ರಾಯಚೂರು: ನಗರದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಇಡೀ ಕನ್ನಡ ಚಿತ್ರರಂಗವೇ ಸ್ಪಂದಿಸುತ್ತಿದೆ. ನಟ ಭುವನ್ ಹಾಗೂ ನಟಿ ಹರ್ಷಿಕಾ ಪೂಣಚ್ಚ ಮೃತಳ ಪೋಷಕರಿಗೆ ಸಾಂತ್ವಾನ ಹೇಳಲು ರಾಯಚೂರಿಗೆ ಬಂದ ಬೆನ್ನಲ್ಲೇ ಹಿರಿಯ ನಿರ್ದೇಶಕ ಯೋಗರಾಜ್ ಭಟ್ ಸ್ವಲ್ಪ ಖಾರವಾಗಿಯೇ ಟ್ವೀಟ್ ಮಾಡಿದ್ದಾರೆ.
Advertisement
ವಿದ್ಯಾರ್ಥಿನಿ ಸಾವನ್ನ ಖಂಡಿಸಿರುವ ಯೋಗರಾಜ್ ಭಟ್ ಮೃತಳ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಜೊತೆಗೆ ನಿರ್ಭಯಾ ಪ್ರಕರಣದಲ್ಲಿ ಇಡೀ ದೇಶವೇ ಎದ್ದು ನಿಂತಿತ್ತು. ಆದ್ರೆ ಮಧು ಪ್ರಕರಣದಲ್ಲೀಗ ಬೆಂಗಳೂರು ಮಲಗಿದೆ ಅಂತ ಕಿಡಿಕಾರಿದ್ದಾರೆ. ಮತದಾನದಲ್ಲಿ ಜನ ಮಗ್ನರಾಗಿದ್ದರು ಅಂದುಕೊಳ್ಳೋಣ ಅಂದರೆ ಸಿಲಿಕಾನ್ ಸಿಟಿಯಲ್ಲಿ ಮತದಾನವಾಗಿದ್ದೇ ಶೇ.45% ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ತಡವಾದರೂ ಪರವಾಗಿಲ್ಲ ಮುಗ್ಧ ಹೆಣ್ಣುಮಗಳ ಅತ್ಯಾಚಾರ ಮತ್ತು ಕೊಲೆಯಂತ ಪ್ರಕರಣಕ್ಕೆ ಪ್ರತಿಕ್ರಿಯಿಸಿ ಅಂತ ನಿರ್ದೇಶಕ ಯೋಗರಾಜ್ ಭಟ್ ಕರೆ ನೀಡಿದ್ದಾರೆ. ಇದನ್ನೂ ಓದಿ:#JusticeForMadhu – ಕೀಚಕರಿಗೆ ತಕ್ಕ ಶಾಸ್ತಿಯಾಗಬೇಕು ಎಂದ ದರ್ಶನ್
Advertisement
#JusticeForMadhu pic.twitter.com/zMAfiQpm2D
— ʏᴏɢᴀʀᴀᴊ ʙʜᴀᴛ (@yogarajofficial) April 20, 2019
Advertisement
ಹೂವುಗಳನ್ನ ಸುಡಲು ಬರುವ ಬೆಂಕಿಯನ್ನು ಒಂದೇ ಒಂದು ಕಿಡಿ ಕೂಡ ಉಳಿಯದಂತೆ ನಂದಿಸಲು ಮುಂದಾಗಿ. ಮಧು, ಕಂದಮ್ಮ ನೀ ಇಲ್ಲದಿದ್ದರೂ ನಿನಗೆ ನ್ಯಾಯ ಸಿಗಲಿ. ಹೋಗಿ ಬಾ ತಾಯಿ ಅಂತ ಯೋಗರಾಜ್ ಭಟ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದು ಟ್ವೀಟ್ ಮಾಡಿ ವಿಷಾದ ವ್ಯಕ್ತಪಡಿಸಿದ್ದಾರೆ.