧ ಎಂಟು ವಿಕೆಟ್‍ಗಳಿಂದ ಸೋಲು ಕಂಡಿತ್ತು.
Advertisement
Advertisement
ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ 2003 ರಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು. ಉಳಿದಂತೆ 2007, 2011, 2015 ಮತ್ತು 2019ರಲ್ಲಿ ಭಾರತ, ಇಂಗ್ಲೆಂಡ್ ಎದುರು ಸೋಲು ಅನುಭವಿಸಿತ್ತು. ಹೀಗಾಗಿ ಕಳೆದ 20 ವರ್ಷಗಳಿಂದ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಆಂಗ್ಲರ ವಿರುದ್ಧ ಗೆಲುವು ಸಿಕ್ಕಿರಲಿಲ್ಲ. ಈಗ 100 ರನ್‍ಗಳ ಭರ್ಜರಿ ಜಯದೊಂದಿಗೆ ಸೆಮಿಫೈನಲ್‍ನತ್ತ ಸಾಗುತ್ತಿದೆ. ಇದನ್ನೂ ಓದಿ: ವಿಶ್ವಕಪ್‌ನ ಟಾಪ್ 7 ತಂಡಗಳು 2025 ರ ಚಾಂಪಿಯನ್ಸ್ ಟ್ರೋಫಿಗೆ – ಪಾಕಿಸ್ತಾನ ಡೈರೆಕ್ಟ್ ಎಂಟ್ರಿ
Web Stories