Toxic: ಯಶ್ ಸಿನಿಮಾ ಎಲ್ಲಿಗೆ ಬಂತು? ಇಲ್ಲಿದೆ ಬಿಗ್ ಅಪ್‌ಡೇಟ್

Public TV
2 Min Read
yash

ಶ್ (Yash) ಮುಂದಿನ ಸಿನಿಮಾ ಅನೌನ್ಸ್ ಮಾಡಿದ ದಿನದಿಂದ ಈ ಪ್ರಾಜೆಕ್ಟ್ ಬಗ್ಗೆ ದಿನಕೊಂದು ಸುದ್ದಿ ಚಾಲ್ತಿಗೆ ಬರ್ತಿದೆ. ಕರೀನಾ ಕಪೂರ್ ಹೆಸರು ಕೆಲವು ದಿನ ಸದ್ದು ಮಾಡ್ತು ಈಗ ಶಾರುಖ್ ಖಾನ್ (Sharukh Khan) ಕಾಣಿಸಿಕೊಳ್ತಿದ್ದಾರೆ. ಅಸಲಿಗೆ ‘ಟಾಕ್ಸಿಕ್’ನಲ್ಲಿ (Toxic Film) ಈ ಕಲಾವಿದರು ಕೆಲಸ ಮಾಡ್ತಾರಾ? ಮಾತುಕತೆ ನಡೆದಿದ್ಯಾ? ಯಾರು ಯಾರು ಈ ಸಿನಿಮಾದಲ್ಲಿ ಇರುತ್ತಾರೆ? ಯಾವಾಗ ಮುಹೂರ್ತ ಆಗಲಿದೆ? ಈ ಬಗ್ಗೆ ಇಲ್ಲಿದೆ ಮಾಹಿತಿ.

Yash 2

ಕೆಜಿಎಫ್ (KGF) ಬಳಿಕ ರಾಕಿಂಗ್ ಸ್ಟಾರ್ ಯೋಜನೆಗಳಲ್ಲಿ ಬಹಳಷ್ಟು ಬದಲಾವಣೆಗಳು ಕಂಡು ಬರುತ್ತಿವೆ. ಮುಂದಿನ ಸಿನಿಮಾ ಬಗ್ಗೆ ಯಶ್ ಮಾಡ್ತಿರುವ ಪ್ಲ್ಯಾನಿಂಗ್ ಬಹಳಷ್ಟು ಜನರ ನಿದ್ದೆ ಕೆಡಿಸಿದೆ. ಯಶ್ ಸಿನಿಮಾ ಅನೌನ್ಸ್ ಮಾಡಿದ ಕ್ಷಣದಿಂದ ‘ಟಾಕ್ಸಿಕ್’ ಬಗ್ಗೆ ದಿನಕ್ಕೊಂದು ಅಪ್‌ಡೇಟ್ ಬರುತ್ತಿದೆ. ಆದರೆ ಅದರ ಬಗ್ಗೆ ಯಶ್ ಎಲ್ಲೂ ಮಾತನಾಡ್ತಿಲ್ಲ. ಬದಲಾಗಿ ತಮ್ಮ ಸಿನಿಮಾದ ಕೆಲಸ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಗದಗದಲ್ಲಿ ನಡೆದ ಕರೆಂಟ್‌ ದುರಂತದಿಂದ ಅಭಿಮಾನಿಗಳ ಅಗಲಿಕೆಯಿಂದ ನೊಂದಿದ್ದ ಯಶ್ ಈಗ ಮತ್ತೆ ಕೆಲಸದಲ್ಲಿ ಮಗ್ನರಾಗಿದ್ದಾರೆ.

yash 1 1

ಕಳೆದ ಕೆಲವು ದಿನಗಳ ಹಿಂದೆ ಬಾಲಿವುಡ್ ನಟಿ ಕರೀನಾ ಕಪೂರ್ (Kareena Kapoor) ಮತ್ತು ಶಾರುಖ್ ಖಾನ್ (Sharukh Khan) ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸ್ತಾರೆ ಅಂತ ಮಾತು ಶುರುವಾಗಿತ್ತು. ಯಶ್ ಆಗಲಿ ತಂಡದವರಾಗಲಿ ಈ ಬಗ್ಗೆ ಮಾತನಾಡಲಿಲ್ಲ. ಉತ್ತರ ಕೊಡುವ ಬದಲು ಕೆಲಸ ಮುಂದುವರಿಸಿದ್ದರು. ಇದನ್ನೂ ಓದಿ:ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ನಿರ್ದೇಶಕ ಅಭಿಷೇಕ್ ಶೆಟ್ಟಿ

Geethu Mohan Das with yash

ಈ ಬಗ್ಗೆ ಯಶ್ ಆಪ್ತವಲಯದಿಂದ ಬರುತ್ತಿರುವ ಅಪ್‌ಡೇಟ್ ಒಂದೇ ಎಲ್ಲವೂ ಟೈಮ್ ಬಂದಾಗ ರಿವೀಲ್ ಆಗಲಿದೆ. ಸಿನಿಮಾದಲ್ಲಿ ಬಹಳಷ್ಟು ಪಾತ್ರಗಳಿರುತ್ತದೆ. ಎಲ್ಲವೂ ಅಂದು ಕೊಂಡಂತೆ ಆದ್ಮೇಲೆ ತಂಡ ಅಫೀಷಿಯಲ್ ಆಗಿ ಅನೌನ್ಸ್ ಮಾಡುತ್ತಾರೆ. ಅಲ್ಲಿಯವರೆಗೆ ಯಾವುದನ್ನೂ ನಂಬಬೇಡಿ ಅನ್ನೋದು ಯಶ್ ಆಪ್ತವಲಯದಿಂದ ಬರುತ್ತಿರುವ ಸಂದೇಶ. ಅಲ್ಲಿಗೆ ಶಾರುಖ್ ಖಾನ್, ಕರೀನಾ ಕಪೂರ್ ಹೆಸರುಗಳಿಗೆ ಬ್ರೇಕ್ ಹಾಕಬೇಕಿದೆ ಅಷ್ಟೇ.

ಹುಟ್ಟುಹಬ್ಬದಂದು ಅರ್ಧಕ್ಕೆ ಕೆಲಸ ನಿಲ್ಲಿಸಿ ಅಭಿಮಾನಿಗಳ ಮನೆ ಬಾಗಿಲಿಗೆ ಹೋಗಿದ್ದರು ಯಶ್. ಅರ್ಧಕ್ಕೆ ನಿಲ್ಲಿಸಿದ ಆ ಕೆಲಸವನ್ನ ಪೂರ್ತಿ ಮಾಡಿದ್ದಾರೆ. ಶೂಟಿಂಗ್ ಶುರು ಮಾಡಲು ಬೇಕಾದ ಅಂತಿಮ ಹಂತದ ಸಿದ್ಧತೆ ಮಾಡಿಕೊಳ್ತಿದ್ದಾರೆ. ಫೆಬ್ರವರಿ ಅಂತ್ಯದಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ‘ಟಾಕ್ಸಿಕ್’ (Toxic) ಮುಹೂರ್ತ ನಡೆಯಲಿದೆ. ಆಮೇಲೆ ಲಂಡನ್, ಶ್ರೀಲಂಕಾ, ಮಲೇಷಿಯಾದಲ್ಲಿ ಶೂಟಿಂಗ್ ನಡೆಯಲಿದೆ.

Share This Article